ನವದೆಹಲಿ: ಸಿದ್ದರಾಮಯ್ಯ ಪತ್ನಿ ಪಾರ್ವತಿ (Parvathi Siddaramaiah) ಮುಡಾ ಸೈಟ್‌ಗಳನ್ನು (MUDA Site) ವಾಪಾಸ್ ಕೊಟ್ಟಿರುವುದು ಊರು ಕೊಳ್ಳೆಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ ಆಗಿದೆ ಎಂದು ಬಿಜೆಪಿ ನಾಯಕ, ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯನವರ (Siddaramaiah) ಪ್ರಾಮಾಣಿಕ ನಿರ್ಧಾರ ಅಲ್ಲ. ಸಂವಿಧಾನಕ್ಕಿಂತ ನಾನೇ ಮೇಲು ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರು. ಅವರು ಪ್ರಾಮಾಣಿಕವಾಗಿದ್ದರೆ ಮೊದಲೇ ಸೈಟ್ ವಾಪಸ್ ಕೊಡಬೇಕಿತ್ತು. ಆರಂಭದಲ್ಲಿ ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಅಂತಾ ಹೇಳುತ್ತಿದ್ದರು. ದೊಡ್ಡ ವಕೀಲರನ್ನು ಕರೆಸಿ ಬ್ಯಾಡ್ ಕೇಸ್‌ನ ವಾದ ಮಾಡಿದರು. ಇ.ಡಿ ಪ್ರವೇಶ ಮಾಡಿದ ಮೇಲೆ ನಿವೇಶನ ವಾಪಸ್ ಕೊಡುವ ನಿರ್ಧಾರ ಮಾಡಿದರು ಎಂದು ಕಿಡಿ ಕಾರಿದರು. ಇದನ್ನೂ ಓದಿ: ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ
Advertisement
Advertisement
ಮುಡಾದಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. ಜಿಲ್ಲಾಧಿಕಾರಿ ಪತ್ರ ಬರೆದಿರುವುದೇ ಇದಕ್ಕೆ ಉದಾಹರಣೆ. ಸಾವಿರಾರು ಕೋಟಿಗಳ ಅಕ್ರಮದ ತನಿಖೆ ನಡೆಯಬೇಕು. ಯರ‍್ಯಾರು ತಪ್ಪು ಮಾಡಿದ್ದಾರೆ ಎಲ್ಲವೂ ಬಹಿರಂಗವಾಗಬೇಕು. ಸರ್ಕಾರದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ
Advertisement
ಈ ಪ್ರಕರಣದಿಂದ ಸಿದ್ದರಾಮಯ್ಯನವರ ನಿಜಬಣ್ಣ ಬಯಲಾಗಿದೆ. ಬಿಎಸ್‌ವೈ ಸೈಟ್ ವಾಪಸ್ ಕೊಟ್ಟ ವಿಚಾರವಾಗಿ ಸಿದ್ದರಾಮಯ್ಯ ಹೇಗೆ ಮಾತನಾಡಿದರು. ಸಿದ್ದರಾಮಯ್ಯನವರಿಗೆ ಈಗ ನಿಮಗೆ 62 ಕೋಟಿ ಬೇಡವಾ? ಅವತ್ತು ಬೇಕು ಅಂದಿದ್ರು ಇವತ್ತು ಬೇಡವಾ? ಸಿಎಂ 62 ಕೋಟಿ ಕೇಳಿದ್ದು, ಸುಳ್ಳೋ ನಿಜವೋ? ಮೊಕದ್ದಮೆಯೂ ದಾಖಲಾಯಿತು, ಮರ್ಯಾದೆಯೂ ಹೋಯಿತು. ಹೋದ ಮರ್ಯಾದೆ ವಾಪಸ್ ಬರುವುದಿಲ್ಲ. ಅಕ್ರಮವಾಗಿ ನಿವೇಶನ ಪಡೆದ ಎಲ್ಲರ ಮೇಲೆ ತನಿಖೆ ಆಗಲಿ ಎಂದರು. ಇದನ್ನೂ ಓದಿ: ಪ್ರವಾಹ ಪೀಡಿತ ರಾಜ್ಯಗಳಿಗೆ ಗೃಹ ಇಲಾಖೆಯಿಂದ 5858.60 ಕೋಟಿ ಪರಿಹಾರ ಬಿಡುಗಡೆ
Advertisement
ಮುಡಾಕ್ಕಿಂತ ಅರ್ಕಾವತಿ ಹಗರಣ ದೊಡ್ಡದು. ಸಿದ್ದರಾಮಯ್ಯ ಅರ್ಕಾವತಿ ಹಗರಣದ ಹೊಣೆ ಹೊರಬೇಕು. ಯೋಜನಾ ಬದ್ಧವಾಗಿ ಮಾಡಿದ ಮೋಸ ಅರ್ಕಾವತಿ ಹಗರಣ. ಈಗ ಅರ್ಕಾವತಿ ವರದಿ ಮಂಡಿಸಲಿ. ವರದಿ ಮಂಡಿಸಲು ಸಿದ್ದರಾಮಯ್ಯನವರಿಗೆ ಭಯವೇ? ಹೇಗೆ ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳುತ್ತಾರೋ ಹಾಗೇ ಯಾವುದಕ್ಕೂ ಹೆದರಬೇಡಿ, ಅರ್ಕಾವತಿ ವರದಿ ಮಂಡಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ – ರಮೇಶ ಜಿಗಜಿಣಗಿ
ರಾಜ್ಯಪಾಲರಿಗೆ ಲಗಾಮು ಹಾಕುತ್ತೇವೆ ಎಂದು ಹೋದರು. ಸಂವಿಧಾನಕ್ಕೆ ಲಗಾಮು ಹಾಕೋಕೆ ಆಗುತ್ತಾ? ನೂರು ಜನರು ಬಂದರೂ ಆಗಲ್ಲ. ಬೆದರಿಕೆ ಎಲ್ಲಾ ಗೂಂಡಾ ರಾಜ್ಯದಲ್ಲಿ ನಡೆಯುತ್ತದೆ. ಪ್ರಜಾಪ್ರಭುತ್ವದಲ್ಲಿ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮದುವೆಗೆ ಒಪ್ಪದ ಸೀರಿಯಲ್ ನಟಿ – ಯುವಕ ನೇಣಿಗೆ ಶರಣು