ಚೆನ್ನೈ: ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ತಮಿಳುನಾಡಿನ (Tamil Nadu) ಕಡಲೂರು ಜಿಲ್ಲೆಯ ತಿರುಚ್ಚಿ- ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ ಈ ಘಟನೆ ನಡೆದಿದ್ದು, ಒಂದೇ ಬಾರಿಗೆ 6 ವಾಹನಗಳು ಅಪಘಾತಕ್ಕೀಡಾಗಿದೆ. (Pileup) 2 ಖಾಸಗಿ ಬಸ್‍ಗಳು, (Private Bus) 2 ಲಾರಿಗಳು (Lorries) ಹಾಗೂ 2 ಕಾರುಗಳ (Cars) ರಾಶಿ ಬಿದ್ದಿವೆ. ಇನ್ನೂ ಮೃತರ ಗುರುತನ್ನು ಪತ್ತೆ ಹಚ್ಚಿಲ್ಲ. ಅಪಘಾತ ನಡೆದಾಗ ಮೃತರೆಲ್ಲರೂ ಕಾರಿನಲ್ಲಿದ್ದರು.
ಘಟನೆಗೆ ಸಂಬಂಧಿಸಿ ವೇಪ್ಪೂರು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಿಂದ ಮೃತದೇಹಗಳನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಇದನ್ನೂ ಓದಿ: 9 ದಿನದ ಬ್ರೇಕ್ ಬಳಿಕ ಜೋಡೋ ಯಾತ್ರೆ ಪುನರಾರಂಭ
ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿ ಮೃತರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಕಾರು ನೋಂದಣಿ ಪುಸ್ತಕದ ಪ್ರಕಾರ, ವಾಹನವು ಚೆನ್ನೈನ ನಂಗನಲ್ಲೂರ್‌ಗೆ ಸೇರಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಕರ್ನಾಟಕದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀ