ಚಿಕ್ಕಮಗಳೂರು: ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.
Advertisement
ಹಿಂದೂ ದೇವಸ್ಥಾನದ ಆದಾಯ ಬೇರೆ ಕಡೆ ಹರಿದುಹೋಗದಂತೆ, ದೇವಸ್ಥಾನಗಳ ಆದಾಯವನ್ನು ದೇವಸ್ಥಾನಗಳಿಗೆ ಬಳಸುವ ವಿಚಾರವಾಗಿ ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಹಿಂದೂ ದೇವಾಲಯಗಳ ಆದಾಯಕ್ಕೆ ಕೈ ಹಾಕಿದಾಗ ದೇವಾಲಯಗಳು ಸರ್ಕಾರದ ಕಪಿಮುಷ್ಟಿಗೆ ಬಂದಿತು. ಭಕ್ತರು ಭಕ್ತಿ, ಭಾವನೆ ಬೆರಸಿ ದೇವಾಲಯಗಳಿಗೆ ಕಾಣಿಕೆ ನೀಡಿರುತ್ತಾರೆ. ಹೀಗಾಗಿ ದೇವಾಲಯಗಳು ಸಮಾಜದ ಸ್ವತ್ತು ಎಂದು ತಿಳಿಸಿದ್ದಾರೆ.
Advertisement
Advertisement
ಮುಸ್ಲಿಮರಿಗೆ ವಕ್ಫ್ ಬೋರ್ಡ್ ಇದೆ. ಕ್ರಿಶ್ಚಿಯನ್ಸ್ ಗೆ ಅವರ ಬೋರ್ಡ್ ಇದೆ. ಅಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಆದರೆ ಹಿಂದೂಗಳಿಗೆ ಯಾಕೆ ಹಸ್ತಕ್ಷೇಪ ಇರಬೇಕು. ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದ ದೇಗುಲಗಳಿಗೆ ಶೀಘ್ರ ಸ್ವಾತಂತ್ರ್ಯ- ಆದಾಯ ದೇವಾಲಯಗಳ ಅಭಿವೃದ್ಧಿಗೆ ಮೀಸಲು
Advertisement
ಯಾರೋ ಮೇಸೆಜ್ ಮಾಡಿದ್ದರು. ಆದರೆ ಇದು ಸುಳ್ಳೋ-ಸತ್ಯವೋ ಪರಿಶೀಲನೆ ಮಾಡಬೇಕೆಂದು ಸುನಿಲ್ ಕುಮಾರ್ ಅವರಿಗೆ ಕರೆ ಮಾಡಿದ್ದೆ. ಆದರೆ ಅವರದ್ದು ನಾಟ್ ರೀಚಬಲ್ ಬಂತು. ಕರೆಂಟ್ ಬಿಲ್‍ನಲ್ಲೂ ಮಸೀದಿಗೆ ಒಂದು ರೇಟ್ ದೇವಾಲಯಕ್ಕೆ ಒಂಸು ರೇಟ್ ನೀಡಲಾಗಿದೆ ಎಂದು ಹೇಳಿದ್ದಾರೆ. ಪರ್ ಯೂನಿಟ್ ರೇಟ್ ಎಷ್ಟು ಬಳಸುತ್ತಾರೋ ಅಷ್ಟು ಎಲ್ಲರಿಗೂ ಒಂದೇ ಇರಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಆಗಬಾರದು. ದೇಶಾದ್ಯಂತ ದೇವಸ್ಥಾನಗಳು ಸಮಾಜದ ಸ್ವತ್ತು. ಹೀಗಾಗಿ ಸಮಾಜಕ್ಕೆ ವಾಪಸ್ ಕೊಡುವ ಕೆಲಸವಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ರೆ ದಂಡ: ವಿ.ಸೋಮಣ್ಣ ಎಚ್ಚರಿಕೆ