ಬೆಂಗಳೂರು: ಅಪಘಾತ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದು, ಕುಣಿಗಲ್ ಬಳಿ ನಡೆದಿದ್ದು ದುರದೃಷ್ಟಕರ. ಈ ಘಟನೆ ನಡೆಯಬಾರದಿತ್ತು ಎಂದು ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ಕುಣಿಗಲ್ ಬಳಿ ನಡೆದ ಘಟನೆ ದುರದೃಷ್ಟರಕರವಾಗಿದೆ. ನಾನು ಚೆನ್ನೈಗೆ ಹೋಗಬೇಕಿತ್ತು. ಹೀಗಾಗಿ ನಿನ್ನೆ ರಾತ್ರಿ ಸುಮಾರು 11.30ಕ್ಕೆ ಚಿಕ್ಕಮಗಳೂರಿನಿಂದ ಹೊರಟೆ. ಮಧ್ಯದಲ್ಲಿ ನಾನು ನಿದ್ರೆ ಮಾಡುತ್ತಿದ್ದೆ. ನನ್ನ ಡ್ರೈವರ್ ಆಕಾಶ್ ಗಾಡಿ ಓಡಿಸುತ್ತಿದ್ದನು. ಗನ್ ಮ್ಯಾನ್ ರಾಜನಾಯಕ್ ಇದ್ದನು. ನಾವು ಮೂರು ಜನ ಪ್ರಯಾಣ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಮಾಡ್ತಿದ್ದವರಿಗೆ ಶಾಸಕ ಸಿಟಿ ರವಿ ಕಾರು ಡಿಕ್ಕಿ- ಇಬ್ಬರ ದುರ್ಮರಣ
Advertisement
Advertisement
ಏರ್ ಬ್ಯಾಗ್ ಓಪನ್ ಆಗಿ ಗಾಡಿ ನಿಂತಾಗ ಏನೋ ಆಗಿದೆ ಅಂತಾ ಗೊತ್ತಾಗಿದ್ದು, ಅಲ್ಲಿ ತನಕ ನನಗೆ ಏನಾಗಿದೆ ಎಂದು ಗೊತ್ತಿರಲಿಲ್ಲ. ನನಗೆ ಎದೆ ನೋವಾಗಿದ್ದು, ಮೈ-ಕೈ ತರಚಿದ ಗಾಯಗಳಾಗಿತ್ತು. ತಕ್ಷಣ ನಾನು ಕೆಳಗೆ ಇಳಿದು ನೋಡಿದ ಮೇಲೆ ಇಬ್ಬರು ನಿಧನರಾಗಿದ್ದರು. ನಾನೇ ಪೊಲೀಸ್, ಅಂಬುಲೆನ್ಸ್ ಗೆ ಫೋನ್ ಮಾಡಿದೆ. ಸಬ್ ಇನ್ಸ್ ಪೆಕ್ಟರ್, ಅಂಬುಲೆನ್ಸ್ ಬಂದ ನಂತರ ಮೃತರನ್ನ ಹಾಗೂ ಗಾಯಾಳುಗಳನ್ನ ಸ್ಥಳಾಂತರ ಮಾಡಿದ ನಂತರ ನಾನು ಸಬ್ ಇನ್ಸ್ ಪೆಕ್ಟರ್ ಅನುಮತಿ ಪಡೆದು ಬಂದೆ ಎಂದು ನಡೆದ ಘಟನೆಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಕುಡಿದಿದ್ದರು- ಶಾಸಕರ ವಿರುದ್ಧ ಮೃತರ ಸ್ನೇಹಿತ ಗಂಭೀರ ಆರೋಪ
Advertisement
Advertisement
ನನಗೂ ತರಚಿದ ಗಾಯ, ಎದೆನೋವಾಗಿತ್ತು. ಹೀಗಾಗಿ ನಾನು ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ರೆಸ್ಟ್ ನಲ್ಲಿ ಇದ್ದೀನಿ. ಚೆನ್ನೈಗೆ ಹೋಗಬೇಕಿದ್ದ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿ ಇಲ್ಲೆ ಉಳಿದುಕೊಂಡಿದ್ದೇನೆ. ಇದಾದ ನಂತರ ಮೃತರ ಕುಟುಂಬದವರನ್ನು ಭೇಟಿ ಮಾಡುತ್ತೇನೆ. ಈ ಅಪಘಾತ ದುರದೃಷ್ಟಕರ, ಇದರ ಬಗ್ಗೆ ಬೇರೆ ಏನೂ ಹೇಳಲು ಇಷ್ಟಪಡುವುದಿಲ್ಲ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರ ನೋವು ಅರ್ಥವಾಗುತ್ತದೆ. ಆದರೆ ಯಾರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv