ಬೆಂಗಳೂರು: ಬೆಸ್ಕಾಂ ವಾಟ್ಸಾಪ್ ಸಹಾಯವಾಣಿಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಕೇವಲ ಒಂದೇ ವಾರದಲ್ಲಿ 736 ದೂರುಗಳು ಸಲ್ಲಿಕೆ ಆಗಿವೆ.
ವಿದ್ಯುತ್ ಸಂಬಂಧಿತ ದೂರುಗಳಿಗೆ ಬೆಸ್ಕಾಂ ವಾಟ್ಸಾಪ್ ಸಹಾಯವಾಣಿ ಪ್ರಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಕಾಂನ 8 ಜಿಲ್ಲೆ, 11 ವಾಟ್ಸಪ್ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ವಾಟ್ಸಾಪ್ ಸಹಾಯವಾಣಿಯ ಮುಖಾಂತರ ಈ ಒಂದು ವಾರದಲ್ಲಿ 736 ದೂರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 628 ದೂರುಗಳನ್ನು ಬೆಸ್ಕಾಂ ಬಗೆಹರಿಸಿದೆ.
Advertisement
ವಿದ್ಯುತ್ ಸಮಸ್ಯೆಗೆ ಚಿಂತೆಯೇಕೆ? #ವಾಟ್ಸಾಪ್ ಮಾಡಿ, ಪರಿಹಾರ ಪಡೆಯಿರಿ!
ನಿಮ್ಮ ಜಿಲ್ಲೆಗೆ ನೀಡಲಾದ #ವಾಟ್ಸಾಪ್_ಸಹಾಯವಾಣಿ ಸಂಖ್ಯೆಗೆ ಸಂದೇಶ ಕಳುಹಿಸಿದಲ್ಲಿ, ಬೆಸ್ಕಾಂ ತ್ವರಿತ ಪರಿಹಾರ ನೀಡುತ್ತದೆ.@mdbescom @BescomHelpline @MinOfPower @mnreindia @karkalasunil @BSBommai @BescomTa @RajKSinghIndia @BBMPCOMM pic.twitter.com/1jztDvL0vP
— Namma BESCOM (ನಮ್ಮ ಬೆಸ್ಕಾಂ) (@NammaBESCOM) June 4, 2022
ಮೇ 24ರಂದು ಇಂಧನ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಬೆಸ್ಕಾಂ ವಾಟ್ಸಾಪ್ ಸಹಾಯವಾಗಿ ಸಹಾಯವಾಣಿಯನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಕಳೆದ ಒಂದು ವಾರದಲ್ಲಿ ಬೆಸ್ಕಾಂನ 1912 ಸ್ಥಿರ ಸಹಾಯವಾಣಿ ಸಾಲು ಸಾಲು ಕರೆ ಬರುತ್ತಿದ್ದು, ಬರೋಬ್ಬರಿ 74,744 ದೂರುಗಳು ಗ್ರಾಹಕರಿಂದ ಸಲ್ಲಿಕೆ ಆಗಿದೆ. ಈ ಪೈಕಿ ಬೆಸ್ಕಾಂ 71,105 ದೂರುಗಳನ್ನು ಬಗೆಹರಿಸಿದೆ. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಇಕ್ಕಟ್ಟಿಗೆ ಸಿಲುಕಿದ ಚಾಮರಾಜಪೇಟೆ ಪೊಲೀಸರು
Advertisement
Contact us via #WhatsApp for a quick response to any electrical problem!
Your friend through WhatsApp,#BESCOM@mdbescom @BescomHelpline @MinOfPower @mnreindia @karkalasunil @BSBommai @RajKSinghIndia @BescomTa @BBMPCOMM @BLRSmartCity @gokRDPR pic.twitter.com/uUBYMsNkoF
— Namma BESCOM (ನಮ್ಮ ಬೆಸ್ಕಾಂ) (@NammaBESCOM) June 3, 2022
ಈಗಾಗಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದೆ. ಈ ಹಿನ್ನೆಲೆಯಲ್ಲಿ ಗುಡುಗು ಸಹಿತ ಮಳೆ ಬರುತ್ತಿದೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ವಿದ್ಯುತ್ ತಂತಿಗಳು ಮುರಿದು ಬಿದ್ದು, ಹಾನಿಗೊಳಗಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೂರುಗಳ ಸಂಖ್ಯೆ ಅಧಿಕವಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ನಲಪಾಡ್ ರೌಡಿಸಂ ಆರೋಪ – ಡಿಕೆಶಿಗೆ ದೂರು