ಸಿಎಂ ಅಭ್ಯರ್ಥಿ ಘೋಷಿಸಲಿ, ಯಾರು ಉಳಿಯುತ್ತಾರೆ, ಹೋಗುತ್ತಾರೆ ನೋಡೋಣ: ಸಿ.ಟಿ. ರವಿ

Public TV
1 Min Read
CT Ravi

ಚಿಕ್ಕಮಗಳೂರು: ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಿಸಲಿ, ಯಾರು ಉಳಿಯುತ್ತಾರೆ, ಯಾರು ಹೋಗುತ್ತಾರೆ ನೋಡೋಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲೊಡ್ಡಿದ್ದಾರೆ.

CT RAVI 2

ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ-ಡಿಕೆಶಿವಕುಮಾರ್ ಇಬ್ಬರಲ್ಲಿ ಯಾರ ಹೆಸರನ್ನು ಘೋಷಿಸಿದರೂ ಒಬ್ಬರು ಹೊರಗೆ ಬರುತ್ತಾರೆ. ಇಬ್ಬರಲ್ಲಿ ಒಬ್ಬರನ್ನು ಮಾಡಿದರೆ ಸೇಡು ತೀರಿಸಿಕೊಳ್ಳಲು ಪರಮೇಶ್ವರ್ ಅವರೇ ಹೊರಗೆ ಬರುತ್ತಾರೆ. ಕೇಡರ್ ಆಧಾರಿತ ಪಾರ್ಟಿ, ನಮ್ಮದು ಕಾಂಗ್ರೆಸಿನಷ್ಟು ದುರ್ಬಲ ಪಕ್ಷವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆತ್ಮ ಗೌರವ ಇದ್ದವರು ಯಾರೂ ಕಾಂಗ್ರೆಸ್‍ಗೆ ವಾಪಸ್ ಹೋಗಲ್ಲ: ಬಿ.ಸಿ.ಪಾಟೀಲ್

DKSHIVAKUMAR SIDDARAMAIAH 1

ಕಾಂಗ್ರೆಸ್ ಅವರಿಗೆ ಅವರ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲು ಆಗಲಿಲ್ಲ, ಸೆಳೆಯುವುದು ಎಲ್ಲಿಂದ ಬಂತು. ಅವರ ಶಾಸಕರನ್ನೇ ಏಕೆ ಉಳಿಸಿಕೊಳ್ಳಲಾಗಲಿಲ್ಲ ಎನ್ನುವುದನ್ನು ಕಾಂಗ್ರೆಸ್ ರಿಸರ್ಚ್ ಮಾಡಬೇಕು. ನಮ್ಮವರು ಏಕೆ ಪಾರ್ಟಿ ಬಿಟ್ಟರು ಅಂತ ಸಂಶೋಧನ ತಂಡ ರಚನೆ ಮಾಡಿ ಅಧ್ಯಯನ ಮಾಡಲಿ. ಆಗ ಸೆಳೆಯಬಹುದೋ, ಹೋಗುತ್ತಾರೋ, ಬರುತ್ತಾರೋ ಗೊತ್ತಾಗುತ್ತದೆ ಎಂದಿದ್ದಾರೆ.

ಅವರು ಯಾವಾಗಲೂ ಸುಮ್ಮನೆ ಸುದ್ದಿಯಲ್ಲಿ ಇರಬೇಕು ಎಂದು ಆಗಾಗ ಹೀಗೆ ಹೇಳುತ್ತಿರುತ್ತಾರೆ. ಸಮ್ಮಿಶ್ರ ಸರ್ಕಾರವಿದ್ದಾಗ 26 ಜನರನ್ನು ಪಟ್ಟಿ ಮಾಡಿದ್ದೇವೆ. ಪಕ್ಷ ಬಿಡುತ್ತಾರೆ ಎಂದಿದ್ದರು. ಕೊನೆಗೆ ಪಕ್ಷ ಬಿಟ್ಟಿದ್ದು ಯಾರು, ಅದೇ ಕಾಂಗ್ರೆಸ್-ಜೆಡಿಎಸ್‍ನವರು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್

Share This Article
Leave a Comment

Leave a Reply

Your email address will not be published. Required fields are marked *