ಬೆಂಗಳೂರು: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಎಂಎಲ್‌ಸಿ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ಖಚಿತ ಎಂದು ಸಿಐಡಿ ಮೂಲಗಳು ತಿಳಿಸಿವೆ. ಅಸಲಿ ವೀಡಿಯೋ ಇದೀಗ ಸಿಐಡಿಗೆ ಲಭ್ಯವಾಗಿದೆ.
ಸಿ.ಟಿ.ರವಿ ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಮುಂದಾಗಿತ್ತು. ಆದರೆ, ಅದಕ್ಕೆ ಸಿ.ಟಿ.ರವಿ ನಿರಾಕರಿಸಿದ್ದರು. ಕೊನೆಗೆ ಡಿಪಿಎಆರ್‌ನಿಂದ ಅಸಲಿ ವೀಡಿಯೋವನ್ನು ಸಿಐಡಿ ವಶಕ್ಕೆ ಪಡೆದಿತ್ತು.
Advertisement
ಬೆಳಗಾವಿ ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ನಡೆದಿದ್ದ ಘಟನಾವಳಿಗಳ ಕುರಿತು ವೀಡಿಯೋ-ಆಡಿಯೋ ದಾಖಲೆ ನೀಡುವಂತೆ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ (ಡಿಎಪಿಆರ್) ಸಿಐಡಿ ಮನವಿ ಮಾಡಿತ್ತು.
Advertisement
ಸದನದಲ್ಲಿ ನಿಂದನೆ ಕೃತ್ಯ ನಡೆದ ವೇಳೆ ಚಿತ್ರೀಕರಿಸಿದ್ದ 4 ಗಂಟೆ ವೀಡಿಯೋವನ್ನು ಸಿಐಡಿಗೆ ಸಲ್ಲಿಸಲಾಗಿತ್ತು.