– ಕೋಲಾಟ ಆಡಿ ಗ್ರಾಮಸ್ಥರ ಜೊತೆ ಸಂಭ್ರಮ
ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಾಗರವಳ್ಳಿಯಲ್ಲಿ ನಡೆಯುವ ಸುಗ್ಗಿ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಭಾಗಿಯಾಗಿದ್ದರು.ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ
ಕಳೆದ 15 ದಿನಗಳಿಂದ ಚಿಕ್ಕಮಾಗರವಳ್ಳಿಯಲ್ಲಿ ಸುಪ್ರಸಿದ್ಧ ಸುಗ್ಗಿ ಹಬ್ಬದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಕಳೆದೊಂದು ವಾರದಿಂದಲೂ ಸಿ.ಟಿ.ರವಿ ಅವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಂದು ಜಾತ್ರೆಯ ಕೊನೆಯ ದಿನವಾಗಿರುವುದರಿಂದ ಗನ್ ಹಿಡಿದು ತೆಂಗಿನಕಾಯಿಗೆ ಗುರಿ ಇಟ್ಟು ಅಂಬು ಹೊಡೆದು, ಗ್ರಾಮಸ್ಥರ ಜೊತೆ ಕೋಲಾಟಕ್ಕೆ ಹೆಜ್ಜೆ ಹಾಕಿದರು. ಸಿ.ಟಿ ರವಿ ಜೊತೆ ಗ್ರಾಮದ ಯುವಕರು, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಸಾಮಾನ್ಯವಾಗಿ 15 ದಿನಗಳ ಕಾಲ ನಡೆಯುವ ಸುಗ್ಗಿ ಹಬ್ಬವನ್ನು ಮಲೆನಾಡಿಗರು ಅತ್ಯಂತ ಭಯ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಹತ್ತಾರು ಹಳ್ಳಿಯ ಜನರು ಮಾಂಸ-ಮದ್ಯ ಸೇವಿಸದೆ, ಕಾಲಿಗೆ ಚಪ್ಪಲಿ ಹಾಕದೆಯೂ ಸುಗ್ಗಿ ಹಬ್ಬ ಆಚರಿಸುತ್ತಾರೆ. ಹಿಂದಿನ ಕಾಲದಲ್ಲಿ ಸುಗ್ಗಿ ಹಬ್ಬದ ವೇಳೆ ಬೇರೆ ಊರಿನವರು ಈ ಊರಿನ ಒಳಗೂ ಹೋಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವರು ಜಾತ್ರೆಗೆ ಎಂದು ಊರಿಗೆ ಹೋಗುತ್ತಾರೆ. ಆದರೆ ಅತ್ಯಂತ ಮಡಿಯಿಂದ ನಡೆಯುವ ಸುಗ್ಗಿ ಹಬ್ಬದ ರೂಢಿ, ಸಂಪ್ರದಾಯ ಗೊತ್ತಿರುವವರು ಇಂದಿಗೂ ಊರಿನ ಒಳಗಡೆ ಬರುವುದಿಲ್ಲ ಎಂಬ ನಂಬಿಕೆಯಿದೆ.ಇದನ್ನೂ ಓದಿ: ಕಿವಿ ಕೇಳದ, ಮಾತು ಬಾರದ 11ರ ಬಾಲಕಿ ಮೇಲೆ ರೇಪ್ – ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ