ದಕ್ಷಿಣ ಭಾರತದ ಕಡೆ ಅದರಲ್ಲೂ ಕರ್ನಾಟಕದಲ್ಲಿ ರಸಂ ಅಥವಾ ಸಾರು ಇಲ್ಲದಿದ್ದರೆ ಊಟ ಪೂರ್ತಿಯಾಗುವುದಿಲ್ಲ. ಅದರಲ್ಲಿಯೂ ಜೀರಿಗೆ ಸಾರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ಬಹಳ ಇಷ್ಟ. ನೀವೂ ಕೂಡ ಒಮ್ಮೆ ಮಾಡಿ ರುಚಿ ನೋಡಿದರೆ ಮತ್ತೆ ಮತ್ತೆ ಈ ರೆಸಿಪಿನ ಮಾಡುತ್ತೀರಿ. ಇದನ್ನು ಮಾಡುವುದು ತುಂಬಾನೇ ಸುಲಭ. ಬಿಸಿ ಬಿಸಿ ಅನ್ನದ ಜೊತೆ ಬಡಿಸಿ ತಿನ್ನಲು ಜೀರಿಗೆ ರಸಂ ತುಂಬಾ ರುಚಿ. ಅಷ್ಟೇ ಅಲ್ಲ ಇದನ್ನು ಸೂಪ್ ತರಹ ಕುಡಿಯಲೂ ಬಹುದು. ಒಮ್ಮೆ ಮಾಡಿ ನೋಡಿ.
Advertisement
ಬೇಕಾಗಿರುವ ಪದಾರ್ಥಗಳು:
* ಒಣ ಮೆಣಸಿನಕಾಯಿ – 4 ರಿಂದ 5
* ಎಣ್ಣೆ – 2 ದೊಡ್ಡ ಚಮಚ
* ಜೀರಿಗೆ – 2 ಚಮಚ
* ಬೇಯಿಸಿದ ತೊಗರಿ ಬೇಳೆ – 2 ಕಪ್
* ಟೊಮೆಟೊ – 1 ಕಪ್
* ಅರಶಿನ ಪುಡಿ – ಅರ್ಧ ಚಮಚ
* ಉಪ್ಪು – ಅರ್ಧ ಚಮಚ
* ನೀರು – ಬೇಕಾದಷ್ಟು(4 ರಿಂದ 5 ಕಪ್)
Advertisement
* ತುಪ್ಪ – 1 ಚಮಚ
* ಸಾಸಿವೆ – 1 ಚಮಚ
* ಕರಿಬೇವು – 1 ದಂಟು
* ಇಂಗು – ಒಂದು ಚಿಟಿಕೆ
* ಕೊತ್ತಂಬರಿ ಸೊಪ್ಪು – 1 ಕಪ್
Advertisement
Advertisement
ಮಾಡುವ ವಿಧಾನ:
* ಹುರಿದ ಒಣ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಒಂದು ಪಾತ್ರೆಯಲ್ಲಿ ಗರಿ-ಗರಿಯಾಗುವವರೆಗೆ ಹುರಿಯಿರಿ.
* ಹುರಿದ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಬೇಯಿಸಿದ ತೊಗರಿ ಬೇಳೆಯ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
* ಎಣ್ಣೆಯನ್ನು ಬಿಸಿ ಮಾಡಿ ಟೊಮೆಟೊ ಹಾಕಿ ಸಣ್ಣ ಉರಿಯಲ್ಲಿ ಅರಶಿನ ಪುಡಿ ಹಾಗೂ ಉಪ್ಪನ್ನು ಹಾಕಿ ಬೇಯಿಸಿ.
* ಅದಕ್ಕೆ ತಯಾರಿಸಿದ ಮೆಣಸಿನಕಾಯಿ-ಜೀರಿಗೆ-ಬೇಳೆ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.
* ನೀರನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಕಿ. ಈ ಸಾರನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲದವರೆಗೆ ಕುದಿಸಿ.
* ಒಗ್ಗರಣೆಗೆ ಸ್ವಲ್ಪ ತುಪ್ಪದಲ್ಲಿ ಸಾಸಿವೆ ಹಾಕಿ ಕರಿಬೇವಿನ ಎಲೆ ಮತ್ತು ಇಂಗು ಹಾಕಿ ಹುರಿಯಿರಿ. ಹುರಿದದ್ದನ್ನು ಸಾರಿಗೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿ.
– ಈ ಸಾರನ್ನು ಬಿಸಿ-ಬಿಸಿ ಅನ್ನದ ಮತ್ತು ಹಪ್ಪಳದ ಜೊತೆ ಬಡಿಸಿ.