ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಸಕ್ಕರೆ ಮಾರಾಟ ಆಗ್ತಾ ಇರೋ ಸುದ್ದಿ ಕೇಳಿದ್ವಿ. ಆದ್ರೆ ಈಗ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಅಕ್ಕಿಯದ್ದೆ ಸುದ್ದಿ. ಇಲ್ಲೊಬ್ರು ಮಾಮೂಲಿ ಅಕ್ಕಿ ಅಂತ ಪ್ಲಾಸ್ಟಿಕ್ ಅಕ್ಕಿ ತಿಂದು ಕುಟುಂಬವೆಲ್ಲಾ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರಿನ ಉಳ್ಳಾಲದಲ್ಲಿರುವ ರಿಲಿಯನ್ಸ್ ಮಾರ್ಟ್ ನಲ್ಲಿ ಪ್ರವೀಣ್ ಎಂಬವರು 6 ಕೆ.ಜಿ ಅಕ್ಕಿ ಕೊಂಡುಕೊಂಡು ಅನ್ನಮಾಡಿ ತಿಂದಿದ್ದಾರೆ. ತಕ್ಷಣ ಹೊಟ್ಟೆ ನೋವು, ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಕಿ ಪರೀಕ್ಷೆ ಮಾಡಿದ್ದಾರೆ. ನಂತರ ಇದು ಪ್ಲಾಸ್ಟಿಕ್ ಅಕ್ಕಿ ಅಂತ ಆರೋಪ ಮಾಡಿ ನ್ಯಾಯಕ್ಕಾಗಿ ಮಧ್ಯರಾತ್ರಿ ರಿಲಿಯನ್ಸ್ ಮಾರ್ಟ್ ಮುಂದೆ ಧರಣಿ ಕುಳಿತಿದ್ದರು.
Advertisement
Advertisement
ಬೆಂಗಳೂರಿನ ಕೋಡಿಗೆಹಳ್ಳಿ ಗೇಟ್ ನಲ್ಲಿರುವ ಮೇಗಾ ಮೋರ್ ಸ್ಟೋರ್ ನಲ್ಲಿಯೂ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರೋ ಬಗ್ಗೆ ವರದಿಯಾಗಿತ್ತು. ಅಲ್ಲಿ ನಾಗೇಶ್ ಎಂಬವರು ಭಾನುವಾರದಂದು 25 ಕೆಜಿ ಬ್ಯಾಂಗ್ ಅಕ್ಕಿಯನ್ನು ಖರೀದಿ ಮಾಡಿದ್ರು. ಅದನ್ನ ಬೇಯಿಸಿದ್ರೆ ಅಕ್ಕಿ ತೇಲುತ್ತಿತ್ತು.
Advertisement
ರಾತ್ರಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು, ಆ ಅಕ್ಕಿಯಿಂದ ಮಾಡಿಕೊಂಡು ಬಂದಿದ್ದ ಅನ್ನವನ್ನು ಮುದ್ದೆ ಮಾಡಿ ಗೋಡೆಗೆ ಹೊಡೆದ್ರೆ ಚೂರಾಗಲಿಲ್ಲ. ಗಟ್ಟಿಯಾಗಿ ಕೂಡಿಕೊಂಡು ಹೊಡೆದಾಗಲೆಲ್ಲಾ ಪಿಚ್ ಬೀಳುವ ರೀತಿ ಇತ್ತು. ಇದರಿಂದ ಇದು ಪ್ಲಾಸ್ಟಿಕ್ ಅಕ್ಕಿಯೆಂದು ಆರೋಪಿಸಿದ್ದಾರೆ.