ಗ್ಲ್ಯಾಮರಸ್ ಯುವತಿಯರ (Womens) ಪ್ಯಾಂಟ್‌ಸೂಟ್‌ಗೂ ಕಟೌಟ್ ಲುಕ್ ದೊರಕಿದೆ. ಹೌದು, ಸದಾ ಪ್ರತಿಯೊಂದು ಡ್ರೆಸ್‌ನಲ್ಲೂ ಗ್ಲ್ಯಾಮರ್ ಬಯಸುವ ಹುಡುಗಿಯರನ್ನು ಇವು ಆಕರ್ಷಿಸಿವೆ. ಪ್ಯಾಂಟ್‌ಸೂಟ್‌ಗೂ ಗ್ಲ್ಯಾಮರ್ ಟಚ್ ದೊರಕಿದ್ದು, ಇದೀಗ ಒಂದರ ಹಿಂದೊಂದರಂತೆ ನಾನಾ ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿವೆ. ಕೆಲವೊಮ್ಮೆ ಕ್ರಾಪ್ ಬ್ಲೌಸ್ ಜೊತೆ ಪ್ಯಾಂಟ್‌ಸೂಟ್‌ಗೆ ಮ್ಯಾಚ್ ಮಾಡಿ ಡಿಸೈನರ್‌ಗಳು ಗ್ಲ್ಯಾಮರ್ ಟಚ್ ನೀಡಿದರೇ, ಇದೀಗ ಡಿಸೈನರ್‌ಗಳು ಸೂಟ್‌ಗೆ ಕಟೌಟ್ ಡಿಸೈನ್ ಮಾಡಿ ಡಿಫರೆಂಟ್ ಲುಕ್ ನೀಡುತ್ತಿದ್ದಾರೆ.
Advertisement
ಒಂದೇ ಶೇಡ್‌ನ ಮಾನೋಕ್ರೋಮ್ ಪ್ಯಾಟ್‌ಸೂಟ್‌ಗಳೀಗ ಕಟೌಟ್ ಆಗಿದೆ ಎಂದರೇ, ಆ ಬ್ಲೇಝರ್‌ನ ಕೆಲವು ಭಾಗಗಳಿಗೆ ಕಟೌಟ್ ವಿನ್ಯಾಸ ಮಾಡಲಾಗಿರುತ್ತದೆ. ನೋಡಲು ಇದು ವಿಚಿತ್ರ ಎಂದೆನಿಸಿದರೂ ಪ್ರಯೋಗಾತ್ಮಕವಾಗಿ ಮಾಡಿದ ಈ ಡಿಸೈನ್‌ಗಳು ಇದೀಗ ನಾನಾ ಶೇಡ್‌ಗಳಲ್ಲಿ ಕಂಡು ಬರುತ್ತಿವೆ. ಒಂದಕ್ಕಿಂತ ಒಂದು ಡಿಸೈನ್ ವಿಭಿನ್ನ ವಿನ್ಯಾಸಗಳಲ್ಲಿ ಇತ್ತೀಚೆಗಿನ ಪ್ಯಾಂಟ್‌ಸೂಟ್‌ಗಳಲ್ಲಿ ಸದ್ದು ಮಾಡುತ್ತಿವೆ. ಪ್ಯಾಂಟ್‌ಸೂಟ್‌ನ ಯಾವುದೇ ನಿರ್ದಿಷ್ಟ ಭಾಗವನ್ನು ನೀಟಾಗಿ ಅಂದವಾಗಿ ಕಾಣುವಂತೆ ಈ ಕಟೌಟ್ ಡಿಸೈನ್‌ಗಳು ಆಕರ್ಷಿಸುತ್ತಿವೆ. ಇನ್ನೂ ಕಟೌಟ್ ಪ್ಯಾಂಟ್‌ಸೂಟ್‌ಗಳ (Cut Out Pant Suit) ಯಾವುದೇ ಭಾಗ ಬೇಕಾದರೂ ಕಟ್ ಆದಂತೆ ಕಾಣಿಸಬಹುದು. ಇದಕ್ಕೆ ಇದೇ ಭಾಗವೆಂಬ ರೂಲ್ಸ್ ಇಲ್ಲ. ಇದನ್ನೂ ಓದಿ:ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ
Advertisement
Advertisement
ಮಾನೋಕ್ರೋಮ್ ಹಾಗೂ ಸಾಲಿಡ್ ಶೇಡ್‌ನ ಕಟೌಟ್ ಪ್ಯಾಂಟ್‌ಸೂಟ್‌ಗಳು ಸದ್ಯ ಚಾಲ್ತಿಯಲ್ಲಿವೆ. ಇವು ಸೆಲೆಬ್ರಿಟಿಗಳ ಹಾಗೂ ಮಾಡೆಲ್‌ಗಳ ಫೇವರೇಟ್ ಪ್ಯಾಂಟ್‌ಸೂಟ್ ಆಗಿದೆ. ಅತಿ ಹೆಚ್ಚು ಬಾಲಿವುಡ್ ಹಾಗೂ ಫ್ಯಾಷನ್ ಕ್ಷೇತ್ರದವರು ಈ ಕಟೌಟ್ ಪ್ಯಾಂಟ್‌ಸೂಟ್‌ಗಳನ್ನು ಧರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಈ ಪ್ಯಾಂಟ್‌ಸೂಟ್‌ಗಳು ಸೆಲೆಬ್ರಿಟಿಗಳಿಗೆ ತಕ್ಕಂತೆ ನಾನಾ ಪ್ರಯೋಗಾತ್ಮಕ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ.
Advertisement
ಫ್ಯಾಷನ್ ಟಿಪ್ಸ್:
ಕಟೌಟ್ ಪ್ಯಾಂಟ್‌ಸೂಟ್ ಎಲ್ಲರಿಗೂ ಮ್ಯಾಚ್ ಆಗದು.
ಅತಿ ದುಬಾರಿ ಪ್ಯಾಂಟ್‌ಸೂಟ್‌ಗಳಿವು.
ಸಾಲಿಡ್ ಕಲರ್ಸ್ ಎದ್ದು ಕಾಣುತ್ತವೆ.