ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಅಭಿವೃದ್ಧಿ ಪರ ಯೋಜನೆಗಳನ್ನು ನೀಡಿದ್ದಾರೆ. ಆದರೆ ಅವರು ಎಂದಿಗೂ ನಾನೇ ಈ ಯೋಜನೆಯನ್ನು ನೀಡಿದ್ದು ಎಂದು ಹೇಳಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.
ನಗರದ ಎಐಟಿ ಕಾಲೇಜು ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ನಡೆದ ಜಿಲ್ಲೆಯ ವಿವಿಧ ಇಲಾಖೆಯ ಯೋಜನೆ ಮತ್ತು ಅಭಿವೃದ್ಧಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
Advertisement
Advertisement
ಒಂದ್ ಕಾಲ ಇತ್ತು. ಆಗ ಒಬ್ಬರು ಮಾಜಿ ಮುಖ್ಯಮಂತ್ರಿ ಅವರು ನಾನೇ ಈ ಯೋಜನೆಯನ್ನು ತಂದಿಇದ್ದೇನೆ. ನಾನೇ ಅದನ್ನು ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ತುಂಬಿದ ಕೊಡ ಯಾವತ್ತಿದ್ದರೂ ತುಳುಕುವುದಿಲ್ಲ. ಅಧರ್ಂಬರ್ಧ ತುಂಬಿದ ಕೊಡಗಳೇ ತುಳುಕುವುದು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಉಪ್ಪಿನ ಕಾರ್ಖಾನೆಯಲ್ಲಿ ಗೋಡೆ ಕುಸಿತ- 12 ಕಾರ್ಮಿಕರ ದುರ್ಮರಣ
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಎರಡೂವರೆ ವರ್ಷದಲ್ಲಿ 84 ಕೋಟಿ ಜನರಿಗೆ ಉಚಿತ ಅಕ್ಕಿಯನ್ನು ನೀಡಿದ್ದಾರೆ. ಈ ಬಗ್ಗೆ ಮೋದಿ ಅವರು ನಾನೇ ನೀಡಿದ್ದೇನೆ ಎಂದು ಎಂದು ಹೇಳಿರಲಿಲ್ಲ. ಎಂದರು.
Advertisement
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ 90% ಹಣ ನೀಡುತ್ತಿತ್ತು. ಅದರಲ್ಲಿ 10% ಮಾತ್ರ ರಾಜ್ಯ ಸರ್ಕಾರದ್ದು. 32 ರೂ.ನಲ್ಲಿ 29 ರೂ. ಹಣವನ್ನು ಕೇಂದ್ರವೇ ಕೊಡುತ್ತಿತ್ತು. 3 ರೂ. ಹಣವನ್ನು ಮಾತ್ರ ರಾಜ್ಯ ಸರ್ಕಾರ ಹಾಕುತ್ತಿತ್ತು. 29 ರೂ. ಹಣ ನೀಡಿದ ಮೋದಿ ಎಂದಾದರೂ ನಾನೇ ನೀಡಿದ್ದೇನೆ ಎಂದು ಹೇಳಿದ್ದಾರೆ ಎಂದು ಸಿದ್ದು ವಿರುದ್ಧ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರು ಪೊಲೀಸರ ವಶಕ್ಕೆ