ಚಿಕ್ಕಮಗಳೂರು: ದೊಡ್ಡ ಪರಂಪರೆಯ ಕಾಂಗ್ರೆಸ್ ದೆಹಲಿಯಲ್ಲಿ ಅವಸಾನದ ಅಂಚಿನಲ್ಲಿದೆ. ಇನ್ನಾದರೂ ಕಾಂಗ್ರೆಸ್ಸಿರು ಟೀಕೆಯನ್ನೇ ಉದ್ಯೋಗ ಮಾಡಿಕೊಳ್ಳುವುದನ್ನು ಬಿಡಲಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಗಂಣದಲ್ಲಿ ಮಾತನಾಡಿದ ಅವರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ತೀರ್ಪನ್ನು ಸ್ವಾಗತಿಸುತ್ತೇವೆ ಎಂದರು. ಅಲ್ಲದೇ ಸೋಲಿನಲ್ಲೂ ಕಾಂಗ್ರೆಸ್‍ಗೆ ತಿವಿದಿದ್ದಾರೆ. ಫಲಿಶಾಂತ ಏನೇ ಇರಲಿ. ಜನಾಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಕೆಲವರಿಗೆ ಒಂದು ಕಾಯಿಲೆ ಇರುತ್ತೆ. ಗೆದ್ದಾಗ ಮೋದಿ ವಿರುದ್ಧ, ಬಿಜೆಪಿ ವಿರುದ್ಧ ಎಂದು ಸಂಭ್ರಮಿಸಿ, ಸೋತಾಗ ಇವಿಎಂ ಮೇಲೆ ಆರೋಪ ಮಾಡುತ್ತಾರೆ. ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದರು. ಇದನ್ನು ಓದಿ: ದೆಹಲಿಯ ಜನತೆಯಿಂದ ಹೊಸ ರಾಜಕೀಯಕ್ಕೆ ಜನ್ಮ: ಅರವಿಂದ್ ಕೇಜ್ರಿವಾಲ್
Advertisement
Advertisement
ನಾವು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುವುದಿಲ್ಲ. ಫಲಿತಾಂಶವನ್ನು ತಿರುವಿ ಹಾಕೋಕೆ ಇವಿಎಂಗೆ ನೆಟ್ ಕನೆಕ್ಷನ್ ಇರೋದಿಲ್ಲ. ಅದು ಅವರಿಗೂ ಗೊತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೀರ್ಘ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೆಹಲಿಯಲ್ಲಿ ಶೂನ್ಯ ಸಂಪಾದಿಸಿದೆ. ನಾವು ಸೋಲು-ಗೆಲುವು ಎರಡನ್ನೂ ಕಂಡಿದ್ದೇವೆ. ಅದು ಸ್ವಾಭಾವಿಕ ಕೂಡ. ಲೀಡರ್ ಶಿಪ್, ಸಮಸ್ಯೆ, ಸ್ಥಳೀಯ ನಾಯಕತ್ವವನ್ನ ಆಧಾರಿಸಿ ಮತ ಹಾಕ್ತಾರೆ ಎಂಬುವದು ಸ್ಪಷ್ಟವಾಗುತ್ತೆ ಎಂದು ತಿಳಿಸಿದರು. ಇದನ್ನು ಓದಿ: ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?
Advertisement
Advertisement
ನಮ್ಮದು ವಿರೋಚಿತ ಹೋರಾಟ, ಅಸಹಾಯಕತೆಯ ಶರಣಾಗತಿಯಲ್ಲ. ವಿಪಕ್ಷಗಳು ಒಂದಾದಾಗ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಸಂದೇಶವನು ಈ ಚುನಾವಣೆ ನೀಡಿದೆ. ನಾವು ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತೇವೆ. ನಮ್ಮದು ಚುನಾವಣೆ ಫಲಿತಾಂಶಕ್ಕಾಗಿ ಹುಟ್ಟಿರೋ ಪಕ್ಷವಲ್ಲ. ದೇಶವನ್ನು ಸಮರ್ಥವಾಗಿ ಉಳಿಸಬೇಕೆಂಬ ಉದ್ದೇಶದಿಂದ ಹುಟ್ಟಿರೋ ಪಕ್ಷ. ಆರಂಭದಲ್ಲಿ ಠೇವಣಿ ಕಳೆದುಕೊಂಡೇ ನಮ್ಮ ಪಕ್ಷವನ್ನು ಕಟ್ಟಿರೋದು. ನಾವು ಸೋಲು-ಗೆಲುವಿನಿಂದ ವಿಚಲಿತರಾಗುವುದಿಲ್ಲ. ಸೋಲಿನಿಂದ ವಿಚಲಿತರಾಗೋದು, ಅಧಿಕಾರ ಕಳೆದುಕೊಂಡ ತಕ್ಷಣ ‘ಫಾದರ್ ಪ್ರಾಪರ್ಟಿ’ ಕಳೆದುಕೊಂಡಂತೆ ಆಡೋದು ನಮ್ಮ ಪಕ್ಷದ ಜಾಯಮಾನವಲ್ಲ ಎಂದರು.