ಕಾರಾಕಾಸ್(ವೆನೆಜುವೆಲಾ): ಸರ್ಕಾರದ ದೂರಾಲೋಚನೆ ರಹಿತ ಆರ್ಥಿಕ ನೀತಿಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ವೆನೆಜುವೆಲಾ ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇಲ್ಲಿನ ಜನರು ಒಂದು ಕಾಫಿ ಕುಡಿಯಲು 20 ಲಕ್ಷ ಬೋಲಿವರ್ ಹಣ ಖರ್ಚು ಮಾಡುವ ಸ್ಥಿತಿ ತಲುಪಿದ್ದಾರೆ.
ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಅನ್ವಯ ಕಳೆದ 1 ವರ್ಷದಿಂದ ದೇಶದ ಹಣದುಬ್ಬರ ಸೂಚ್ಯಂಕ 86,857% ಹೆಚ್ಚಳವಾಗಿದೆ. ಇದರಿಂದ ಬ್ಲಾಕ್ ಮಾರ್ಕೆಟ್ ನಲ್ಲಿ ಒಂದು ಕಾಫಿಗೆ 20 ಲಕ್ಷ ಬೋಲಿವರ್ ಅಂದರೆ 68.7 ರೂ. ನೀಡಬೇಕಿದೆ.
Advertisement
Advertisement
ಅಂತರಾಷ್ಟ್ರೀಯ ಹಣ ನಿಧಿ ನೀಡಿರುವ ಮಾಹಿತಿ ಪ್ರಕಾರ, ವೆನೆಜುವೆಲಾ ಆರ್ಥಿಕ ಪರಿಸ್ಥಿತಿ ದೇಶದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಿನಗಳಿದೆ. ಈ ಹಿಂದೆ 1920 ರಲ್ಲಿ ಜರ್ಮನಿ ಹಾಗೂ ದಶಕದ ಹಿಂದೆ ಜಿಂಬಾಂಬ್ವೆಯಲ್ಲಿ ಕಂಡು ಬಂದ ಆರ್ಥಿಕ ಕೆಟ್ಟ ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ ಎಂದು ತಿಳಿಸಿದೆ.
Advertisement
ವೆನೆಜುವೆಲಾ ದೇಶಾದ್ಯಂತ ಜನರು ಊಟಕ್ಕೂ ಪರದಾಟ ನಡೆಸುತ್ತಿದ್ದು, ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಅಧ್ಯಕ್ಷ ನಿಕೊಲಾಸ್ ಮುಡುರೊ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ವಿಫಲವಾಗಿದೆ. ಅಂದಹಾಗೇ ವೆನೆಜುವೆಲಾ ದೇಶದ ಹಣವನ್ನು ಬೋಲಿವರು ಎಂದು ಕರೆಯುತ್ತಾರೆ. ಸದ್ಯದ ಆರ್ಥಿಕ ಮಾರುಕಟ್ಟೆಯಲ್ಲಿ ದೇಶದ ಒಂದು ಬೋಲಿವರು ಭಾರತದ 0.00057 ರೂ. ಗೆ ಸಮಾನಾಗಿದೆ. ಅಮೆರಿಕದ ಖಂಡದ ಉತ್ತರ ಭಾಗದಲ್ಲಿರುವ ಸಮುದ್ರ ಕರಾವಳಿ ದೇಶ ವೆನೆಜುವೆಲಾ. ಈ ದೇಶದ ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ, ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿದೆ.