– ಬೆಲೆ ಕುಸಿತಕ್ಕೆ ರೈತರು ಕಂಗಾಲು
ಚಿಕ್ಕಬಳ್ಳಾಪುರ: ಮಳೆ ನಿಂತರೂ ಮಳೆಯಿಂದಾದ (Rain) ಅವಾಂತರಗಳಿಗೇನು ಕಮ್ಮಿ ಇಲ್ಲ. ರೈತರು ಹಗಲು ರಾತ್ರಿ ಅನ್ನದೇ ಕಷ್ಟಪಟ್ಟು ಹೂವು ಹಣ್ಣು ತರಕಾರಿ ಎಲ್ಲವನ್ನೂ ಬೆಳೀತಾರೆ, ಆದ್ರೆ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗಿ ಅನ್ನದಾತರು (Farmers) ಸಂಕಷ್ಟಕ್ಕೆ ಸಿಲುಕುವಂತಾಗಿದೆ.
Advertisement
ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದ ಸೌತೆಕಾಯಿ (Cucumber) ಆರು ಕಾಸು ಮೂರು ಕಾಸಿಗೆ ಬಿಕರಿಯಾಗುತ್ತಿದ್ದು, ರೈತರು ಕಣ್ಣೀರುಡುವಂತಾಗಿದೆ. ಇದನ್ನೂ ಓದಿ: ಸಂಡೂರು ಉಪ ಚುನಾವಣೆ| 2.5 ಕೆ.ಜಿ ಚಿನ್ನ, 25 ಕೆಜಿ ಬೆಳ್ಳಿ – ಬಂಗಾರು ಬಳಿ ಆಸ್ತಿ ಎಷ್ಟಿದೆ?
Advertisement
Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿ ಹನಿ ನೀರುಣಿಸಿ ಬಂಗಾರದಂಹತ ಬೆಳೆ ತೆಗೀತಾರೆ. ಹೂವು ಹಣ್ಣು ತರಕಾರಿ ಎಲ್ಲವನ್ನೂ ಬೆಳೆಯುವ ರೈತರು ಈ ಬಾರಿ ಯಥೇಚ್ಛವಾಗಿ ಸೌತೆಕಾಯಿಯನ್ನ ಬೆಳೆದಿದ್ದಾರೆ. ನಿರಂತರ ಮಳೆಯಿಂದ ಸೌತೆಕಾಯಿ ಇಳುವರಿಯೂ ಹೆಚ್ಚಾಗಿದ್ದು ಚಿಕ್ಕಬಳ್ಳಾಪುರ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಸೌತೆಕಾಯಿ ಬಂದಿದೆ. ಇದ್ರಿಂದ ಒಂದು ಮೂಟೆ ಸೌತೆಕಾಯಿ ಕೇವಲ 100 ರಿಂದ 150 ರೂ.ಗೆ ಬಿಕರಿಯಾಗುತ್ತಿದ್ದು ಸೌತೆಕಾಯಿ ಬೆಳೆದ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ | ಖಾದ್ರಿ ಬೆಂಬಲಿಗರಿಂದ ಕಾಂಗ್ರೆಸ್ ಅಭ್ಯರ್ಥಿಯ ಕಾರಿನ ಗಾಜು ಪುಡಿಪುಡಿ
Advertisement
ಇನ್ನೂ ಅತಿಯಾದ ಮಳೆಯ ಕಾರಣ ಒಂದು ಕಡೆ ಸೌತೆಕಾಯಿ ಬಂಪರ್ ಇಳುವರಿಯೂ ಬಂದಿದೆ. ಮತ್ತೊಂದು ಕಡೆ ಮಳೆ ಹೊಡೆತಕ್ಕೆ ಹೊಸ ಹೂವಿನ ಮೊಗ್ಗು ಎಲ್ಲವೂ ಉದುರಿ ಮುಂದೆ ಫಸಲು ಕುಂಠಿತವಾಗುತ್ತಿದೆ. ಮಳೆಯಿಂದ ಸೌತೆಕಾಯಿ ಬೆಳೆಗೆ ರೋಗ ರುಜಿನಗಳ ಬಾಧೆ ಸಹ ಆವರಿಸುತ್ತಿದ್ದು, ಸಾವಿರಾರು ರೂಪಾಯಿ ಕ್ರಿಮಿನಾಶಕಗಳಿಗೆ ಖರ್ಚು ಮಾಡಬೇಕಿದೆ.
ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲದೇ ಅನ್ನದಾತ ಆತಂಕಕ್ಕೀಡಾಗುವಂತಾಗಿದೆ. ಮಳೆ ಬಂದರೂ ಕಷ್ಟ, ಬರಿದಿದ್ದರೂ ಕಷ್ಟ ಅನ್ನೋ ಹಾಗೆ ರೈತರಿಗೆ ನಷ್ಟ ಮಾತ್ರ ತಪ್ಪಿದ್ದಲ್ಲ ಎಂಬಂತಾಗಿದೆ.