ಕಲಬುರಗಿ: ನಾವು ಮುಸ್ಲಿಮರ ಪರವಾಗಿ ಎಷ್ಟೇ ಕೆಲಸ ಮಾಡಿದರೂ ಅವರು ನಮಗೆ ಮತ ಹಾಕಲ್ಲ, ಏಕೆಂದರೆ ನಾವು ಅವರನ್ನ ಓಲೈಕೆ ಮಾಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಟಫ್ ಪೈಟ್ ಇದೆ, ಆದ್ರೂ ಎರಡರಲ್ಲಿ ಎನ್‌ಡಿಎ ಗೆಲ್ಲುತ್ತೆ ಅಂತ ವಿಶ್ವಾಸವಿದೆ ಎಂದಿದ್ದಾರೆ. ಪ್ರಯತ್ನ ನಾವು ಪಟ್ಟಿದ್ದೆವೆ ತೀರ್ಪು ಜನರು ಕೊಡ್ತಾರೆ ಎಂದಿದ್ದಾರೆ.
Advertisement
ಮಹಾರಾಷ್ಟ್ರದಲ್ಲಿ ಕರ್ನಾಟಕದಿಂದ ನಾನು ಸೇರಿ ಹಲವು ಜನರು ಕೆಲಸ ಮಾಡಿದ್ದೆವೆ. ಪಶ್ಚಿಮ ಮಹಾರಾಷ್ಟ್ರದ 58 ಕ್ಷೇತ್ರದಲ್ಲಿ ಓಡಾಟ ನಡೆಸಿದ್ದೇನೆ. ಎನ್‌ಡಿಎ 221 ಕ್ಷೇತ್ರದಲ್ಲಿ ಮುನ್ನಡೆ ಕಾಯ್ಡುಕೊಂಡಿದೆ. ಇದೇ ಅಂತಿಮ ಅಲ್ಲ, ಜಾರ್ಖಂಡ್‌ನಲ್ಲಿ ನಮ್ಮ ನೀರಿಕ್ಷೆಯಷ್ಟು ಮುನ್ನಡೆ ಸಿಕ್ಕಿಲ್ಲ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರ್ತೀವಿ ಅನ್ನೋ ವಿಶ್ವಾವಿದೆ. ಕರ್ನಾಟಕದಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು ಎಂದು ಹೇಳಿದ್ದಾರೆ.
Advertisement
ಚನ್ನಪಟ್ಟಣದಲ್ಲಿ ಅಲ್ಲಿನ ಮುಸ್ಲಿಂ ಮತಗಳ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಯೋಗೇಶ್ವರ್‌ಗೆ ಮುನ್ನಡೆ ಇರಬೇಕು. ನಾವು ಎಷ್ಟೇ ಅವರ ಪರ ಕೆಲಸ ಮಾಡಿದ್ರು ಮುಸ್ಲಿಮರು ನಮಗೆ ಮತ ಹಾಕಲ್ಲ. ಶಿಗ್ಗಾಂವಿ ನಗರದಲ್ಲೂ ಮುಸ್ಲಿಂ ಮತಗಳು ಹೆಚ್ಚಾಗಿದೆ. ಓಲೈಕೆ ನಾವು ಮಾಡಲ್ಲ ಹಾಗಾಗಿ ಅವರು ನಮಗೆ ಮತ ಹಾಕಲ್ಲ. ತೀರ್ಪು ಏನೇ ಬಂದರೂ ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇವೆ. ಆದ್ರೆ ಕಾಂಗ್ರೆಸ್ ಮೂರು ಗೆದ್ದರೆ ಜನಾದೇಶ ಅಂತಾರೆ. ಬರಲಿಲ್ಲ ಅಂದ್ರೆ ಇವಿಎಂ ದೋಷ ಅಂತಾ ಹೇಳ್ತಾರೆ ಎಂದು ಕುಟುಕಿದ್ದಾರೆ.
Advertisement
ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ:
ರಾಜ್ಯದಲ್ಲಿ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ 23,210 ಮತಗಳ ಮುನ್ನಡೆ ಸಾಧಿಸಿದ್ದಾರೆ. 15ನೇ ಸುತ್ತಿನಲ್ಲಿ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 8,239 ಮತಗಳ ಮುನ್ನಡೆಯಲ್ಲಿದ್ದಾರೆ. ಶಿಗ್ಗಾಂವಿಯಲ್ಲಿ ಯಾಸೀರ್ ಖಾನ್ ಪಠಾಣ್ 12,251 ಮತಗಳಿಂದ ಮುನ್ನಡೆಯಲ್ಲಿದ್ದಾರೆ.