ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಬೇರಿಸ್ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸ್ಪಾರ್ ಸೂಪರ್ ಮಾರ್ಕೆಟ್‌ನಲ್ಲಿ 1 ಕೆ.ಜಿ ಈರುಳ್ಳಿಗಾಗಿ ಗ್ರಾಹಕ, ಸಿಬ್ಬಂದಿ ನಡುವೆ ವಾರ್ ನಡೆದಿದೆ.
ಕಳೆದ ವಾರ ಈ ಸ್ಪಾರ್ ಸಿಬ್ಬಂದಿ, 1 ಸಾವಿರ ರೂ. ಮೌಲ್ಯದ ವಸ್ತು ಖರೀದಿಸಿದ ಗ್ರಾಹಕರಿಗೆ 19 ರೂಪಾಯಿಗೆ 1 ಕೆಜಿಯ ಈರುಳ್ಳಿ ಕೊಡುವುದಾಗಿ ಕೂಪನ್ ನೀಡಿ, ನ. 6ಕ್ಕೆ ಈರುಳ್ಳಿ ಖರೀದಿಸುವಂತೆ ತಿಳಿಸಿದ್ದರು. ಈ ಕೂಪನ್ ಬಗ್ಗೆ ತಿಳಿದ ತಕ್ಷಣ ಗ್ರಾಹಕರೆಲ್ಲರೂ ಎದ್ನೋಬಿದ್ನೋ ಅಂತಾ ಮಾಲ್‌ಗೆ ಓಡಿ ಬಂದಿದ್ದರು. ವಯಸ್ಸಾದವರು, ಹೆಣ್ಣು ಮಕ್ಕಳೆಲ್ಲಾ ಹೆಚ್ಚು ದರ ನೀಡಿ ಆಟೋ ಮಾಡಿಕೊಂಡು ಈರುಳ್ಳಿಗಾಗಿ ಮಾಲ್‌ಗೆ ಬಂದಿದ್ದರು.
Advertisement
Advertisement
ಆದರೆ ಇಲ್ಲಿಗೆ ಬರುತ್ತಿದ್ದಂತೆ ಗ್ರಾಹಕರಿಗೆಲ್ಲಾ ಶಾಕ್ ಕಾದಿತ್ತು. ಮಾಲ್‌ಗೆ ಬಂದ ಗ್ರಾಹಕರಿಗೆ ಈ ಸೂಪರ್ ಮಾರ್ಕೆಟ್ ಸಿಬ್ಬಂದಿಗಳು 19 ರೂ. ನ ಕೂಪನ್‌ನಲ್ಲಿರೋ ಸ್ಟಾರ್ ಮಾರ್ಕ್ ತೋರಿಸಿದ್ದಾರೆ. ನಿಬಂಧನೆಗಳು ಅನ್ವಯಿಸುತ್ತದೆ. ನೀವು ಸರಿಯಾಗಿ ನೋಡಿಕೊಳ್ಳಬೇಕು. 19 ರೂ. ಗೆ 1 ಕೆ.ಜಿ ಈರುಳ್ಳಿ ಬೇಕು ಎಂದರೆ 50 ರೂ. ತರಕಾರಿ ಖರೀದಿ ಮಾಡಬೇಕು. ಅದರಲ್ಲೂ ನಿಮಗೆ ಕೊಡೋದು ಕೇವಲ ಒಂದೇ ಕೆ.ಜಿ ಈರುಳ್ಳಿ ಎಂದಿದ್ದಾರೆ.
Advertisement
Advertisement
ಸಿಬ್ಬಂದಿ ಹೀಗೆ ಹೇಳಿದ್ದೆ ತಡ ಆಕ್ರೋಶಗೊಂಡಿದ್ದ ಗ್ರಾಹಕರು ಮುಖ ಮುಖ ನೋಡಿಕೊಂಡು ಇಲ್ಲಿನ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. 19 ರೂ. ಗೆ ಈರುಳ್ಳಿ ಕೊಡುವುದಾಗಿ ಹೇಳಿ ವಂಚನೆ ಮಾಡ್ತಿದ್ದಿರಾ ಎಂದು ಆರೋಪ ಮಾಡಿ ರೊಚ್ಚಿಗೆದ್ದಿದ್ದಾರೆ. ಆದರೆ ಇದ್ಯಾವುದಕ್ಕೂ ಸಿಬ್ಬಂದಿಗಳು ಬಗ್ಗದೆ ಇದ್ದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ಈರುಳ್ಳಿ ಕೂಪನ್ ಇಟ್ಟುಕೊಂಡು ವಾಪಾಸ್ ತೆರಳಿದ್ದಾರೆ. ಜೊತೆಗೆ ಕೆಲ ಗ್ರಾಹಕರು ಈ ಸ್ಪಾರ್ ಸಿಬ್ಬಂದಿ ಮಾಡಿದ್ದು ಮೋಸ. ಕೂಪನ್‌ನಲ್ಲಿ ನಿಬಂಧನೆಗಳನ್ನು ಕಣ್ಣಿಗೆ ಕಾಣದ ಹಾಗೆ ಹಾಕಿ ಗ್ರಾಹಕರಿಗೆ ವಂಚಿಸುತ್ತಿರೋದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.