ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಕಳೆದ ಮೂರುವರೆ ದಶಕಗಳಿಂದ ಪಾಲಿಸಿಕೊಂಡು ಬರುತ್ತಿದ್ದ ವಿಐಪಿ ಸಂಸ್ಕೃತಿಗೆ ಬ್ರೇಕ್ ಬಿದ್ದಿದೆ.
ರೈಲ್ವೇ ಬೋರ್ಡ್ ಅಧ್ಯಕ್ಷ ಮತ್ತು ಬೋರ್ಡ್ ಇತರ ಸದಸ್ಯರು ಭೇಟಿಗೆಂದು ಆಗಮಿಸುವ ಮತ್ತು ನಿರ್ಗಮಿಸುವ ಸಮಯದಲ್ಲಿ ಕಡ್ಡಾಯವಾಗಿ ಜನರಲ್ ಮ್ಯಾನೇಜರ್ ಗಳು ಸ್ಥಳದಲ್ಲೇ ಇರಲೇಬೇಕೆಂಬ 36 ವರ್ಷ ಹಿಂದಿನ ಶಿಷ್ಟಾಚಾರಕ್ಕೆ ಸಚಿವಾಲಯ ತೆರೆ ಎಳೆದಿದೆ.
Advertisement
ಸೆಪ್ಟೆಂಬರ್ 28 ಕ್ಕೆ ಆದೇಶ ಪ್ರಕಟವಾಗಿದ್ದು, ರೈಲ್ವೇ ಅಧಿಕಾರಿಗಳ ಭೇಟಿ ವೇಳೆ ಇನ್ನು ಮುಂದೆ ಯಾವುದೇ ಬೊಕ್ಕೆ ಅಥವಾ ಹೂ ಗುಚ್ಛಗಳನ್ನು ನೀಡಬಾರದು ಎಂದು ರೈಲ್ವೇ ಬೋರ್ಡ್ ಅಧ್ಯಕ್ಷ ಅಶ್ವನಿ ಲೊಹನಿ ತಿಳಿಸಿದ್ದಾರೆ.
Advertisement
ಕಚೇರಿಯಲ್ಲಿ ಅಲ್ಲದೇ ಅಧಿಕಾರಿಗಳು ಈ ಶಿಷ್ಟಾಚಾರವನ್ನು ಮನೆಯಲ್ಲೂ ಪಾಲಿಸಬೇಕು. ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ರೈಲು ಸಿಬ್ಬಂದಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ.
Advertisement
ಸಮಾರು 30 ಸಾವಿರಕ್ಕೂ ಅಧಿಕ ಟ್ರ್ಯಾಕ್ ಮನ್ ಗಳು ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 6 ಸಾವಿರ – 7 ಸಾವಿರ ರೈಲ್ವೇ ಸಿಬ್ಬಂದಿ ಮರಳಿ ತಮ್ಮ ಮೂಲಕ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Advertisement
ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಹಿರಿಯ ಅಧಿಕಾರಿಗಳಿಗೆ, ನೀವು ದುಬಾರಿ ವರ್ಗದ ಬೋಗಿಗಳಲ್ಲೇ ಪ್ರಯಾಣಿಸದೇ ಸ್ಲೀಪರ್ ಮತ್ತು ಎಸಿ ತ್ರಿ ಟಯರ್ ಬೋಗಿಗಳಲ್ಲಿ ಪ್ರಯಾಣಿಸಬೇಕು. ಈ ಮೂಲಕ ಪ್ರಯಾಣಿಕರ ಕಷ್ಟಗಳನ್ನು ತಿಳಿದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.