ಬೆಂಗಳೂರು: ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂರಿಗೆ 4% ಮೀಸಲಾತಿ ಕೊಡುವ ಯೋಚನೆಯನ್ನು ಪಾಕಿಸ್ತಾನದ ಅಪ್ಪಂದಿರಿಗೆ ಹುಟ್ಟಿರೋರು ಮಾತ್ರ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಹಾಸನ| ರಸ್ತೆ ವಿಚಾರಕ್ಕೆ ಸೈನಿಕ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ
Advertisement
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಭಾರತದ ಸಂವಿಧಾನದ ರಚನೆ ವೇಳೆ ಮತೀಯ ಆಧಾರದ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತದೆ. ಆಗ ಮುಸ್ಲಿಂರಿಗೆ ಮತೀಯ ಆಧಾರದ ಮೀಸಲಾತಿ ಕೊಡುವ ಬಗ್ಗೆ ಚರ್ಚೆಯಾಗುತ್ತದೆ. ಆಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಳೆಎಳೆಯಾಗಿ ವಿವರಿಸುತ್ತಾರೆ. ಮತೀಯ ಆಧಾರದ ಮೀಸಲಾತಿಗೆ ಅವರು ಒಪ್ಪಿಗೆ ಕೊಡುವುದಿಲ್ಲ. ಧರ್ಮ ಆಧಾರಿತ ಮೀಸಲಾತಿ ಸಂವಿಧಾನ ವಿರುದ್ಧವಾಗುತ್ತದೆ ಎಂದು ವಾದಿಸಿದ್ದರು. ಆದರೆ ಕರ್ನಾಟಕ ಸರ್ಕಾರ ಸಂವಿಧಾನ ವಿರುದ್ಧವಾಗಿ ಮೀಸಲಾತಿ ನೀಡಲು ಮುಂದಾಗಿದೆ ಎಂದು ಕಿಡಿಕಾರಿದರು.
Advertisement
ಸಂವಿಧಾನಕ್ಕೆ ವಿರುದ್ಧ ಇರುವವರು, ಅಂಬೇಡ್ಕರ್ ಚಿಂತನೆಗೆ ವಿರುದ್ಧ ಇರುವವರು ಮೀಸಲಾತಿ ಕೊಡುತ್ತಾರೆ. ಇದನ್ನ ನಾವು ಖಂಡಿಸುತ್ತೇವೆ. ಜಿನ್ನಾನ ಸಮರ್ಥನೆ ಮಾಡುವವರು, ಪಾಕಿಸ್ತಾನ ಸಮರ್ಥನೆ ಮಾಡುವವರು ಮಾತ್ರ ಇದನ್ನ ಪ್ರಸ್ತಾಪಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಒಂದೂವರೆ ತಿಂಗಳ ಮಗುವಿಗೆ 2 ವರ್ಷ ಅವಧಿ ಮುಗಿದ ಲಸಿಕೆ ಹಾಕಿದ ವೈದ್ಯ