ನವದೆಹಲಿ: ಖರ್ಜೂರದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 172 ಗ್ರಾಂ ತೂಕದ ಚಿನ್ನವನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಮಾನ ನಿಲ್ದಾಣದ ಗ್ರೀನ್ ಚಾನೆಲ್‌ನ ನಿರ್ಗಮನದಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದರು. ಆತನಿಂದ ಚಿನ್ನ ಎಂದು ಎನ್ನಲಾದ ವಿವಿಧ ಹಳದಿ ಲೋಹದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಆತ ಖರ್ಜೂರದೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ.
Advertisement
#WATCH | Based on spot profiling, Customs officers at IGI Airport intercepted one Indian male passenger aged 56 arriving from Jeddah to Delhi on flight SV-756 yesterday. Examination of his baggage led to the recovery of assorted yellow metal cut pieces and a chain, all believed… pic.twitter.com/sxCrpGMKuj
— ANI (@ANI) February 27, 2025
Advertisement
56 ವಯಸ್ಸಿನ ಆರೋಪಿಯು, SV-756 ವಿಮಾನದಲ್ಲಿ ಜೆಡ್ಡಾದಿಂದ ದೆಹಲಿಗೆ ಪ್ರಯಾಣಿಸಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ವರದಿ ಮಾಡಿದ್ದಾರೆ.
Advertisement
ಗುಪ್ತಚರ ಮಾಹಿತಿ ಆಧರಿಸಿ ಪರಿಶೀಲನೆಗೆ ಒಳಪಡಿಸಿದ್ದರು. ಶಂಕಿತನ ಲಗೇಜ್‌ನ ಎಕ್ಸ್-ರೇ ಸ್ಕ್ರೀನಿಂಗ್ ಸಮಯದಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದಿದ್ದವು. 172 ಗ್ರಾಂ ತೂಕದ ಹಳದಿ ಲೋಹದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.