ಚಿಕ್ಕಮಗಳೂರು: ಅರಾಜಕತಾವದಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಸಂಘರ್ಷ ಸೃಷ್ಟಿ ಆಗಬೇಕು ಎಂದು ಅರಾಜಕತೆ ಸೃಷ್ಟಿ ಮಾಡಿರುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಬೆಳಗಾವಿಯ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕೆಲವರು ಅರಾಜಕತೆ ಮತ್ತು ಸಂಘರ್ಷವನ್ನ ಹುಟ್ಟುಹಾಕಬೇಕೆಂದು ಸಂಚು ನಡೆಸಿದ್ದಾರೆ ಎಂದು ನನಗೆ ಅನಿಸುತ್ತಿದೆ. ಕೊಲ್ಲಾಪುರದಲ್ಲಿ ಕನ್ನಡ ಬಾವುಟವನ್ನ ಸುಟ್ಟರು. ಕೊಲ್ಲಾಪುರದ ಮಹಾರಾಷ್ಟ್ರದಲ್ಲಿ ಯಾವ ಪಾರ್ಟಿಯ ಸರ್ಕಾರ ಇದೆ. ಕಾಂಗ್ರೆಸ್ ಸರ್ಕಾರದ ಪಾಲುದಾರರು. ಇಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯುವ ಕೆಲಸ ಮಾಡಿದರು. ಇವೆರಡರ ಉದ್ದೇಶ ಸಂಘರ್ಷ ಆಗಬೇಕು, ಕರ್ನಾಟಕ-ಮಹಾರಾಷ್ಟ್ರ ಸಂಘರ್ಷ ಆಗಲಿ ಎಂಬಂತಹ ಅರಾಜಕತಾವಾದಿಗಳು ಸೃಷ್ಟಿ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇದನ್ನೂಓದಿ: ಚಿಕ್ಕಮಗಳೂರಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಸಿ.ಟಿ.ರವಿ
Advertisement
“ಭವತಿ ಭಿಕ್ಷಾಂದೇಹಿ ದೇಹಿ ಭಿಕ್ಷಾಂದೇಹಿ”
ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ಶ್ರೀ ಗುರು ದತ್ತರ ದರ್ಶನಕ್ಕೆ ಮೊದಲು ಮಾಲಾಧಾರಿಗಳು ಮನೆ ಮನೆಗೆ ತೆರಳಿ ಪಡಿಯಕ್ಕಿ ಭಿಕ್ಷೆ ಸ್ವೀಕರಿಸಲಾಯಿತು.
ಮಾಲಾಧಾರಿಗಳಿಗೆ ಪಡಿನೀಡಿ ಹರಸಿದವರೆಲ್ಲರಿಗೂ ಶ್ರೀ ಗುರುದತ್ತರ ಅನುಗ್ರಹ ದೊರಕಲಿ ಎಂದು ಪ್ರಾರ್ಥಿಸಲಾಯಿತು. pic.twitter.com/NsAaMUCBO1
— C T Ravi ???????? ಸಿ ಟಿ ರವಿ (@CTRavi_BJP) December 18, 2021
Advertisement
ಅರಾಜಕಾತವಾದಿಗಳ ಕುಮ್ಮಕ್ಕಿಗೆ ನಾವ್ಯಾರು ಬಲಿ ಆಗಬಾರದು, ಬಲಿಯಾಗದೆ ನಾವು ಸೌಹಾರ್ದತೆ, ಶಾಂತಿಯನ್ನ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ಇದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಲಕ್ಷಾಂತರ ಜನ ಮರಾಠಿಗರು ಇದ್ದಾರೆ. ನಮ್ಮೆಲ್ಲರ ಭಾವನೆ ರಾಷ್ಟ್ರೀಯತೆಯ ಹಾಸುಹೊಕ್ಕಾಗಿದೆ. ಅದಕ್ಕೆ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವುದಕ್ಕೆ ಕೆಲವರು ಷಡ್ಯಂತ್ರವನ್ನು ನಡೆಸುತ್ತಾರೆ. ಆ ಷಡ್ಯಂತ್ರಕ್ಕೆ ಅವಕಾಶವನ್ನು ಮಾಡಿಕೊಡಬಾರದು ಎಂಬ ವಿನಂತಿಯನ್ನು ಎರಡು ರಾಜ್ಯದ ಎರಡು ಸಮುದಾಯದ ಜನರಿಗೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
Advertisement
Advertisement