ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ

Public TV
2 Min Read
kannada and culture department

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಖಾಲಿಯಿರುವ ಕೆಲವು ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ಹಾಗೂ ಹಲವು ಅಕಾಡೆಮಿಗಳಲ್ಲಿ ರಂಗ ಸಮಾಜದಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಸದಸ್ಯರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ಹೊಸ ಸದಸ್ಯರನ್ನು ನೇಮಕ ಮಾಡಿದೆ.

ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿಗೆ ಅಜಿತ್‌ ಬಸಾಪುರ ನೂತನ ಅಧ್ಯಕ್ಷರಾಗಿದ್ದು, ತಿಪ್ಪೇಸ್ವಾಮಿ ಹಾಗೂ ದತ್ತಾತ್ರೇಯ ಅರಳಿಕಟ್ಟಿ ನೂತನ ಸದಸ್ಯರಾಗಿದ್ದಾರೆ.

kannada and culture department 1

ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಶ್ರೀರಾಮಗೌತಮ್‌, ಗುರುಸಿದ್ದಪ್ಪ, ಕಮಲ್‌ ಅಹಮ್ಮದ್‌, ಶಿಲ್ಪಾ ಕಡಕಭಾವಿ ಅವರನ್ನು ಹೊಸದಾಗಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಮಂಗಳೂರಿನ ಕೊಂಕಣ ಸಾಹಿತ್ಯ ಅಕಾಡೆಮಿಗೆ ಓಂ ಗಣೇಶ್‌ ಹಾಗೂ ರಮೇಶ್‌ ಪುರಸಯ್ಯ ಅವರನ್ನು ಹೊಸದಾಗಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಶ್ರೀಧರ್‌ ಹೆಗಡೆ, ಪ್ರದೀಪ್‌ಚಂದ್ರ, ಆರತಿದೇವ ಶಿಖಾಮಣಿ, ಜೀವನ್‌ ಕುಮಾರ್‌, ವಿಜಯಕುಮಾರ್‌, ಗಣಪತಿ ಹಿತ್ಲಕೈ, ಎಂ.ಎನ್‌.ಕಿರಣ್‌ಕುಮಾರ್‌, ಪ್ರಸನ್ನ ಕುಮಾರ್‌ ಹೊಸದಾಗಿ ನೇಮಕವಾಗಿದ್ದಾರೆ.

ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿಯ ನೂತನ ಸದಸ್ಯರಾಗಿ ಡಾ. ಅಪ್ಪಾಜಿ, ಬಸವರಾಜ ಗುಬ್ಬಿ, ಶಿವೇಶ್ವರಗೌಡ, ಸಣ್ಣವೀರಪ್ಪ ನೇಮಕಗೊಂಡಿದ್ದಾರೆ.

ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಗಣೇಶ್‌ ಉಡುಪ ಹಾಗೂ ನಾಗರಾಜ ಹೆಗಡೆ ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ- ವರ್ಕ್ಫ್ ಬೋರ್ಡ್ ಅರ್ಜಿ ವಜಾಗೊಳಿಸಿದ ಬಿಬಿಎಂಪಿ

ಮಂಗಳೂರಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾಗಿ ಅಬ್ದುಲ್‌ ರಹಿಮಾನ್‌, ಹೈದರಾಲಿ, ಎಂ.ಕೆ.ಮಠ, ಮಹಮ್ಮದ್‌ ಮುಸ್ತಫಾ ಆಯ್ಕೆ ಆಗಿದ್ದಾರೆ.

ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಡಾ. ಕೇಶವ ಬಂಗೇರ ಅವರನ್ನು ಹೊಸದಾಗಿ ನೇಮಿಸಲಾಗಿದೆ. ಹಾಗೂ ಕೊಡಗಿನ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾಗಿ ಕೌಸಲ್ಯಾ ಸೋಮಯೆಂಡ, ನಾಗೇಶ್‌ ಕಾಲೂರು, ಪ್ರಮೀಳಾ ನಾಚಯ್ಯ, ಚಾಮರ ಬೆಳ್ಯಪ್ಪ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ: ಎರಡು ಹೆಚ್ಚುವರಿ SDRF ತಂಡ ರಚನೆ: ಬೊಮ್ಮಾಯಿ ಸೂಚನೆ

ರಂಗ ಸಮಾಜ ಅಕಾಡೆಮಿಗೆ ಡಾ. ಶಶಿಧರ್‌, ಡಾ.ಶೀನ ನಡೋಳಿ, ರಾಜಣ್ಣ ಜೇವರ್ಗಿ, ದಾಕ್ಷಾಯಿಣಿ ಭಟ್‌, ಗುರುಪ್ರಸಾದ್‌ ಭಟ್‌ ಹೊಸ ಸದಸ್ಯಾರಾಗಿ ಆಯ್ಕೆ ಆಗಿದ್ದಾರೆ. ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾಗಿ ಡ್ಯಾನಿ ಪೇರೆರ, ಡಾ.ರಾಜೀವ ಲೋಚನ ಆಯ್ಕೆ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *