ಬೆಂಗಳೂರು: ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲದೆ ಹೋದ್ರೆ ಎಸ್‌ಪಿಜಿ (SPG) ಭದ್ರತೆ ಹಾಕಿಸಿಕೊಳ್ಳಲಿ ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಸಿಟಿ ರವಿ (CT Ravi) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನನ್ನ ಬಂಧನಕ್ಕೆ ಡಿಕೆಶಿ ಕಾರಣ ಎಂಬ ಸಿಟಿ ರವಿ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಸಿಟಿ ರವಿ ಕೆಲ ವಿಷಯದಲ್ಲಿ ಪ್ರಚಲಿತರು. ಅವರ ಒಡನಾಟ ಇರುವುದು ಅಂತಹವರ ಜೊತೆ. ರಾಜ್ಯದ ಪೊಲೀಸ್ ಮೇಲೆ ನಂಬಿಕೆ ಇಲ್ಲ ಅಂದರೆ ಡೆಲ್ಲಿ ಸಪೋರ್ಟ್ ತಗೊಂದು ಎಸ್‌ಪಿಜಿ ಭದ್ರತೆ ನೀಡಲು ಹೇಳಿ. ಇಲ್ಲೇ ಹಿಂದೆ ಮುಂದೆ ಸೆಕ್ಯುರಿಟಿ ವ್ಯಾನ್ ಹಾಕಿಕೊಂಡು ಹೋಗೋಕೆ ಹೇಳಿ. ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂದರೆ ಎಸ್‌ಪಿಜಿ ಭದ್ರತೆಯನ್ನು ಕೇಳಿ ತಗೊಳ್ಳಲಿ ಎಂದು ತಿರುಗೇಟು ಕೊಟ್ಟರು.
Advertisement
ಸಿಟಿ ರವಿ ಬಂಧನ ಪ್ರಕರಣವನ್ನು ಸಿಬಿಐ (CBI) ಅಥವಾ ನ್ಯಾಯಾಂಗ ತನಿಖೆಗೆ ನೀಡಬೇಕು ಅಂತ ಬಿಜೆಪಿ ನಾಯಕರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರಿಗೆ ಸಿಬಿಐ ಅನ್ನೋದು ಮನೆ ಒಳಗಿನ ಸರಕು ಆಗಿದೆ. ಮನೆ ಕೆಲಸದವನ್ನು ಉಪಯೋಗ ಮಾಡುವ ರೀತಿ ಸಿಬಿಐ ಉಪಯೋಗ ಮಾಡುತ್ತಿದ್ದಾರೆ. ನಡೆದ ಘಟನೆ ಬಿಜೆಪಿಗೆ ಶೋಭೆ ತರುತ್ತಾ ಅಂತ ಬಿಜೆಪಿ ನಾಯಕರು ಹೇಳಬೇಕು. ಸಿಟಿ ರವಿ ಪದೇ ಪದೇ ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ಮಾತಾಡ್ತಿದ್ದಾರೆ. ಬಿಜೆಪಿ ಸಂಸ್ಕೃತಿ ಎಲ್ಲಿ ಹೋಯ್ತು? ಆರ್‌ಎಸ್‌ಎಸ್ ಹೇಳಿಕೊಟ್ಟ ಸಂಸ್ಕೃತಿ ಇದೆನಾ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿ.ಟಿ ರವಿ ಫೇಕ್ ಎನ್‌ಕೌಂಟರ್ ಮಾಡಬೇಕೆಂಬ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅನಿಸುತ್ತೆ: ಜೋಶಿ ಬಾಂಬ್
Advertisement
Advertisement
ಬಿಜೆಪಿ ನಾಯಕರು ಪದೇ ಪದೇ ಹೀಗೆ ಮಾತಾಡೋದನ್ನ ರಾಜ್ಯದ ಜನರು ಗಮನಿಸಬೇಕು. ಹೆಣ್ಣುಮಕ್ಕಳು, ಮಹಿಳೆಯರ ಬಗ್ಗೆ ಮಾತಾಡ್ತಾರೆ. ಅವರ ನಡವಳಿಕೆ ನೋಡಿದ್ರೆ ಅವರ ತಾಯಿ, ಹೆಂಡತಿ, ಮಕ್ಕಳಿಗೂ ಗೌರವ ಕೊಡೊಲ್ಲ ಅನ್ನಿಸುತ್ತೆ. ಆರ್‌ಎಸ್‌ಎಸ್ (RSS) ತರಬೇತಿ ಕೇಂದ್ರ ಈಗಲಾದರೂ ಬಿಜೆಪಿ ನಾಯಕರಿಗೆ ಕಡಿವಾಣ ಹಾಕಬೇಕು. ಬಿಜೆಪಿಯ ಒಬ್ಬೇ ಒಬ್ಬ ನಾಯಕರು ಈ ಹೇಳಿಕೆ ಖಂಡಿದೇ. ತಿರುಚುವ ಕೆಲಸ ಮಾಡ್ತಿದ್ದಾರೆ. ಮಾಧ್ಯಮಗಳ ಬಳಿ ದಾಖಲೆ ಇದ್ದರು ಕೂಡಾ ಬೇರೆ ವಿಚಾರಗಳನ್ನು ಪ್ರಚಾರಕ್ಕೆ ಬಿಡುತ್ತಿದ್ದೀರಿ. ಮಾಧ್ಯಮಗಳು ಜನಪ್ರತಿನಿಧಿಗಳು ಹೀಗೆ ಮಹಿಳಾ ಕುಲಕ್ಕೆ ಆದ ಅವಮಾನದ ಬಗ್ಗೆ ಮಾತಾಡುತ್ತಿಲ್ಲ. ಆ ನಾಯಕರು ಕ್ಷಮೆ ಕೋರುತ್ತಿಲ್ಲ. ಮಾಧ್ಯಮಗಳು ಯಾಕೆ ಅವರಿಗೆ ಬೆಂಬಲ ಕೊಡ್ತೀರಾ ಡಿಕೆ ಸುರೇಶ್ ಗರಂ ಆದರು.
Advertisement
ವಿರೋಧ ಪಕ್ಷದ ನಾಯಕರು ಈ ರೀತಿ ಪ್ರವೃತ್ತಿ ಪದೇ ಪದೇ ತೋರಿಸುತ್ತಿದ್ದಾರೆ. ಕರ್ನಾಟಕದ ಗೌರವ ಕಡಿಮೆ ಮಾಡ್ತಿದ್ದಾರೆ. ಕನ್ನಡಿಗರು ಸುಸಂಸ್ಕೃತರು ಅಂತ ಹೇಳ್ತಾರೆ. ಆದರೆ ಬಿಜೆಪಿ ನಾಯಕರ ಆಟ ನೋಡಿದ್ರೆ 10-12 ವರ್ಷಗಳಿಂದ ಇದೇ ರೀತಿ ಬಿಜೆಪಿ ಅವರು ನಡೆಸಿಕೊಂಡು ಬರ್ತಿದ್ದಾರೆ. ಮೌಲ್ಯಗಳು ಕುಸಿಯುತ್ತಿದ್ದು ಓಲೈಕೆ ಹೆಚ್ಚಾಗುತ್ತಿದೆ. ಜನಪ್ರತಿನಿಧಿಗಳ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಎಚ್ಚರಿಕೆ ಇಂದ ನಡೆಯಬೇಕು ಅಂತ ತಿಳಿಸಿದರು.
ಸಿಟಿ ರವಿ ರಾಹುಲ್ ಗಾಂಧಿ (Rahul Gandhi) ಡ್ರಗ್ ಅಂದರು, ಕೆಟ್ಟ ಪದ ಬಳಕೆ ಆಯ್ತು ಮಾಧ್ಯಮಗಳು ಯಾವುದನ್ನು ತೋರಿಸಲಿಲ್ಲ. ಸಿಟಿ ರವಿ ಮಾತು ತಿರುಗಿಸೋದ್ರಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ಸಿಟಿ ರವಿ ಮಹಿಳೆಯರ ಕ್ಷಮೆ ಕೇಳಬೇಕು. ಅವರ ಮನೆಯಲ್ಲಿ ಮಹಿಳೆಯರು ಇದ್ದಾರೆ. ತಾಯಿ ಜನ್ಮ ಕೊಟ್ರೆ ಇವರು ಆಚೆ ಬರೋಕೆ ಸಾಧ್ಯವಿಲ್ಲ. ತಾಯಿ ಬಿಟ್ಟು ಬೇರೆ ರೀತಿ ಹುಟ್ಟೋದನ್ನ ಬಿಜೆಪಿ ಅವರು ಕಂಡುಕೊಂಡಿರಬೇಕು. ಕರ್ಣ ಹುಟ್ಟಿದ ರೀತಿ ಜನ್ಮ ತಾಳಿದ್ದಾರಾ? ಅವರ ನಾಯಕರೇ ಅದನ್ನ ಹೇಳಿದ್ದಾರೆ. ಮೋದಿ ಅವರೇ ನಾನು ದೈವ ಸಂಭೂತ ಅಂತ ಹೇಳಿದ್ದಾರೆ. ಹಾಗೆ ಏನಾದ್ರು ಬಿಜೆಪಿ ಅವರ ಹುಟ್ಟಿದ್ರಾ? ಬಿಜೆಪಿಯಲ್ಲಿ ಲಂಗು-ಲಗಾಮು ಇಲ್ಲ ಅಂತ ಅನ್ನಿಸುತ್ತೆ. ಅದಕ್ಕೆ ಪದೇ ಪದೇ ಹೀಗೆ ಮಾತಾಡ್ತಿದ್ದಾರೆ .ಬಿಜೆಪಿ ಅವರು ಏನೇನು ಮಾತಾಡಿದರು ಪಟ್ಟಿ ಮಾಡಿ ತೋರಿಸಿ ಅಂತ ಮಾಧ್ಯಮಗಳ ಮೇಲೆ ಆರೋಪ ಮಾಡಿದ್ರು.
ಸಿಟಿ ರವಿಯನ್ನ ಎನ್‌ಕೌಂಟರ್ ಮಾಡೋ ಪ್ಲ್ಯಾನ್ ಮಾಡಿದ್ರು ಕೇಂದ್ರ ಸಚಿವ ಜೋಷಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಅಂಬೇಡ್ಕರ್ ಮೇಲಿನ ಹೇಳಿಕೆ ಮರೆ ಮಾಚಲಿ ಬಿಜೆಪಿ ಕುತಂತ್ರ ಮಾಡಿದೆ. ಬಿಜೆಪಿ ಅವರು ಮಾಡ್ತಿರೋದನ್ನ ಮಾಧ್ಯಮಗಳು ಚೆನ್ನಾಗಿ ತೋರಿಸ್ತಿದ್ದಾರೆ. ಈ ದೇಶ ಅಂಬೇಡ್ಕರ್ ಸಂವಿಧಾನದಿಂದ ಉಳಿದಿದೆ. ನೀವು ಅಂಬೇಡ್ಕರ್ ಬಗ್ಗೆ ಅಪಮಾನ ಆಗಿದ್ದು ತೋರಿಸದೇ ಸಿಟಿ ರವಿ ತೋರಿಸ್ತಿದ್ದೀರಾ. ಮೌಲ್ಯಗಳು ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಮುಂದೆ ಬರುತ್ತದೆ ಎಂದರು.