ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಕೆಲ ಸಚಿವರು ಹಾಗೂ ಶಾಸಕರೂ ಕ್ಷೇತ್ರದಲ್ಲೇ ಇಲ್ಲ. ಈ ಮಧ್ಯೆ ಕ್ಷೇತ್ರದ ಅಭಿವೃದ್ಧಿ ಜೊತೆ, ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ಜೊತೆ ಸಭೆ ನಡೆಸ್ತಿರೋ ಚಿಕ್ಕಮಗಳೂರು ಉಸ್ತುವಾರಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ ರವಿ ಬಿಡುವಿನ ವೇಳೆಯಲ್ಲಿ ಅಪ್ಪಟ ರೈತರಾಗಿದ್ದಾರೆ.
Advertisement
ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ಟ್ರ್ಯಾಕ್ಟರ್ ಏರಿ ಸಿಟಿ ರವಿ ಅವರು 1 ಗಂಟೆಗಳ ಕಾಲ ಭೂಮಿಯನ್ನ ಹದ ಮಾಡಿದ್ದಾರೆ. ಭಾನುವಾರ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಭೂಮಿ ಕೂಡ ಹಸಿಯಾಗಿರುವುದರಿಂದ ತಾವೇ ಟ್ರ್ಯಾಕ್ಟರ್ ಏರಿ ಭೂಮಿಯನ್ನ ಹದ ಮಾಡುವ ಮೂಲಕ ಸಚಿವರು ಉಳುಮೆ ಮಾಡಿದ್ದಾರೆ.
Advertisement
Advertisement
ಈವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆಗಾಗಾ ಅಧಿಕಾರಿಗಳ ಜೊತೆ ಸಭೆ ನಡೆಸ್ತಿರೋ ಸಿ.ಟಿ ರವಿ ಅವರು ನಗರದ ನಿರಾಶ್ರಿತರು ಹಾಗೂ ಬಡವರಿಗೆ ಆಹಾರದ ಸಾಮಗ್ರಿ ಕೂಡ ವಿತರಿಸಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿಗೂ ಭೇಟಿ ನೀಡಿ, ಕೊರೊನಾ ನಿಯಂತ್ರಣಕ್ಕೆ ಹಾಗೂ ಈ ಮಹಾಮಾರಿ ಜಿಲ್ಲೆಗೆ ಬಾರದಂತೆ ಸೂಕ್ತ ಕ್ರಮಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.