ಬೆಂಗಳೂರು: ಕಾಂಗ್ರೆಸ್ ಮನೋಭಾವ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನವರು (Congress) ಆರ್‌ಎಸ್‌ಎಸ್ (RSS) ಚಡ್ಡಿ ಸುಡಬಹುದೇ ಹೊರತು ವಿಚಾರವನ್ನಲ್ಲ. ಕಾಂಗ್ರೆಸ್‌ನವರೇ ಚಡ್ಡಿಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.
Advertisement
ಕಾಂಗ್ರೆಸ್ ಟ್ವೀಟ್ (Congress Tweet) ಮೂಲಕ ಆರ್‌ಎಸ್‌ಎಸ್ ಚಡ್ಡಿ ಸುಡುವ ಫೋಟೋ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭಾರತ್ ಜೋಡೋ (Bharat jodo yatra) ಹೆಸರಲ್ಲಿ ಭಾರತೀಯತೆ ಸುಡುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಭಾರತೀಯತೆ ಇರುವ ಸಂಘಟನೆ. ಹಿಂದಿನ ಯುದ್ಧಗಳ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದೆ. ಕಾಂಗ್ರೆಸ್ ಮನೋಭಾವನೆ ಎಲ್ಲರಿಗೂ ಗೊತ್ತು. ಏಕೆಂದರೆ ಕಾಂಗ್ರೆಸ್ ಉಗ್ರ ಒಸಾಮಾ ಬಿನ್ ಲ್ಯಾಡನ್‌ಗೆ ಜೀ ಎಂದು ಉಲ್ಲೇಖಿಸುತ್ತೆ. ಅಫ್ಜಲ್ ಗುರು ಗಲ್ಲಿಗೇರಿಸಿದ್ರೆ ಮರುಕ ವ್ಯಕ್ತಪಡಿಸುತ್ತೆ, ತುಕುಡೇ-ತುಕುಡೇ ಗ್ಯಾಂಗನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿದ ಮೋಹನ್ ಲಾಲ್
Advertisement
Advertisement
ಕಾಂಗ್ರೆಸ್ ಭಾರತೀಯತೆಯನ್ನು ಜೋಡಿಸುವ ಕೆಲಸ ಮಾಡುತ್ತಿಲ್ಲ. ಅವರು ಭಾರತೀಯತೆಯನ್ನು ಸುಡುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಚಡ್ಡಿ ಸುಡಬಹುದು. ಆದರೆ ಆರ್‌ಎಸ್‌ಎಸ್ ವಿಚಾರ ಸುಡಲು ಸಾಧ್ಯವಿಲ್ಲ. ಚಡ್ಡಿ ಹಾಕಿ ಕಾಂಗ್ರೆಸ್ ನವರೇ ಶಾಖೆಗೆ ಬರುವ ದಿನ ದೂರವಿಲ್ಲ. ಏಕೆಂದರೆ ಆರ್‌ಎಸ್‌ಎಸ್ ಕ್ರಷ್ ಮಾಡುತ್ತೇವೆ ಎಂದಿದ್ದ ನೆಹರೂ (Neharu) ಅವರೇ ಗಣರಾಜ್ಯೋತ್ಸವ (RepublicDay) ಪಥಸಂಚಲನಕ್ಕೆ ಆರ್‌ಎಸ್‌ಎಸ್‌ನ್ನು ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ.
Advertisement
`ಸಿದ್ದರಾಮಯ್ಯ (Siddaramaiah) ಕಚ್ಚೆ ಹರುಕ’ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಜನರ ಮಾತು, ನಾನೂ ಸಹ ಜನರ ಮಾತು ಅಂತಾ ಹೇಳಿದ್ದೇನೆ. ಕೆಲವರು ಪ್ರಧಾನಿಗಳು, ಸ್ವಾಮೀಜಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಅಂತವರನ್ನ ನಾವು ನೋಡಿದ್ದೇವೆ, ಅವರು ಮಾತನಾಡುವಾಗ ಹುದ್ದೆಗಳು ನೆನಪಾಗುವುದಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.
Common goals!
One is a striker, and the other one a defender. Great to have them on the team ????????#BharatJodoYatra pic.twitter.com/0TaIdZvOje
— Rahul Gandhi (@RahulGandhi) September 12, 2022
ಹಿಂದಿ ಹೇರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ ರವಿ, ಇದು ಹಿಂದಿ ಹೇರುವ ಪ್ರಶ್ನೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ಸಹ ದೇಶದ ಆತ್ಮ. ಮಾತೃಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿ. ಕೀಳರಿಮೆ ತರುವ ಪ್ರಯತ್ನ ಬ್ರಿಟೀಷ್‌ನವರು ಮಾಡಿದ್ರು, ಈಗ ಕಾಂಗ್ರೆಸ್ ಮಾಡ್ತಾ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿ ದಿವಸ್ ನಾವು ಪ್ರಾರಂಭ ಮಾಡಿದ್ದಲ್ಲ. ಯಾವ ಪಕ್ಷದ ಬೆಂಬಲದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರೋ ಆ ಪಕ್ಷದವರೇ ಹಿಂದಿ ಹೇರಿಕೆ ಮಾಡಿರೋದು. ಏಕ್ ಭಾರತ್ ಶ್ರೇಷ್ಠ ಭಾರತ್ ಅಂತ ನಮ್ಮ ಪಕ್ಷ ಹೊಸ ಕಲ್ಪನೆ ಜಾರಿ ಮಾಡಿದೆ. ಬೇರೆ ಬೇರೆ ರಾಜ್ಯಗಳ ಉತ್ಸವಗಳನ್ನ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಬೇಕು. ಭಾಷೆ ಬಾಂಧವ್ಯದ ಸಂಕೇತ ಅಂತಾ ನಾನು ಭಾವಿಸುತ್ತೇನೆ. ಆದ್ರೆ ಕೆಲವರು ಭಾಷೆಯನ್ನ ಬೆಂಕಿ ಹಚ್ಚೋಕೆ ಬಳಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇರೆ ಬೇರೆ ರಾಜ್ಯಗಳು ಹಾಗೂ ಭಾಷೆಗಳ ಉತ್ಸವ ನಡೆದಾಗ ಸಾಂಸ್ಕೃತಿಕ ಸಂಬಂಧ ಬೆಳೆಯುತ್ತದೆ. ಸ್ವತಂತ್ರ್ಯಪೂರ್ವದಲ್ಲಿ ಎಲ್ಲೂ ಭಾಷೆ ವಿಚಾರದಲ್ಲಿ ಗಲಾಟೆಗಳು ಆಗಲಿಲ್ಲ. ಭಾರತ ಜನನಿಯ ತನುಜಾತೆ ಅಂತಾ ಕುವೆಂಪು ಹೇಳಿದ್ದಾರೆ. ಅದನ್ನ ಅರ್ಥ ಮಾಡಿಕೊಂಡು ಮಾತನಾಡಬೇಕು. ಹಿಂದಿಗೆ ಸಿಗುವ ಸನ್ಮಾನ ಕನ್ನಡಕ್ಕೂ ಸಿಗಬೇಕು. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2ರ ವರೆಗೆ ʻಸೇವಾ ಪಾಕ್ಷಿಕಾʼ ಅನ್ನೋ ಯೋಜನೆ ಮಾಡುತ್ತಿದ್ದೇವೆ. ಇದರಿಂದ ಖಾದಿ ಉದ್ಯಮ ಸೇರಿದಂತೆ ಹಲವು ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ಕೊಡಲಾಗುವುದು ಎಂದು ಸಿಟಿ ರವಿ ಅವರು ಹೇಳಿದ್ದಾರೆ.