ಚಿಕ್ಕಮಗಳೂರು: ಕಾಂಗ್ರೆಸ್ (Congress) ಪಾಕಿಸ್ತಾನದಲ್ಲಿ (Pakistan) ಸರ್ವೇ ಮಾಡಿದರೆ 150 ಅಲ್ಲ 200 ಸ್ಥಾನಗಳೇ ಬರಬಹುದು. ಆದರೆ, ನಮ್ಮ ರಾಜ್ಯ-ದೇಶದಲ್ಲಿ ಆಗಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ವ್ಯಂಗ್ಯವಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಿನೇ, ದಿನೇ ಕಾಂಗ್ರೆಸ್‌ಗೆ ಮತ ಹಾಕುವವರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಅಷ್ಟೇ ಅಲ್ಲದೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಡೆಪಾಜಿಟ್ ಉಳಿಸಿಕೊಳ್ಳುವುದು ಕಷ್ಟ ಎಂಬಂತಾಗಿದೆ ಎಂದು ಹೇಳಿದರು.
Advertisement
Advertisement
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ (Siddaramaiah) ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಸುಳ್ಳು ಯಾರು ಹೇಳುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಚೆನ್ನಾಗಿ ಗೊತ್ತಿದೆ. ಚಿಕ್ಕಮಗಳೂರಿಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜನ್ನು ರದ್ದು ಮಾಡಿ, ದತ್ತಪೀಠಕ್ಕೆ ಮೋಸ ಮಾಡಿದ್ದು ಸಿದ್ದರಾಮಯ್ಯ. ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿ ಗ್ಯಾಂಗ್‌ಗೆ ಸಪೋರ್ಟ್ ಮಾಡಿದ್ದು ಕಾಂಗ್ರೆಸ್ ಆಗಿದ್ದು, ಎಸ್.ಡಿ.ಪಿ.ಐ. ಮೇಲಿನ ಕೇಸ್ ಹಿಂಪಡೆದು, ಕೇಸ್ ಹಿಂಪಡೆದಿದ್ದು ನಾವಲ್ಲ ಅಂದವರು ಕಾಂಗ್ರೆಸ್‌ನವರೇ ಆಗಿದ್ದಾರೆ ಎಂದು ಕಿಡಿಕಾರಿದರು.
Advertisement
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಸೀಟ್ ಬರಲ್ಲ ಎಂದಿದ್ದರು. ಆದರೆ ಸಂಸದ ಚುನಾವಣೆಯಲ್ಲಿ ಜನ 25 ಸ್ಥಾನ ಗೆಲ್ಲಿಸಿದ್ದರು. ಅಪ್ಪನ ಆಣೆ ಯಡಿಯೂರಪ್ಪ ಸಿಎಂ ಆಗಲ್ಲ ಎಂದಿದ್ದರು. ಬಿಎಸ್‌ವೈ ಸಿಎಂ ಆದರೂ ಸುಳ್ಳು ಹೇಳಿದ್ದು ಯಾರೂ ಎಂದರು. ನಾನು ಪಕ್ಕಾ ಆರ್‌ಎಸ್‌ಎಸ್ ಅದರಲ್ಲಿ ನೋ ಡೌಟ್. ಸಂಘ ಸಂಸ್ಕಾರ, ದೇಶಭಕ್ತಿ ಕಲಿಸುತ್ತೆ, ನಾನು ಸುಳ್ಳು ಹೇಳುವ ರಾಜಕಾರಣಿ ಅಲ್ಲ. ನಾವು ಏನು ಹೇಳುತ್ತೇವೋ ಅದನ್ನೇ ಮಾಡೋರು, ಏನ್ ಮಾಡುತ್ತೇವೋ ಅದನ್ನೇ ಹೇಳೋರು ಎಂದರು.
Advertisement
ಇದೇ ವೇಳೆ, ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ದಲಿತರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಆದರೆ, ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ. ಪರಮೇಶ್ವರ್ ಹಾಗೂ ಮುನಿಯಪ್ಪ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ಸಿಗರು. ಇದು ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎನ್ನುವಷ್ಟೇ ಬಹಿರಂಗ ಸತ್ಯ. ಸಿದ್ದು ಎದೆಯೊಳಗಿಂದ ನಾನೇ ಸೋಲಿಸಿದ್ದು ಎಂದು ಕೇಳಿಸುತ್ತೆ. ಪರಮೇಶ್ವರ್ ಸೋಲಿಸಲು ಹಫ್ತಾ ಯಾರಿಗೆ ಕೊಟ್ಟಿದ್ದು, ಅವರೇ ಹೊರಗಡೆ ಹೇಳಿದ್ದಾರೆ. ಸಂಕಟವನ್ನು ಎಷ್ಟು ದಿನ ಒಳಗಡೆ ಇಟ್ಟುಕೊಳ್ಳಲು ಆಗುತ್ತದೆ, ಸ್ಫೋಟ ಆಗಲೇಬೇಕು, ಈಗ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರ ಜಾಗದಲ್ಲಿ ನಾನಿದ್ದರೂ ಅದನ್ನೇ ಹೇಳುತ್ತಿದ್ದೆ. ಈಶ್ವರಪ್ಪ ಪಕ್ಷ ಕಟ್ಟಿದ ಹಿರಿಯ ನಾಯಕರಲ್ಲಿ ಒಬ್ಬರು. ಅಂದು ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆದರೆ, ಇಂದು ತನಿಖೆಯಲ್ಲಿ ಅವರ ಪಾತ್ರ ಇಲ್ಲವೆಂದು ಸಾಬೀತಾಗಿದೆ. ಈಗ ಅವರು ಮಂತ್ರಿ ಸ್ಥಾನ ಕೇಳುವುದು ತಪ್ಪಲ್ಲ, ಅವರಿಗೆ ಕೊಡಬೇಕಿತ್ತು ಎಂದರು. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆ ತಯಾರಿ – ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ
ಈಶ್ವರಪ್ಪ (KS Eshwarappa) ಅವರ ಗೌರವಕ್ಕೆ ಯಾವುದೇ ಕುಂದು ಉಂಟಾಗಲ್ಲ. ನಿನ್ನೆ ಕೂಡ ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಪಕ್ಷದ ಗೆಲುವಿನ ಬಗ್ಗೆ ಸಲಹೆ ನೀಡಿದ್ದಾರೆ. ಅವರು ಯಾವತ್ತೂ ನಮ್ಮ ಹಿರಿಯ ನಾಯಕರಲ್ಲಿ ಒಬ್ಬರು. ಅವರ ಗೌರವಕ್ಕೆ ಕುಂದು ಬರಲು ಅವಕಾಶ ನೀಡುವುದಿಲ್ಲ. ಅವರು ಮಂತ್ರಿ ಆಗಿದ್ದರೆ ಅತ್ಯಂತ ಸಂತೋಷ ಪಡುವ ವ್ಯಕ್ತಿಯಲ್ಲಿ ನಾನೂ ಒಬ್ಬ ಎಂದು ತಿಳಿಸಿದರು. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪ್ರಾಂಶುಪಾಲನ ವಿರುದ್ಧ ರೇಪ್ ಕೇಸ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k