ಬೆಂಗಳೂರು: ನವೆಂಬರ್ ತಿಂಗಳ ಅಂತ್ಯದಲ್ಲಿ ಮೂರು ದಿನಗಳ ಕಾಲ ಕರೆಂಟ್ ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ. ಆನ್‌ಲೈನ್ ಮತ್ತು ಆಫ್‌ಲೈನ್ ಸೇವೆಗಳು ಕೂಡಾ ಸ್ಥಗಿತಗೊಳ್ಳಲಿದೆ ಎಂದು ಇಂಧನ ಇಲಾಖೆ ಪ್ರಧಾನ ವ್ಯವಸ್ಥಾಪಕ ಐಟಿ ವೆಂಕಟೇಶ್ (IT Venkatesh) ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ್ 24, 25 ಹಾಗೂ 26ರಂದು ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಹೊಸ ಕನೆಕ್ಷನ್ ಪಡೆದುಕೊಳ್ಳಲು ದುಡ್ಡು ಪಾವತಿ ಹೀಗೆ ಯಾವ ಪ್ರಕ್ರಿಯೆಯೂ ನಡೆಯುವುದಿಲ್ಲ. ಹೊಸ ಹಾರ್ಡ್‌ವೇರ್ ಅಳವಡಿಕೆ ಮಾಡಿ ಐಟಿ ಸೇವೆಗಳನ್ನು ಉನ್ನತೀಕರಣಗೊಳಿಸುತ್ತಿರುವುದರಿಂದ ಸಾಫ್ಟ್ವೇರ್‌ನಲ್ಲಿ ಬದಲಾವಣೆ ಆಗಲಿದೆ. ಹೀಗಾಗಿ ಐದು ಎಸ್ಕಾಂಗಳ ಕರೆಂಟ್ ಬಿಲ್ ಕಟ್ಟಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಮಾಂಸಪ್ರಿಯರಿಗೆ ಗುಡ್‍ನ್ಯೂಸ್- KMF ಮಾದರಿಯಲ್ಲೇ ಮಾರಾಟಕ್ಕೆ ಪ್ಲಾನ್
Advertisement
Advertisement
ಇನ್ನು ನವೆಂಬರ್ ಅಂತ್ಯಕ್ಕೆ ಬೆಸ್ಕಾಂ ಸೇರಿದಂತೆ ಎಸ್ಕಾಂಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್‌ಸಿಗೆ ಮನವಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ದರ ಏರಿಕೆಗೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಲಿದೆ. ರಾಜ್ಯಾದ್ಯಂತ ಗೃಹಜ್ಯೋತಿ ಜಾರಿ ಬೆನ್ನಲ್ಲೇ ಈ ಬಾರಿ ಎಷ್ಟು ದರ ಏರಿಕೆಗೆ ಮನವಿ ಮಾಡಬೇಕು ಎನ್ನುವುದರ ಬಗ್ಗೆ ಆಯಾಯ ಎಸ್ಕಾಂಗಳ ಹಿರಿಯ ಅಧಿಕಾರಿಗಳು ಚರ್ಚೆ ನಡೆಸುತ್ತಾರೆ. ಸಾರ್ವಜನಿಕ ಅಹವಾಲು, ಆಕ್ಷೇಪಣೆ ಬಳಿಕ ದರ ಏರಿಕೆಯ ಬಗ್ಗೆ ಕೆಇಆರ್‌ಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಬೆಸ್ಕಾಂ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದರು. ಇದನ್ನೂ ಓದಿ: ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ
Advertisement