ಚಿಕ್ಕಮಗಳೂರು: ಸಂವಿಧಾನದ (Constitution Of India) ಆಶಯ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂದಿದೆ. ಆದ್ರೆ ನಮ್ಮ ಜೆಡಿಎಸ್ ಕುಮಾರಣ್ಣ ಅದನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಜೆಡಿಎಸ್ ನಿಘಂಟಿನಲ್ಲಿ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಲೇವಡಿ ಮಾಡಿದ್ದಾರೆ.
Advertisement
ನಗರದ ಎಐಟಿ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಯುವಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ (JDS) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಣ್ಣನ (HD Kumaraswamy) ಪಾರ್ಟಿಗೂ ದೇಶಕ್ಕೂ ಸಂಬಂಧವೇ ಇಲ್ಲ. ಸಂವಿಧಾನದ ಆಶಯ `ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎಂದು ಇದೆ. ಆದರೆ ಕುಮಾರಣ್ಣ ಅದನ್ನ ತಪ್ಪಾಗಿ ಅರ್ಥೈಸಿಕೊಂಡು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
Advertisement
Advertisement
ಹಾಸನದಲ್ಲಿ ಜಗಳ ನಡೆಯುತ್ತಿದೆ ಏಕೆ? ದೇಶ-ರಾಜ್ಯದ ಅಭಿವೃದ್ಧಿಗಾಗಿ ಅಲ್ಲ, ಕುಟುಂಬಕ್ಕಾಗಿ. ಒಂದೇ ಒಂದು ತಪ್ಪಾಗಿದೆ. ಅವರ ಮನೆಯಲ್ಲಿ 224 ಕ್ಷೇತ್ರಗಳಿಗೆ ಆಗುವಷ್ಟು ಜನ ಇಲ್ಲ. ಇದ್ದಿದ್ದರೆ, 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಹುಡುಕುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಜೆಡಿಎಸ್ ಕಾಲೆಳೆದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಹೆದ್ದಾರಿಯಲ್ಲಿ ವಿಶ್ವದಲ್ಲೇ ಮೊದಲ ಬಿದಿರಿನ ತಡೆಗೋಡೆ ಸ್ಥಾಪನೆ – ನಿತಿನ್ ಗಡ್ಕರಿ
Advertisement
ಎಲ್ಲೋ ಓದಿದ್ದೆ, 36 ಜನ ಹೆಂಡ್ರು, 316 ಮಕ್ಕಳು ಅಂತಾ. ಹಾಗೇನಾದ್ರೂ ಇದ್ದಿದ್ದರೆ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಹುಡುಕುವ ಅಗತ್ಯವೇ ಇರುತ್ತಿರಲಿಲ್ಲ. ಅವರ ಪ್ರೀತಿ ಏನಿದ್ದರೂ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅಷ್ಟೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: Manish Sisodia ಸಿಬಿಐ ಕಸ್ಟಡಿ ವಿಸ್ತರಣೆ – ಮಾ.10 ರಂದು ಜಾಮೀನು ಅರ್ಜಿ ವಿಚಾರಣೆ