ಮಂಡ್ಯ: ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಭ್ರೂಣ ಹತ್ಯೆಗೆ ಆರೋಗ್ಯ ಇಲಾಖೆ ಕಡಿವಾಣ ಹಾಕಿದ ನಂತರ ಇದೀಗ ಲಿಂಗಾನುಪಾತದಲ್ಲಿ (Sex Ratio) ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಳ ಕಂಡುಬಂದಿದೆ.
ಮಂಡ್ಯ, ಪಾಂಡವಪುರ, ನಾಗಮಂಗಲದಲ್ಲಿ ಸರಣಿ ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಮಂಡ್ಯ ಜಿಲ್ಲೆಯನ್ನು ರಾಜ್ಯದ ಮುಂದೆ ತಲೆ ತಗ್ಗಿಸುವಂತೆ ಮಾಡಿತ್ತು. ಪಾಪಿಗಳು ಹಣದಾಸೆಗೆ ಸಾವಿರಾರು ಹೆಣ್ಯ ಭ್ರೂಣಗಳ ಮಾರಣಹೋಮ ನಡೆಸಿದ್ದರು. ಇದರಿಂದ ಜಿಲ್ಲೆಯ ಲಿಂಗಾನುಪಾತ ಇಳಿಕೆಯಾಗಿತ್ತು. ಬಳಿಕ ದಿಟ್ಟ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ ದಂಧೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.ಇದನ್ನೂ ಓದಿ: ಬೆಂಗಳೂರು, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ʻಲೋಕಾʼ ದಾಳಿ; ಭ್ರಷ್ಟ ಅಧಿಕಾರಿಗಳಿಗೆ ನಡುಕ
ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆಯಿಂದ ಜಿಲ್ಲೆಯಲ್ಲಿ ಲಿಂಗಾನುಪಾತ ಇಳಿಕೆಯಾಗಿತ್ತು. ಆದರೆ ಇದೀಗ ಆರೋಗ್ಯ ಇಲಾಖೆ ದಿಟ್ಟ ಕ್ರಮಕ್ಕೆ ಲಿಂಗಾನುಪಾತ ಏರಿಕೆ ಆಗಿದೆ. ಕಳೆದ ವರ್ಷ ಪ್ರತಿ ಗಂಡಿಗೆ 869 ಇದ್ದ ಹೆಣ್ಣು ಮಕ್ಕಳ ಸಂಖ್ಯೆ ಈ ವರ್ಷ 930ಕ್ಕೆ ಏರಿಕೆ ಕಂಡಿದೆ.
ಜಿಲ್ಲಾ ಆರೋಗ್ಯ ಇಲಾಖೆ ಡಿಎಚ್‌ಓ ಡಾ.ಮೋಹನ್ ನೇತೃತ್ವದಲ್ಲಿ ಕಾರ್ಯತಂತ್ರಗಳನ್ನ ರೂಪಿಸಿ, ಭ್ರೂಣ ಹತ್ಯೆ ದಂಧೆಗೆ ಬ್ರೇಕ್ ಹಾಕಲಾಗಿತ್ತು. ಮೊದಲಿಗೆ ಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಹದ್ದಿನ ಕಣ್ಣಿಟ್ಟರು. ಬಳಿಕ ಮೂರು ತಿಂಗಳ ಬಳಿಕ ಸ್ಕ್ಯಾನಿಂಗ್‌ಗೆ ಬರುವ, ಮೊದಲು ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಗರ್ಭಿಣಿಯರ ಮೇಲೆ ನಿಗಾವಹಿಸಿದರು. ಆರಂಭದಲ್ಲಿ ಹಲವು ಆರೋಪಿಗಳನ್ನ ಬಂಧಿಸಿದ್ದರೂ ಕೂಡ ದಂಧೆ ನಿಂತಿರಲಿಲ್ಲ. ಆಗ ಆರೋಗ್ಯ ಇಲಾಖೆ ಕೈಗೆತ್ತಿಕೊಂಡದ್ದು ಡೆಕಾಯ್ ಆಪರೇಷನ್. ಭ್ರೂಣ ಲಿಂಗ ದಂಧೆ ಪತ್ತೆ ಹಚ್ಚಲು ಇಲಾಖೆಯೇ ಓರ್ವ ಗರ್ಭಿಣಿಯನ್ನು ನೇಮಕ ಮಾಡಿದ್ರು. ಆ ಗರ್ಭಿಣಿ ಮೂಲಕವೇ ಆರೋಪಿಗಳ ಹೆಡೆಮುರಿ ಕಟ್ಟಿದ್ರು. ಆ ಮೂಲಕ ದಂಧೆಗೆ ಸಂಪೂರ್ಣ ಕಡಿವಾಣ ಹಾಕಿದ್ರು. ಇದರ ಪರಿಣಾಮ ಲಿಂಗಾನುಪಾತ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತು.
ಜಿಲ್ಲೆಗೆ ಕಳಂಕ ತಂದಿದ್ದ ಭ್ರೂಣ ಲಿಂಗ ಪತ್ತೆ ದಂಧೆಗೆ ಬ್ರೇಕ್ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಅದ್ವಾನ – ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಕಿಡಿ