ನವದೆಹಲಿ : ನಿಜವಾಗಿ ಕಾಂಗ್ರೆಸ್‌ಗೆ (Congress) ನಿಯತ್ತಿದ್ದರೆ ತಾನು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮೊದಲು ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಸವಾಲು ಹಾಕಿದರು.
ನವದೆಹಲಿಯಲ್ಲಿ (Newdelhi) ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಜನರ ವಿಶ್ವಾಸ ಗಳಿಸಲು ವಿಫಲವಾದಾಗ ಈ ರೀತಿಯ ಭರವಸೆ ನೀಡುತ್ತಿದ್ದಾರೆ. ಹಾಲಿ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯದಲ್ಲಿ ಯಾಕೆ ಈ ಯೋಜನೆಗಳಲ್ಲ? ನಿಜವಾಗಿ ಕಾಂಗ್ರೆಸ್‌ಗೆ ನಿಯತ್ತಿದ್ದರೆ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮೊದಲು ಈ ಯೋಜನೆ ಜಾರಿ ಮಾಡಲಿ. ಈ ಭರವಸೆ ನೋಡಿದರೆ ಒಟ್ಟಾರೆ ಸುಳ್ಳು ಹೇಳಿ, ಮೋಸ ಮಾಡಿ ಅಧಿಕಾರ ಹಿಡಿಯುವ ವ್ಯಾಮೋಹಕ್ಕೆ ಕಾಂಗ್ರೆಸ್ ನಾಯಕರು ಬಂದಂತೆ ಕಾಣುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬುದ್ಗಾಮ್ ಕೋರ್ಟ್ ಸಂಕೀರ್ಣದ ಬಳಿ ಎನ್‌ಕೌಂಟರ್ – ಇಬ್ಬರು ಉಗ್ರರ ಹತ್ಯೆ
Advertisement
Advertisement
ಸೋಮವಾರ ಬೆಂಗಳೂರಿಗೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ (Priyanka Gandhi) ನಾ ನಾಯಕಿ ಎಂದು ಹೇಳಿಕೊಂಡಿದ್ದಾರೆ ಇದು ಹಾಸ್ಯಾಸ್ಪದ. ನಾಯಕತ್ವ ಜನರಿಂದ ಬರಬೇಕು, ನಮಗೆ ನಾವೇ ಹೇಳಿಕೊಳ್ಳುವಂತದಲ್ಲ, ಲೇಬಲ್ ಹಚ್ಚಿಕೊಂಡವರು ನಾಯಕರಾಗಲು ಸಾಧ್ಯವಿಲ್ಲ. ಮೈ ಲಡ್ಕಿ ಹೂ ಮೈ ಲಡ್ ಸಕ್ತಿ ಹು ಎಂದು ಉತ್ತರ ಪ್ರದೇಶ ಚುನಾವಣೆಯಲ್ಲಿ ಹೇಳಿದ್ದರು. ಆದರೆ ಅದರ ಫಲಿತಾಂಶ ಏನಾಯಿತು ಡಿಎನ್ಎ ಇಟ್ಟುಕೊಂಡು ನಾಯಕರಾಗಲು ಸಾಧ್ಯವಿಲ್ಲ. ಅವರು ಬರೀ ಗುಲಾಮರಿಗೆ ನಾಯಕರಾಗಬಹುದು ಜನರಿಗಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸೈಕಲ್ ಹೊಡೆಯುತ್ತಿದ್ದ ಬಾಲಕನ ಮೇಲೆ ಗೂಳಿ ದಾಳಿ!
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k