ಚಿಕ್ಕಬಳ್ಳಾಪುರ: ರಾಮನಗರ ಜಿಲ್ಲೆಯ ಕನಕಪುರ ಬಳಿಯ ಹಾರೋಬೆಲೆ ಬಳಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜಮೀನು ಮಂಜೂರು ವಿಚಾರದಲ್ಲಿ ಸಚಿವ ಸಿ.ಟಿ.ರವಿ ಸಾಫ್ಟ್ ಕಾರ್ನರ್ ತೋರಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಸಿಟಿ ರವಿ, ಯೇಸು ಪ್ರತಿಮೆಯ ಕಾರ್ಯ ಸದುದ್ದೇಶದಿಂದ ಆಗಿದ್ದರೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಅದು ರಾಜಕೀಯ ಕಾರಣಕ್ಕೆ ಮಾತ್ರ ಆಗಬಾರದು. ದೇವನೊಬ್ಬ ನಾಮ ಹಲವು ಎನ್ನುವುದು ಹಿಂದೂ ಧರ್ಮದ ತತ್ವ, ಯಾರನ್ನು ಯಾವ ರೂಪದಲ್ಲಿ ಪೂಜೆ ಮಾಡಿದರೂ ಭಗವಂತ ಒಬ್ಬನೇ. ಆ ವಿಷಯದಲ್ಲಿ ವಿವಾದವಿಲ್ಲ. ನಮ್ಮ ದೇಶದಲ್ಲಿ ಸರ್ವಧರ್ಮ ಸಮಭಾವದ ಸಂಸ್ಕೃತಿ ಉಳಿಯಬೇಕಿದೆ ಎಂದರು. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ
Advertisement
Advertisement
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಪ್ರತಿಮೆಗೆ ಜಮೀನು ಮಂಜೂರು ವಿಚಾರ ಮಾಡುತ್ತಿದ್ದಾರೆ ಎನ್ನುವ ಅನುಮಾನದ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಅವರು ರಾಜಕಾರಣಿ ಆಗಿರುವುದರಿಂದ ಸಂದರ್ಭಕ್ಕೆ ತಕ್ಕಂತೆ ಆ ರೀತಿ ವ್ಯಕ್ತವಾಗುತ್ತಿದೆ. ಅವರ ಮನಸ್ಸಿನಲ್ಲಿ ಏನಿದೆ ಅಂತ ಎದೆ ಬಗೆದು ತೋರಿಸಲು ಆಗುವುದಿಲ್ಲ. ಡಿಕೆ ಶಿವಕುಮಾರ್ ಅವರ ಮನಸ್ಸಲಿರುವುದನ್ನು ಮಾನಿಟರ್ ಮಾಡಲು ಆಗಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಪಾಲಿ ಬೆಟ್ಟ ಕಾಲಭೈರವೇಶ್ವರನ ಸ್ಥಾನ, ಬೇರೆಯದ್ದಕ್ಕೆ ಅವಕಾಶ ಇಲ್ಲ: ಸಚಿವ ಆರ್.ಅಶೋಕ್
Advertisement
ರಾಮಮಂದಿರ ಯಾಕೆ ಬೇಕು ಅಂತ ಹಲವರು ಕೇಳಿದರು. ರಾಮಮಂದಿರ ಬದಲು ಶೌಚಾಲಯ ಅಥವಾ ಆಸ್ಪತ್ರೆ ಕಟ್ಟಿ ಅಂತ ಸಲಹೆ ಕೊಟ್ಟರು. ಸರ್ದಾರ್ ವಲ್ ಭಾಯ್ ಪಟೇಲ್ ಪ್ರತಿಮೆ ನಿರ್ಮಾಣಕ್ಕೆ ಅಷ್ಟೆಲ್ಲಾ ಹಣ ಖರ್ಚು ಮಾಡಬೇಕಿತ್ತಾ ಅಂತ ಸಹ ಹಲವರು ಪ್ರಶ್ನಿಸಿದ್ದರು. ಈ ವಿಚಾರದಲ್ಲಿ ನಾನೇನಾದರು ಹೇಳಿದ್ದರೆ ರಾಜಕೀಯ ವಿವಾದ ಆಗುತ್ತದೆ. ವಿವಾದದ ದಾಳ ಆಗುವುದಕ್ಕೆ ನಾನು ಬಯಸುವುದಿಲ್ಲ ಎಂದರು.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ರಾಜಕೀಯ ಕಾರಣಕ್ಕೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಕೇಸ್‍ಗಳನ್ನ ವಾಪಾಸ್ ಪಡೆದಿದೆ. ಆದರೆ ಎಸ್‍ಡಿಪಿಐ ಹಾಗೂ ಪಿಎಫ್‍ಐಗಳ ಟ್ರ್ಯಾಕ್ ರೆಕಾರ್ಡ್ ಹಾಗೂ ಉದ್ದೇಶ ದೇಶ ಒಡೆಯುವ ಸಂಚು ಇದ್ದು ಸಮಾಜಘಾತುಕತನ ಇದ್ದರೆ ಅವರನ್ನ ಮನ್ನಿಸಿ ಕೇಸ್ ವಾಪಸ್ ತೆಗೆಯುವುದು ಒಳ್ಳೆಯ ಕಾರ್ಯವಲ್ಲ. ಇದರಿಂದ ಈಗ ತಮ್ಮದೆ ಪಕ್ಷದ ತನ್ವೀರ್ ಸೇಠ್ ಎಸ್‍ಡಿಪಿಐ ನಿಂದ ಹಲ್ಲೆಗೊಳಗಾಗಬೇಕಾಯಿತು. ಹೀಗಾಗಿ ದೇಶದ ಗಲಭೆಗಳನ್ನು ಸೃಷ್ಟಿ ಮಾಡುವುದರಲ್ಲಿ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಚು ಇದೆ ಎಂದು ದೂರಿದರು.
ಸಿಎಎ ಪೌರತ್ವ ಕೊಡುವ ಬಿಲ್ ಪೌರತ್ವ ಕಸಿದುಕೊಳ್ಳುವ ಬಿಲ್ ಅಲ್ಲ. ಆದರೂ ಅವರು ದೇಶವನ್ನ ಒಡೆಯಲು ಷಡ್ಯಂತ್ರ ಮಾಡುತ್ತಿದ್ದಾರೆ. ಮಹಮ್ಮದ್ ಆಲಿ ಜಿನ್ನಾ ಕೂಡ ಇದೇ ರೀತಿ ಮಾಡಿ ಪಾಕಿಸ್ತಾನ ದಕ್ಕಿಸಿಕೊಂಡ. ಹೀಗಾಗಿ ಅವರ ಕೇಸ್ ಗಳನ್ನು ಪುನರ್ ಪರಿಶೀಲನೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.