ಥೈಲ್ಯಾಂಡ್: ಆನೆ ಮರಿಯೊಂದು ತನ್ನ ಮಾವುತನ ಕಾಲಿನಲ್ಲಿರುವ ಚಪ್ಪಲಿ ತನಗೆ ಬೇಕೆಂದು ಹಠ ಹಿಡಿದು ಕೊನೆಗೆ ಅದು ಹಾಕಿಕೊಳ್ಳುವ ಪ್ರಯತ್ನ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಥೈಲ್ಯಾಂಡ್ ನ ಎಲಿಫೆಂಟ್ ನೇಚರ್ ಪಾರ್ಕ್ ನಲ್ಲಿ `ಸೇವ್ ಎಲಿಫೆಂಟ್ ಫೌಂಡೇಶನ್’ ಅಡಿಯಲ್ಲಿ ಆನೆಗಳನ್ನು ಸಾಕಲಾಗುತ್ತಿದೆ. ಈ ಫೌಂಡೇಶನ್ ಮೂಲಕ ಏಷ್ಯಾದ ಆನೆಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಆನೆಗಳು ಅತಿಯಾದ ಬುದ್ಧಿವಂತಿಕೆಯನ್ನು ಹೊಂದಿರುತ್ತವೆ. ಅದಕ್ಕೆ ಉದಾಹರಣೆ ಎಂಬಂತೆ ಈ ಪುಟ್ಟ ಆನೆ ಮರಿ ಸ್ಲಿಪ್ಪರ್ ಹಾಕಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ.
Advertisement
Advertisement
ಆನೆ ಮರಿ ಮೊದಲಿಗೆ ತನ್ನ ಕೇರ್ ಟೇಕರ್ ಪಾದದಲ್ಲಿರುವ ಸ್ಲಿಪ್ಪರ್ ನ್ನು ತನ್ನ ಸೊಂಡಿಲಿನ ಸಹಾಯದಿಂದ ಪಡೆಯಲು ಪ್ರಯತ್ನ ಮಾಡುತ್ತದೆ. ಕೊನೆಗೆ ಕೇರ್ ಟೇಕರ್ ಸ್ವತಃ ತನ್ನ ಸ್ಲಿಪ್ಪರ್ ಅನ್ನು ಆನೆ ಮರಿಗೆ ಕೊಡುತ್ತಾನೆ. ತನಗೆ ಸಿಕ್ಕ ಸ್ಲಿಪ್ಪರ್ ಹಾಕಿಕೊಳ್ಳುವುದಕ್ಕಾಗಿ ತನಗೆ ಅನುಕೂಲವಾಗುವ ಹಾಗೆ ಧರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ತನ್ನ ಮುಂಗಾಲಿಗೆ ಸ್ಲಿಪ್ಪರ್ ಹಾಕಿಕೊಳ್ಳಲು ನೋಡುತ್ತದೆ. ಆದರೆ ಅದು ಸಾಧ್ಯವಾಗಲ್ಲ, ಮತ್ತೆ ತನ್ನ ಹಿಂಗಾಲುಗಳಿಗೆ ಸಹ ಸ್ಲಿಪ್ಪರ್ ಹಾಕಿಕೊಳ್ಳಲು ಸಹ ಪ್ರಯತ್ನ ಮಾಡಿದರೂ ಅದು ಸಹ ಸಾಧ್ಯವಾಗಲ್ಲ. ಕೊನೆಗೆ ತನ್ನ ಸೊಂಡಿಲಿನಿಂದ ಸ್ಲಿಪ್ಪರ್ ಆ ಕಡೆಯಿಂದ ಈ ಕಡೆಗೆ ತೆಗೆದುಕೊಂಡು ಓಡಾಡುತ್ತದೆ.
Advertisement
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಸೇವ್ ಎಲಿಫೆಂಟ್ ಫೌಂಡೇಶನ್ ಆನೆಗಳನ್ನು ರಕ್ಷಿಸಿ ಎಂಬ ಮನವಿಯನ್ನು ಮಾಡಿಕೊಂಡಿದೆ.
Advertisement