ನವದೆಹಲಿ: ದೆಹಲಿಯಲ್ಲಿ ವಿಶ್ವ ಹಿಂದೂ ಪರಿಷತ್ (VHP) ನಡೆಸುತ್ತಿರುವ ರ‍್ಯಾಲಿಯು (DelhiRally) ಭಾನುವಾರ ದ್ವೇಷ ಭಾಷಣದ ವೇದಿಕೆಯಾಗಿ ಮಾರ್ಪಟ್ಟಿತ್ತು.
ವಿಹೆಚ್‌ಪಿ ಭಾಷಣಕಾರರಲ್ಲಿ ಒಬ್ಬರಾದ ಯೋಗೇಶ್ವರ್ ಆಚಾರ್ಯ ಅವರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ನಮ್ಮ ಮೇಲೆ ದಾಳಿ ಮಾಡುವವರ ಶಿರಚ್ಛೇದ ಮಾಡಬೇಕು. ಅವರ ಕೈಗಳನ್ನು ಕತ್ತರಿಸಬೇಕು. ಇಂತಹ ಅಂಶಗಳಿಂದ ಈಗ ಪಾಠ ಕಲಿಸುವ ಸಮಯ ಬಂದಿದೆ. ಹೆಚ್ಚೆಂದರೆ ನೀವು ಜೈಲಿಗೆ ಹೋಗುತ್ತೀರಿ ಎಂದು ಪ್ರಚೋದಿಸಿದರು. ಇದನ್ನೂ ಓದಿ: ನೈಜೀರಿಯಾದಲ್ಲಿ ಹಡಗು ಮುಳುಗಿ 10 ಸಾವು, 60 ಜನ ನಾಪತ್ತೆ
Advertisement
Advertisement
ನಂತರ ಮಹಂತ್ ನವಲ್ ಕಿಶೋರ್‌ದಾಸ್ ಮಾತನಾಡಿ, ಜನರು ಲೈಸೆನ್ಸ್ ಇರುವ ಬಂದೂಕುಗಳನ್ನು (Guns) ಹೊಂದಿರಬೇಕು. ಒಂದು ವೇಳೆ ಲೈಸೆನ್ಸ್ ಹೊಂದಿರದಿದ್ದರೂ ಚಿಂತೆಯಿಲ್ಲ. ನಿಮ್ಮನ್ನು ಕೊಲ್ಲಲು ಬರುವವರು ಲೈಸೆನ್ಸ್ ತೆಗೆದುಕೊಂಡು ಬರುತ್ತಾರಾ? ಹಾಗಿದ್ದಮೇಲೆ ನಿಮಗೆ ಬಂದೂಕು ಹೊಂದಲು ಪರವಾನಗಿ ಏಕೆ ಬೇಕು? ನಾವೆಲ್ಲರೂ ಒಗ್ಗಟ್ಟಾಗಿದ್ದರೇ ದೆಹಲಿ ಪೊಲೀಸ್ ಆಯುಕ್ತರು (Delhi Police Commissioner) ಸಹ ನಮಗೆ ಚಹಾ ನೀಡುತ್ತಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಸಿನಿ ಸ್ಟೈಲ್‍ನಲ್ಲಿ ಸುಲಿಗೆ ಮಾಡ್ತಿದ್ದ ಖದೀಮರು ಅರೆಸ್ಟ್ – 75 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ವಶಕ್ಕೆ
Advertisement
ದ್ವೇಷ ಭಾಷಣವನ್ನು ಸಮರ್ಥಿಸಿಕೊಂಡಿರುವ ವಿಹೆಚ್‌ಪಿ ವಕ್ತಾರ ವಿನೋದ್ ಬನ್ಸಾಲ್, ನಮ್ಮ ರ‍್ಯಾಲಿ ಜಿಹಾದಿಗಳ ಮನಸ್ಥಿತಿ ವಿರುದ್ಧವೇ ಹೊರತು ಯಾವುದೇ ಸಮುದಾಯದ ವಿರುದ್ಧ ಅಲ್ಲ ಎಂದು ಹೇಳಿದ್ದಾರೆ.