ಬೆಂಗಳೂರು: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ (RamLalla Pran Pratishtha) ದಿನ ಸರ್ಕಾರಿ ರಜೆ ಕೊಡಲು ಇಷ್ಟು ದಿನ ಮೀನಾಮೇಷ ಎಣಿಸುವುದೇ ತಪ್ಪು, ರಜೆ ಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ? ಎಂದು ಮಾಜಿ ಸಚಿವ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಸರ್ಕಾರ ರಜೆ ಘೋಷಣೆ ಮಾಡಬೇಕು. ಇದೇ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ಕಾಂಗ್ರೆಸ್‍ಗೆ (Congress) ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‍ನ ನಿಲುವನ್ನ ವಿರೋಧಿಸಿ ಅವರು ರಾಜೀನಾಮೆ ನೀಡಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲಾ ವಿಗ್ರಹ, ಸಾಕ್ಷಾತ್ ರಾಮನಂತೆ ಇದೆ: ವಿದ್ಯಾವಲ್ಲಭ ತೀರ್ಥ ಶ್ರೀ
Advertisement
ರಾವಣನ ಸಹೋದರ ವಿಭೀಷಣ ರಾವಣನ ದುರ್ನಡತೆ ವಿರೋಧಿಸಿ ರಾಮನ ಪರ ಬಂದ. ಅದೇ ರೀತಿ ಕಾಂಗ್ರೆಸ್‍ನಲ್ಲಿ ರಾಮಮಂದಿರ ವಿಚಾರವಾಗಿ ಬೇರೆ ಬೇರೆ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ವಿಭೀಷಣನ ಮನಸ್ಥಿತಿಯ ಕಾಂಗ್ರೆಸ್‍ನವರು ಪಕ್ಷ ತೊರೆದು ಬರುವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರ, ಗೋಧ್ರಾ ರೀತಿಯ ಘಟನೆ ಆಗಬಹುದು ಎಂಬ ಹೇಳಿಕೆ ಬಗ್ಗೆ ಅವರು ಪೊಲಿಸರಿಗೆ ಮಾಹಿತಿ ನೀಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆಯ ಬಗ್ಗೆ ಮಾಹಿತಿ ನೀಡಬೇಕು. ನಾಳೆ ಈ ರೀತಿಯ ಘಟನೆ ನಡೆದರೆ, ಆಗ ನಾನು ಮುಂಚೆಯೇ ಹೇಳಿಕೆ ನೀಡಿದ್ದೆ, ನನ್ನ ಬಳಿ ಮಾಹಿತಿ ಕೇಳಲಿಲ್ಲ ಎಂದು ಹೇಳಬಹುದು. ಹೀಗಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಇನ್ನೂ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ಒತ್ತಡ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಹರಿಪ್ರಸಾದ್‍ಗೆ ಹೇಳಿ ಹೇಳಿಕೆ ಕೊಡಿಸಿದ್ರಾ? ಅಥವಾ ಎಐಸಿಸಿ ಪ್ರಚೋದನೇನಾ? ಅವರು ಎಐಸಿಸಿ ಜನರಲ್ ಸೆಕ್ರೆಟರಿ ಆಗಿದ್ದವರು. ಅಲ್ಲದೇ ಪರಿಷತ್ ವಿಪಕ್ಷ ನಾಯಕರಾಗಿದ್ದವರು, ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರು ಹಾದಿಬೀದಿಯಲ್ಲಿ ಹೋಗುವವರಲ್ಲ. ಅಂಥವರು ಈ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಹರಿಪ್ರಸಾದ್ ಅವರು ಯಾರ ಸಂಪರ್ಕದಿಂದ ಈ ಹೇಳಿಕೆ ನೀಡಿದ್ದಾರೆ? ಜೈಶ್-ಎ-ಮೊಹಮ್ಮದ್ ಸಂಪರ್ಕನಾ? ತಾಲಿಬಾನ್ ಸಂಪರ್ಕನಾ? ದಾವೂದ್ ಇಬ್ರಾಹಿಂ ಸಂಪರ್ಕನಾ? ಯಾರ ಸಂಪರ್ಕದಿಂದ ಈ ಹೇಳಿಕೆ ನೀಡಿದ್ದಾರೆ? ರಾಜ್ಯಪಾಲರು ಸಾವಿಂಧಾನಿಕ ಹುದ್ದೆ, ಅದನ್ನ ಮೀರಿ ಅವರು ಕೆಲಸ ಮಾಡಲ್ಲ. ನಾಳೆ ಈ ರೀತಿಯ ಘಟನೆ ನಡೆದ್ರೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಫಿಯಲ್ಲಿ ಅರಳಿದ ರಾಮಮಂದಿರ; ಕೇಕ್‌ನಲ್ಲಿ ಮೂಡಿಬಂದ ಶ್ರೀರಾಮಚಂದ್ರ