– ಸಿ.ಟಿ ರವಿ ದೊಡ್ಡ ಡ್ರಾಮಾ ಮಾಸ್ಟರ್
ಚಿಕ್ಕಮಗಳೂರು: ಸಿ.ಟಿ ರವಿ (C.T Ravi) ಅವರನ್ನ ನ್ಯಾಷನಲ್ ಲೀಡರ್ ಎಂದು ತಿಳಿದುಕೊಂಡಿದ್ದೆ. ಆದರೆ ಅವರು ಸಿ.ಟಿ.ರವಿ ದೊಡ್ಡ ಡ್ರಾಮಾ ಮಾಸ್ಟರ್ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.
ಶೃಂಗೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿ.ಟಿ ರವಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಅವರ ಮಾತು-ವಿಚಾರ ನೋಡಿದ್ರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪೆÇ್ಪೀದು ಬೇಡ, ಆತ್ಮಸಾಕ್ಷಿ ಒಪ್ಪಿದ್ರೆ ಸಾಕು. ಹಾಗೆ ಮಾತಾಡಬೇಕು ಎಂದಿದ್ದಾರೆ.
100 ಜನ ಬಿಜೆಪಿ ನಾಯಕರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ. ಕ್ಷಮೆ ಕೇಳಿದ್ರೆ ಮುಗಿದುಹೋಯ್ತು. ಸುಳ್ಳಿಗೆ ಸುಳ್ಳು ಹೇಳಿಕೊಂಡು ಹೋದ್ರೆ ಕೊನೆ ಇಲ್ಲ. ಅವರ ಹತ್ತಿರ ತನಿಖಾ ತಂಡ ಇದೆ, ತನಿಖೆ ಮಾಡಿಸಿಕೊಳ್ಳಲಿ ಎಂದಿದ್ದಾರೆ.
ಸಿ.ಟಿ.ರವಿ ಬಂದೂಕಿನ ವಿಷಯ ಮಾತನಾಡಿದ್ದಾರೆ. ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಬೇಸಿಕ್ ಕಾಮನ್ ಸೆನ್ಸ್ ಇರಬೇಕು, ಪೆÇಲೀಸರು ಏನು ಮಾಡಬೇಕು ಅದನ್ನು ಮಾಡುತ್ತಾರೆ. ಗೌಪ್ಯ ಯಾವ ರೀತಿ ಕಾಪಾಡಬೇಕು. ಅವರ ಕೆಲಸ ಅವರು ಮಾಡ್ತಾರೆ. ನಾವು ಹಸ್ತಕ್ಷೇಪ ಮಾಡಲ್ಲ. ನಕ್ಸಲರನ್ನ ಶರಣಾಗತಿ ಮಾಡ್ಸಿದ್ದಾರೆ, ಅದಕ್ಕೆ ಖುಷಿ ಪಡಬೇಕು. ಮೊಸರಲ್ಲಿ ಕಲ್ಲು ಹುಡುಕೋದೇ ಆಯ್ತು ಅವರದ್ದು ಎಂದು ಕಿಡಿಕಾರಿದ್ದಾರೆ.