ವಯನಾಡಿಗೆ 100 ಮನೆ – ರಾಜಕೀಯ ಗುಲಾಮಗಿರಿಯ ಸಂಕೇತ: ಸಿಎಂ ವಿರುದ್ಧ ಸಿ.ಟಿ.ರವಿ ಕಿಡಿ

Public TV
1 Min Read
ct ravi bengaluru

ಚಿಕ್ಕಮಗಳೂರು: ಕೇರಳದ ವಯನಾಡಿಗೆ (Wayanad) 100 ಮನೆಗಳನ್ನು ನೀಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯನವರ (Siddaramaiah) ನಡೆ, ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ಮಾಜಿ ಸಚಿವ ಸಿ.ಟಿ. ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

ನಗರದ ಬೋಳರಾಮೇಶ್ವರ ದೇಗುಲದ ಬಳಿ ದತ್ತಜಯಂತಿಯ ಮೊದಲ ದಿನದ ಅನುಸೂಯ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯನವರು ಕೇರಳದ ವಯನಾಡಿನಲ್ಲಿ 100 ಮನೆ ಕಟ್ಟಿಸಿ ಕೊಡುತ್ತೇವೆ ಎಂದು ಪತ್ರ ಬರೆದಿರುವ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇಡೀ ಅಖಂಡ ಭಾರತ ಒಂದು. ಇಡೀ ವಿಶ್ವವೇ ಒಂದು ಮನೆ ಎಂಬ ಉದಾತ್ತ ಮನೋಭಾವನೆ ಹೊಂದಿರುವವರು ನಾವು. ಅಕ್ಕಪಕ್ಕದವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ಕ್ಷೇತ್ರ ಎಂದು ಜಿಲ್ಲೆಗೆ ಮಾತ್ರ ಈ ರೀತಿ ಮನೆ ನೀಡಲು ಮುಂದಾಗಿರುವುದು ರಾಜಕೀಯ ಗುಲಾಮಗಿರಿಯ ಸಂಕೇತವಾಗಿದೆ ಎಂದು ಅವರು ಕುಟುಕಿದ್ದಾರೆ.

ರಾಜ್ಯದ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಇಲ್ಲಿಯ ಸಂತ್ರಸ್ತರು ಬೀದಿಯಲ್ಲಿದ್ದಾರೆ. ಇಲ್ಲಿಯವರನ್ನು ಬಿಟ್ಟು ಅಲ್ಲಿಯವರಿಗೆ ಸಹಾಯ ಮಾಡುವುದು ರಾಜಕೀಯದ ಗುಲಾಮಗಿರಿ.‌ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸದೆ, ಕನ್ನಡಿಗರ ತೆರಿಗೆ ಹಣವನ್ನು ಅಲ್ಲಿ ವಿನಿಯೋಗಿಸುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯದ ಜನರ ಸಂಕಷ್ಟಗಳನ್ನ ಕಡೆಗಣಿಸಿ ಖರ್ಚು ಮಾಡುವುದು ಸೂಕ್ತವಾದ ನಡವಳಿಕೆ ಅಲ್ಲ ಎಂದಿದ್ದಾರೆ.

Share This Article