ಡಿಕೆಶಿ-ರೇಣುಕಾಚಾರ್ಯ ಪಿಸುಮಾತು – ವಿಧಾನಸೌಧದಲ್ಲಿ ಕುಚುಕು ಕುಚುಕು..!

Public TV
1 Min Read
DK SHIVAKUMAR RENUKACHARYA 1

ಬೆಂಗಳೂರು: ಏನಪ್ಪಾ ರೇಣುಕಾಚಾರ್ಯ ಮಂತ್ರಿ ಆಗಲ್ಲವಾ..? ಹೀಗೆ ಡಿಕೆಶಿ ಹೇಳುತ್ತಿದ್ದಂತೆ ಅಕ್ಕಪಕ್ಕ ಓಡಾಡ್ತಿದ್ದ ಜನರೆಲ್ಲ ಆಶ್ಚರ್ಯಗೊಂಡ್ರು. ಅಷ್ಟಕ್ಕೂ ಇದೆಲ್ಲ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನಡೆದ ಘಟನೆ.

e0711599 fb22 4cb8 a6d9 665ccac417dc

ವಿಧಾನಸಭೆಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೊರಗೆ ಬರುವಾಗ ಅದೇ ಸಮಯಕ್ಕೆ ಶಾಸಕ ರೇಣುಕಾಚಾರ್ಯ ಕೂಡ ಹೊರಬಂದ್ರು. ಮೊದಲ ಮಹಡಿಯಿಂದ ಇಳಿದು ಬರುವಾಗ ರೇಣುಕಾಚಾರ್ಯಗೆ ಡಿಕೆಶಿ ಕಿಚಾಯಿಸಿದ್ರು. ಮಂತ್ರಿ ಆಗಲ್ಲವಾ ಅಂದಿದ್ದಕ್ಕೆ ನಕ್ಕ ರೇಣುಕಾಚಾರ್ಯ ಅಯ್ಯೋ ಬಿಡಿ.. ಆಗೋಣ ಅಂತೇಳಿದ್ರು. ಇದನ್ನೂ ಓದಿ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್‍ಡಿಡಿ

DK SHIVAKUMAR RENUKACHARYA 3

ವಿಧಾನಸೌಧದಲ್ಲಿ ಇಬ್ಬರ ಕುಚುಕು ಕುಚುಕು ಮಾತುಗಳನ್ನ ಕೇಳಿದವರು ಇದೇನಪ್ಪಾ ಇಬ್ಬರದ್ದು ಹೊಸ ವರಸೆ ಅಂತಾ ಅಂದ್ಕೊಳ್ತಿದ್ರು. ಇದಾದ ಬಳಿಕ ಡಿಕೆಶಿ, ರೇಣುಕಾಚಾರ್ಯ ಇಬ್ಬರೇ ಸೈಡಿಗೆ ತೆರಳಿ ಪ್ರತ್ಯೇಕವಾಗಿ 5 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು.

DK SHIVAKUMAR RENUKACHARYA 2

ಡಿಕೆಶಿ ಜೊತೆಗೆ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಅವರು ನನಗೆ ಆತ್ಮೀಯ ಗೆಳೆಯರು ಅಷ್ಟೇ, ರಾಜಕಾರಣ ಬೇರೆ ವೈಯಕ್ತಿಕ ಸಂಬಂಧಗಳು ಬೇರೆ. ಆಗಾಗ್ಗೆ ಭೇಟಿ ಮಾಡಿ ಮಾತಾಡ್ತಿವಿ ಅಷ್ಟೇ. ಇಂದು ಸಹ ಮಾತುಕತೆ ಮಾಡಿದ್ವಿ. ಆದರೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಅಂತಾ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ರು. ಇದನ್ನೂ ಓದಿ: ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ – ಸರ್ವ ಪಕ್ಷ ಸಭೆ ಬಳಿಕ ಗುಡುಗಿದ ಸಿದ್ದು

Share This Article
Leave a Comment

Leave a Reply

Your email address will not be published. Required fields are marked *