ಬೆಂಗಳೂರು: ಕಾಂಗ್ರೆಸ್ (Congress) ಅಧಿಕಾರ ಮತ್ತು ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ ಎಂದು ಬಿಜೆಪಿ (BJP) ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (C.T Ravi) ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಾತನಾಡಿದರು. ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಭೀಭತ್ಸ ಕೃತ್ಯ ನಡೆದು ತಣ್ಣಗಾಗಿತ್ತು. ಆಗ ಕೃತ್ಯ ಎಸಗಿದಾತ ಮಾನಸಿಕ ಅಸ್ವಸ್ಥ ಎಂದಿದ್ದರು. ಅದರ ನಂತರ ಭಟ್ಕಳದಲ್ಲಿ ಪ್ರಕರಣ ಆಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು, ಹೊಸನಗರ, ಬೆಳಗಾವಿಯಲ್ಲಿ ಇಂಥ ಘಟನೆಗಳಾಗಿವೆ. ಅಂದರೆ ಹಸುವಿನ ಕೆಚ್ಚಲು ಕತ್ತರಿಸುವ ಇಷ್ಟೊಂದು ಮಾನಸಿಕ ಅಸ್ವಸ್ಥರು ಯಾಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹುಟ್ಟಿಕೊಂಡರು ಎಂದು ಕೇಳಿದರು. ಇದನ್ನೂ ಓದಿ: ಶಿವಮೊಗ್ಗ | ಎರಡೇ ದಿನದಲ್ಲಿ ಹೃದಯಾಘಾತಕ್ಕೆ ನಾಲ್ವರು ಬಲಿ
ಹುಣ್ಣಿಮೆ ಬಂದಾಗ ಕೆಲವರಿಗೆ ಹುಚ್ಚು ಕೆದರುತ್ತಂತೆ. ಕಾಂಗ್ರೆಸ್ ಬಂದಾಗ ಈ ಹುಚ್ಚು ಹೆಚ್ಚಾಗುತ್ತದೆಯೇ? ಎಂದ ಅವರು, ಇದು ಪ್ರತ್ಯೇಕ ಘಟನೆ ಅಲ್ಲ; ಗೋವನ್ನು ದೇವರೆಂದು ಪೂಜಿಸುವ ಸಂಸ್ಕೃತಿಯನ್ನು ವಿರೋಧಿಸುವ ವಿಕೃತಿ ಇರುವವರು ಇಂಥ ಕೆಲಸ ಮಾಡುತ್ತಿದ್ದಾರೆ. ಸಕಲ ಜೀವಿಗಳಿಗೂ ಲೇಸನ್ನೇ ಬಯಸು ಎಂಬ ಬಸವಣ್ಣನವರ ತತ್ವವನ್ನು ವಿರೋಧಿಸುವ ಮಾನಸಿಕತೆ ಇದರ ಹಿಂದಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ನದಿಗೆ ಉರುಳಿದ ಕಾರು – ಮಹಿಳೆ ದುರ್ಮರಣ