– ಬೆಂಗಳೂರು ಉಸ್ತುವಾರಿ ಹಕ್ಕ-ಜಗ್ಗಾಟಕ್ಕೆ ತಲೆ ಹಾಕಲ್ಲ
ಚಿಕ್ಕಮಗಳೂರು: ಆರ್‌ಎಸ್‌ಎಸ್ ಆನೆ ಇದ್ದಂತೆ. ಆನೆ ಯಾವತ್ತೂ ತನ್ನ ದಾರಿ ಕಡೆ ಹೋಗುತ್ತಿರುತ್ತದೆ. ದಾರಿ ಮಧ್ಯೆ ಅಕ್ಕ-ಪಕ್ಕ ಯಾರು ಏನು ಮಾತನಾಡುತ್ತಾರೆಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ರೀತಿ ಆರ್‌ಎಸ್‌ಎಸ್ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮದುವೆಯಾಗಬೇಕೆಂದು ಹಠಕ್ಕೆ ಬಿದ್ದು ಪ್ರಾಣ ಬಿಟ್ಟ ಯುವಕ
ನಗರದಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾವು ಅವರ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರ್‌ಎಸ್‌ಎಸ್ ಆನೆ ಇದ್ದಂತೆ. ಅದರ ಪಾಡಿಗೆ ಅದು ಹೋಗುತ್ತಿರುತ್ತೆ. ಬೇರೆ ಯಾರು ಏನು ಮಾಡುತ್ತಾರೆ ಎಂದು ಅದು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರ್‌ಎಸ್‍ಎಸ್‍ಅನ್ನು ಆನೆಗೆ ಹೋಲಿಸಿದ್ದಾರೆ. ಆರ್‌ಎಸ್‌ಎಸ್ ತನ್ನ ಪಾಡಿಗೆ ಸಂಸ್ಕಾರ ಕೊಡುವ ಕೆಲಸ ಮಾಡುತ್ತಿದೆ. ಇಂತಹ ಹೇಳಿಕೆಗಳಿಂದ ಅದು ವಿಚಲಿತ ಆಗುವುದಿಲ್ಲ. ಸಂಘದಲ್ಲಿ ಪ್ರತಿಕ್ರಿಯೇ ಕೊಡುವ ಪದ್ಧತಿಯೂ ಇಲ್ಲ ಎಂದರು.
ಆರ್‌ಎಸ್‌ಎಸ್ ದೇಶಭಕ್ತ ಸಂಘಟನೆಯಾಗಿದೆ. ಅದು ಇರುವ ಕಾರಣಕ್ಕೋಸ್ಕರವೇ ದೇಶದ ಹಿಂದುಗಳಲ್ಲಿ ಒಗ್ಗಟ್ಟು, ರಾಷ್ಟ್ರೀಯತೆ ಭಾವನೆ ಬಲಗೊಳ್ಳಲು ಕಾರಣವಾಗಿದೆ. ಒಂದು ವೇಳೆ ಅದು ಇಲ್ಲದಿದ್ದರೆ ನಾವು ಜಾತಿ ಆಧಾರದಲ್ಲಿ, ಪ್ರಾದೇಶಿಕತೆ ಆಧಾರದಲ್ಲಿ ಕಿತ್ತಾಡಿ ಮೂರನೆಯವರಿಗೆ ಲಾಭ ಮಾಡಿಕೊಡುತ್ತಿದ್ದೆವು. ಹಿಂದೆ ಯಾರ್ಯಾರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದರು ಅವರು ತಮ್ಮ ಸಾಮರ್ಥ್ಯದ ಮೇಲೆ ಆಕ್ರಮಣ ಮಾಡಿದರು ಎಂದು ಹೇಳುವುದಕ್ಕಿಂತ ನಮ್ಮ ಒಡಕಿನ ಲಾಭ ಪಡೆದು ಆಕ್ರಮಣ ಮಾಡಿ ನಮ್ಮ ಸಂಪತ್ತು, ಸಂಸ್ಕೃತಿಯನ್ನ ನಾಶ ಮಾಡಿ, ನಮ್ಮ ದೇಶವನ್ನ ತುಂಡು ಮಾಡಿದರು. ಆ ಸತ್ಯದ ಅರಿವಿದ್ದರೆ ಆರ್‍ಎಸ್‍ಎಸ್ ಅರ್ಥ ಆಗುತ್ತೆ ಎಂದರು. ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ- ನಾಲ್ವರ ಬಂಧನ
ಆ ಸತ್ಯದ ಅರಿವು ಇಲ್ಲದೆ, ನಾನು ಬದುಕಿರುವವರೆಗೂ ಓಟು ಬಂದರೆ ಸಾಕು ಅನ್ನುವಂತಹಾ ಮನೋಭಾವನೆ ಇರುವವರಿಗೆ ಆರ್‍ಎಸ್‍ಎಸ್ ಅರ್ಥ ಆಗಲ್ಲ. ಯಾರಿಗೆ ತನ್ನ ಸ್ವಾರ್ಥಕ್ಕಿಂತ ದೇಶ ಮಹತ್ವ ಎಂದು ಅನಿಸುತ್ತೋ ಅವರಿಗೆ ಆರ್‌ಎಸ್‌ಎಸ್. ಅರ್ಥವಾಗುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್‍ಗೆ ಯೋಗಿ ಪ್ರತಿಕ್ರಿಯೆ
ಇದೇ ವೇಳೆ, ಬೆಂಗಳೂರು ಉಸ್ತುವಾರಿಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟದ ಕುರಿತಂತೆ ಪ್ರತಿಕ್ರಿಯೇ ನೀಡಿದ ಅವರು, ನಾನು ಆ ವಿಷಯದಲ್ಲಿ ತಲೆ ಹಾಕಲ್ಲ. ಯಾರಿಗೆ ಉಸ್ತುವಾರಿ ಮಾಡಬೇಕು ಅನ್ನೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಆಯಾ ಜಿಲ್ಲೆಯ ಪರಿಸ್ಥಿತಿ ಆಧರಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ನಾವೇನೂ ಹೇಳುವುದಿಲ್ಲ. ಪಕ್ಷದ ಸಲಹೆ ಕೇಳಿದರೆ ಅಧ್ಯಕ್ಷರು ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಇದ್ದಾರೆ. ಸಲಹೆಗಳಿದ್ದಾರೆ ಅವರು ಕೊಡುತ್ತಾರೆ ಎಂದರು. ಇದನ್ನೂ ಓದಿ: ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ