ಚಿಕ್ಕಮಗಳೂರು: `ಹಾಲಿಂದು ಹಾಲಿಗೆ, ನೀರಿಂದು ನೀರಿಗೆ’, `ಉಪ್ಪು ತಿಂದವನು ನೀರು ಕುಡಿಯಬೇಕು’, `ಊರಿಗೆ ಬಂದೋಳು ನೀರಿಗೆ ಬರಲ್ವಾʼ, ʻಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್ ಡ್ಯಾಶ್ʼ ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi), ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರ ಹೆಸರೇಳದೆ ಗಾದೆ ಮೂಲಕ ತಿವಿದಿದ್ದಾರೆ.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ (Highcourt), ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ ರವಿ ಅವರು, ಡಿಕೆಶಿ ಹೆಸರು ಹೇಳದೆಯೇ ಗಾದೆಯ ಮೂಲಕ ಕುಟುಕಿದ್ದಾರೆ. ಇದನ್ನೂ ಓದಿ: ಅನುಕಂಪವನ್ನು ನಮ್ಮ ದೇಶದಲ್ಲಿ ಹೇಗೆ ಬೇಕಾದ್ರು ಉಪಯೋಗ ಮಾಡಿಕೊಳ್ತಾರೆ: ಡಿಕೆಶಿಗೆ ಕುಮಾರಸ್ವಾಮಿ ಠಕ್ಕರ್
ಗಾದೆಗಳು ಸುಮ್ನೆ ಹುಟ್ಟುತ್ತವಾ? ಗಾದೆಗೆ ತಲತಲಾಂತರದ ಸತ್ಯ ಇರುತ್ತೆ. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ಆದ್ರೆ, ಪ್ರಮಾಣಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದಿದ್ದಾರೆ. ಯಾರೇ ಅಕ್ರಮ ಮಾಡಿದರೂ ಅದು ಇಂದಲ್ಲ ನಾಳೆ ಬಯಲಿಗೆ ಬರಲೇಬೇಕು. ಸತ್ಯವನ್ನ ಮಣ್ಣುಮಾಡೋಕಾಗಲ್ಲ, ಕೆಲ ಕಾಲ ಮುಚ್ಚಿಡಬಹುದು ಅಷ್ಟೆ. ಆದರೆ ಹೊರಬರೋದು ಸತ್ಯ. ತಪ್ಪು ಮಾಡಿರೋರು ಯಾರೇ ಆಗಿರಬಹುದು. ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಅರ್ಜಿ ವಜಾಗೊಂಡಿದ್ದು ಯಾಕೆ? ಹೈಕೋರ್ಟ್ ನೀಡಿದ ಕಾರಣ ಏನು?
ಇಲ್ಲಿ ಕಾನೂನಿಗಿಂತ ಅತೀಥರಾದವರು ಯಾರಾದರೂ ಇದ್ದಾರಾ? ನನ್ನನ್ನು ಸೇರಿದಂತೆ ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತೀಥರಲ್ಲ. ಯಾರಾದ್ರೂ ನಾವು ಕಾನೂನಿಗಿಂತ ದೊಡ್ಡವರು ಅಂದುಕೊಂಡಿದ್ದರೆ ಅದಕ್ಕೆ ಸಂವಿಧಾನ ಅವಕಾಶ ನೀಡಲ್ಲ. ಅಂಬೇಡ್ಕರ್ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದಿದ್ದಾರೆ. ಇವರಿಗೆ ಕಾನೂನು ಅನ್ವಯ ಆಗಲ್ಲ. ಏನೂ ಮಾಡಿದ್ರೂ ನಡೆಯುತ್ತೆ ಅನ್ನೋ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು. ಇವರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ ಎಂದು ಡಿಕೆಶಿ ಹೆಸರೇಳದೆ ಪರೋಕ್ಷವಾಗಿ ಗಾದೆಗಳ ಮೂಲಕ ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
Web Stories