ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಯನ್ನು ಲೂಟಿ ರವಿ ಅಂತ ಹೇಳುತ್ತಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ೪ ಬಾರಿ ಶಾಸಕರಾಗಿ, ೨ ಬಾರಿ ಮಂತ್ರಿಗಳಾದ್ರೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಧರ್ಮ-ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ಕೊಡೊದೇ ಅವರ ಕಾಯಕ ಸಿ.ಟಿ ರವಿ ಒಬ್ಬ ವಿಕೃತ ಮನಸ್ಸುಳ್ಳ ಮನುಷ್ಯ ಎಂದು ಸಿಡಿದರು. ಇದನ್ನೂ ಓದಿ: ಟೋಲ್ ಆದಾಯ ಮುಂದಿನ 3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ
Advertisement
Advertisement
ಕಾಂಗ್ರೆಸ್ ಪಕ್ಷ ಬೆಂಕಿ ಹಚ್ಚುವ ಮನಸ್ಥಿತಿಯ ಪಕ್ಷ ಅಂತ ಸಿ.ಟಿ ರವಿಯವರ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ನಿಮಗೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿ ಅಂದರೆ ಬೆಂಕಿ ಹಚ್ಚುವ ಜನರ ಪಕ್ಷ ಅಂತ ಹೇಳಬೇಕಾಗುತ್ತೆ. ಯಡಿಯೂರಪ್ಪ ಸಿಎಂ ಆಗಿ ೪ ತಿಂಗಳ ಒಳಗೆ ೪೩ ಕೇಸ್ ವಾಪಸ್ ಪಡೆದರು. ೪೩ ಕೇಸಲ್ಲಿ ಮೊದಲನೇ ಪ್ರಕರಣವೇ ಸಿಟಿ ರವಿ ಅವರದ್ದು. ಬಿಜೆಪಿ ಶಾಸಕರ ಬೆಂಕಿ, ದೌರ್ಜನ್ಯ ಕೇಸ್‌ನ್ನ ವಿತ್ ಡ್ರಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: MES ಗಲಭೆಗೆ ಕಾಂಗ್ರೆಸ್, ಬಿಜೆಪಿ ಕೈವಾಡ ಇಲ್ಲ, ಇದು ಪುಂಡ ಪೋಕರಿಗಳ ಕೆಲಸ: ಪ್ರಹ್ಲಾದ್ ಜೋಶಿ
Advertisement
ಇದರಲ್ಲೇ ಗೊತ್ತಾಗುತ್ತೆ ಯಾರು ಕೇಸಲ್ಲಿ ಸಿಕ್ಕಿಹಾಕಿಕೊಂಡಿದ್ದರು, ಯಾರ ಕೇಸನ್ನ ವಿತ್ ಡ್ರಾ ಮಾಡಿದ್ರು ಅನ್ನೋದು? ಕೇಂದ್ರ ಗ್ರಹ ಸಚಿವ ಅಮಿತ್ ಷಾ ಎರಡು ವರ್ಷ ಜೈಲಲ್ಲಿದ್ದರು. ನಮ್ಮ ರಾಜ್ಯದಲ್ಲಿ ಸಿಎಂ, ಸಚಿವರು ಜೈಲು ಸೇರಿದ್ದರು. ನಿಮ್ಮ ಮನೆಯಲ್ಲಿಯೇ ವಾತಾವರಣ ಕೊಳೆತು ನಾರುತ್ತಿದೆ. ಕಾಂಗ್ರೆಸ್, ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಸಿಡಿದರು.