ಪಠ್ಯ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರದಿಂದ ಸಾಂಸ್ಕೃತಿಕ ಅತ್ಯಾಚಾರ: ಡಿಕೆಶಿ

Public TV
2 Min Read
dkshivakumar

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಅವರು, ಕುವೆಂಪು ಅವರು ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಕ್ಕಳ ಪಠ್ಯಪುಸ್ತಕದಲ್ಲಿ ಕುವೆಂಪು ಸೇರಿದಂತೆ ಮಹಾನ್ ದಾರ್ಶನಿಕರ ವಿಚಾರಗಳನ್ನು ತಿರುಚಿ ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದೆ. ಇತಿಹಾಸ ಬದಲಾವಣೆ ಮಾಡಿ ತಮ್ಮ ಅಜೆಂಡಾವನ್ನು ಚಿಕ್ಕ ಮಕ್ಕಳ ತಲೆಗೆ ತುಂಬುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥಗೆ ಸಂಘಟನೆಗಳಿಂದ ಧಮ್ಕಿ – ಪೊಲೀಸರಿಂದ ಬಿಗಿ ಭದ್ರತೆ

CM RC BC

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ನಾಯಕರನ್ನು ಹೊರತುಪಡಿಸಿ ಎಲ್ಲ ಮಠಗಳ ಪೀಠಾಧ್ಯಕ್ಷರು, ಸಾಹಿತಿಗಳು, ಸಂಘಟನೆಗಳು ಒಟ್ಟಾಗಿ ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರದ ಮನಸ್ಥಿತಿ ಹಾಗೂ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ನಡೆ ವಿರುದ್ಧ ದನಿ ಎತ್ತಿರುವ ಮಠಾಧೀಶರು, ಸಾಹಿತಿಗಳು, ಚಿಂತಕರು ಹಾಗೂ ಇತರ ಸಂಘಟನೆಗಳು ಇದೇ ತಿಂಗಳು ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

SWAMIJI

ಬಸವಣ್ಣನವರ ವಚನಗಳನ್ನು ತಿರುಚಲಾಗಿದೆ, ಅಂಬೇಡ್ಕರ್ ಅವರ ವಿಚಾರಗಳನ್ನು ಪಠ್ಯಕ್ರಮದಿಂದ ತೆಗೆದು ಅಪಮಾನ ಮಾಡಲಾಗಿದೆ. ಇದು ಇಡೀ ಭಾರತ ದೇಶಕ್ಕೆ ಮಾಡಿರುವ ದೊಡ್ಡ ಅಪಮಾನವಾಗಿದೆ. ಮುಖ್ಯವಾಗಿ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರ ಜನಿವಾರ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಲ್ಲಿ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದೆ ಎಂದು ಖಂಡಿಸಿದ್ದಾರೆ. ಇದನ್ನೂ ಓದಿ: PUC ಪಠ್ಯ ಪರಿಷ್ಕರಣೆ – ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ತೀರ್ಮಾನ

TEXTBOOK

ಮುಖ್ಯಮಂತ್ರಿಗಳು ಕಷ್ಟಪಟ್ಟು ಬಸವಣ್ಣನವರ ವಿಚಾರವನ್ನು ಮಾತ್ರ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಕೇವಲ ಒಂದು ಪಕ್ಷದ ಮುಖ್ಯಮಂತ್ರಿಯಾಗಿಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಹಾಗೆಯೇ ಶಿಕ್ಷಣ ನೀತಿ ಎಂಬುದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಆರ್‌ಎಸ್‌ಎಸ್ ಚಿಂತನೆಗಳನ್ನು ನೀವೇ ಇಟ್ಟುಕೊಳ್ಳಿ, ನಾವು ಬೇಡ ಎನ್ನುವುದಿಲ್ಲ. ಆದರೆ ಅದು ರಾಷ್ಟ್ರೀಯ ಶಿಕ್ಷಣ ನೀತಿ ಆಗಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು

TEXT BOOK

ಪಠ್ಯಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಶಿಕ್ಷಣ ಸಚಿವ ನಾಗೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರ ವಿಚಾರಧಾರೆ ರಾಜಕೀಯ ವಿಚಾರಗಳೇ? ಸಿದ್ದಗಂಗಾ ಶ್ರೀಗಳು ರಾಜಕಾರಣಿಗಳೇ? ನಿರ್ಮಲಾನಂದ ಸ್ವಾಮೀಜಿ ರಾಜಕಾರಣಿಗಳೇ? ಮುರುಘಾ ಶರಣರು ರಾಜಕಾರಣಿಗಳೇ? ಅವರೇ ಉತ್ತರ ಹೇಳಲಿ. ಇಲ್ಲಿ ನಾವು ಬಿಜೆಪಿಯ ನಿಜವಾದ ಮುಖ ಹಾಗೂ ಮನಸ್ಥಿತಿ ವಿರುದ್ಧ ಹೋರಾಡುತ್ತೇವೆ. ಸಚಿವರು ರಾಜೀನಾಮೆ ನೀಡುತ್ತಾರೋ, ಬಿಡುತ್ತಾರೋ ನಮಗೆ ಬೇಡ. ಅವರು ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕವನ್ನು ಕಸದ ಬುಟ್ಟಿಗೆ ಎಸೆದು ಹಳೆ ಪಠ್ಯವನ್ನು ಮಕ್ಕಳಿಗೆ ನೀಡಿ ಬೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.

bc nagesh 1

ಸರ್ಕಾರದ ಮನಸ್ಥಿತಿ ವಿರುದ್ಧ ನಮ್ಮ ಹೋರಾಟ: ರೋಹಿತ್ ಚಕ್ರತೀರ್ಥ ಅವರಿಗೆ ಪೊಲೀಸ್ ಭದ್ರತೆ ನೀಡಿರುವ ಬಗ್ಗೆ ಉತ್ತರಿಸಿದ ಅವರು, ಅವರಿಗೆ ಪೊಲೀಸ್ ಭದ್ರತೆಯಾದ್ರು ನೀಡಲಿ, ಪ್ಯಾರಾ ಮಿಲಿಟರಿ ಭದ್ರತೆಯಾದ್ರೂ ನೀಡಲಿ. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಹೋರಾಟ ಸರ್ಕಾರದ ಮನಸ್ಥಿತಿಯ ಬಗ್ಗೆ. ಅವರು ಮಾಡಿದ್ದೆಲ್ಲ ಸರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಅಧಿಕೃತ ಮುದ್ರೆ ಒತ್ತಿದ್ದಾರೆ ಎಂದು ಕುಟುಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *