ಬೆಂಗಳೂರು: ಸಾಮಾನ್ಯವಾಗಿ ಡೆಲಿವರಿ ಬಾಯ್ ನೀಡುತ್ತಿದ್ದ ಬಾಕ್ಸಿನಲ್ಲಿ ಕಲ್ಲು, ಪೇಪರ್ ಹಾಗೂ ಇತರೇ ವಸ್ತುಗಳನ್ನು ನೀಡಿ ಮೋಸ ಮಾಡಿದ್ದ ಕೆಲ ಘಟನೆಗಳು ಈ ಹಿಂದೆ ವರದಿಯಾಗಿತ್ತು. ಆದರೆ ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದ ಮೊಬೈಲ್ ಫೋನನ್ನು ಡೆಲಿವರಿ ನೀಡಲು ಹೊಗಿದ್ದ ವ್ಯಕ್ತಿಗೆ ಬಾಕ್ಸಿನಲ್ಲಿ ಕಲ್ಲಿಟ್ಟು ಮೋಸ ಮಾಡಿರುವ ಘಟನೆ ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ?
ರಾಹುಲ್ ಎಂಬಾತ ಆನ್‍ಲೈನ್ ನಲ್ಲಿ 50 ಸಾವಿರ ರೂ. ಮೌಲ್ಯದ ಐ ಫೋನನ್ನು ಬುಕ್ ಮಾಡಿದ್ದರು. ಈ ಪಾರ್ಸೆಲ್ ತಂದಿದ್ದ ಸಂಸ್ಥೆಯ ಡೆಲಿವರಿ ಬಾಯ್ ರಾಹುಲ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಆದರೆ ಡೆಲಿವರಿ ಬಾಯ್ ಮನೆ ಬಳಿ ಬರುವುದು ಬೇಡವೆಂದು ತಿಳಿಸಿದ್ದ ರಾಹುಲ್ ಆರ್ ಆರ್ ನಗರದ ಬಳಿಯ ಪೆಟ್ರೋಲ್ ಬಂಕ್ ಬಳಿ ಬರುವಂತೆ ನೀಡಿದ್ದ.
Advertisement
Advertisement
ರಾಹುಲ್ ಸೂಚನೆಯಂತೆ ಡೆಲಿವರಿ ಬಾಯ್ ಸ್ಥಳಕ್ಕೆ ತೆರಳಿದ್ದ. ಈ ವೇಳೆ ರಾಹುಲ್‍ನೊಂದಿಗೆ ಮತ್ತಿಬ್ಬರು ಯುವಕರು ಸ್ಥಳಕ್ಕೆ ಆಗಮಿಸಿ ಪಾರ್ಸೆಲ್ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಡೆಲಿವರಿ ಬಾಯ್ ಗಮನ ಬೇರೆಡೆ ಸೆಳೆದು ಮೊಬೈಲ್ ಬಾಕ್ಸಿನಲ್ಲಿ ಕಲ್ಲುಗಳನ್ನು ತುಂಬಿಸಿದ್ದಾರೆ. ಆ ಬಳಿಕ ತಮ್ಮ ಬಳಿ ಮೊಬೈಲ್ ಪಡೆದುಕೊಳ್ಳುವಷ್ಟು ದುಡ್ಡಿಲ್ಲ, ಆದ್ದರಿಂದ ಆಫೀಸ್ ಬಳಿ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ.
Advertisement
ಇತ್ತ ವಂಚಕ ಮಾತು ನಂಬಿದ್ದ ಡೆಲಿವರಿ ಬಾಯ್ ಮತ್ತೆ ಕಚೇರಿಗೆ ವಾಪಸ್ ಆಗಮಿಸಿದ್ದ, ಈ ವೇಳೆ ಮೊಬೈಲ್ ಬಾಕ್ಸ್ ಪರಿಶೀಲನೆ ನಡೆಸಿದ್ದು, ಬಾಕ್ಸಿನಲ್ಲಿ ಕಲ್ಲು ಇರುವದನ್ನು ನೋಡಿ ತಾವು ವಂಚನೆಗೆ ಒಳಗಾಗಿರುವುದನ್ನು ತಿಳಿದಿದ್ದಾರೆ. ಕೂಡಲೇ ಘಟನೆ ಬಗ್ಗೆ ಕಚೇರಿಯಲ್ಲಿ ವರದಿ ಮಾಡಿದ ಡೆಲಿವರಿ ಬಾಯ್ ವಂಚಕರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.