ನವದೆಹಲಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಮೇಲೆ ಸುಳ್ಳಿನ ದೆವ್ವ ಬಂದಿದೆ. 2023 ರಲ್ಲಿ ಮತ್ತೊಮ್ಮೆ ಸೋಲಿಸುವ ಮೂಲಕ ಅವರಿಗೆ ಹಿಡಿದಿರುವ ದೆವ್ವವನ್ನು ಜನರೇ ಬಿಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯ ಮಾಡಿದ್ದಾರೆ.
ಮೇಕೆದಾಟು ಯೋಜನೆಗೆ ಸಿ.ಟಿ ರವಿ ವಿರೋಧಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಣ್ಣಾಮಲೈ ಕಾರಣಕ್ಕೆ ಯೋಜನೆ ನಿಂತಿದೆ ಎನ್ನುವುದು ಸಿದ್ದರಾಮಯ್ಯ ವರ್ಚಸ್ಸಿಗೆ ಶೋಭೆ ತರವುದಲ್ಲ ಎಂದು ಹೇಳಿದರು.
Advertisement
Advertisement
ಅಣ್ಣಾಮಲೈ ರಾಜಕೀಯಕ್ಕೆ ಬಂದು ವರ್ಷವಾಗಿದೆ. ನಾನು ತಮಿಳುನಾಡು ಉಸ್ತುವಾರಿಯಾದ ತಕ್ಷಣ ತಮಿಳುನಾಡಿಗೆ ಬೆಂಬಲಿಸುವುದಿಲ್ಲ. ನಾನು ಗೋವಾ, ಮಹಾರಾಷ್ಟ್ರಕ್ಕೂ ಉಸ್ತುವಾರಿಯಾಗಿದ್ದೇನೆ. ಹಾಗಂದ ಮಾತ್ರಕ್ಕೆ ಬೆಳಗಾವಿ ಗಡಿ ವಿವಾದಕ್ಕೂ ಬೆಂಬಲಿಸಲು ಸಾಧ್ಯವಿಲ್ಲ, ನಾನು ಮೊದಲು ಕನ್ನಡಿಗ, ಸದಾ ಕನ್ನಡದ ಪರ ಎಂದರು.
Advertisement
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಮಿಳುನಾಡು ಉಸ್ತುವಾರಿಯಾಗಿದ್ದಾರೆ. ಹಾಗಾದ್ರೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗಾಗಿ ಯೋಜನೆ ವಿರೋಧಿಸುತ್ತಿದ್ದಾರೇ ಎಂದು ಮರು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಜನವರಿ 25ಕ್ಕೆ ಸುಪ್ರೀಂಕೋರ್ಟ್‍ನಲ್ಲಿ ಮೇಕೆದಾಟು ಅರ್ಜಿ ವಿಚಾರಣೆ
Advertisement
ತಾವು ಅಧಿಕಾರದಲ್ಲಿದ್ದಾಗ ಮೇಕೆದಾಟಿಗಾಗಿ ಏನೂ ಮಾಡಿಲ್ಲ. ನಮ್ಮ ಸರ್ಕಾರ ಯೋಜನೆ ಜಾರಿಗೆ ಪಣ ತೊಟ್ಟಿದೆ. ಎಷ್ಟೇ ತೊಡಕು ಬಂದರೂ ಯೋಜನೆ ಪ್ರಾರಂಭಿಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇದರಿಂದ ಗಲಿಬಿಲಿಯಾಗಿರುವ ಕಾಂಗ್ರೆಸ್ ಈಗ ಯಾತ್ರೆ ಮಾಡಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.
ಸಿಟಿ ರವಿ ಲೂಟಿ ರವಿ ಎಂದು ಸಿದ್ದರಾಮಯ್ಯ ಆಗ್ಗಾಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಸಿದ್ದರಾಮಯ್ಯ ಅವರು ನ್ಯಾ. ಕೆಂಪಣ್ಣ ಆಯೋಗದ ವರದಿ ಬಗ್ಗೆ ಮಾತನಾಡಬೇಕು ಎಂದು ಸವಾಲು ಹಾಕಿದರು. ನ್ಯಾ.ಕೆಂಪಣ್ಣ ಆಯೋಗದ ವರದಿಯಲ್ಲಿ ಯಾರ್ಯಾರ ವಿರುದ್ಧ ಏನೇನಿದೆ ಅನ್ನುವುದು ಸಿದ್ದರಾಮಯ್ಯಗೆ ಗೊತ್ತಿದೆ, ಅವರೇ ಆಯೋಗ ರಚನೆ ಮಾಡಿದ್ದು, ಈಗ ಅದರ ಅವರೇ ಬಗ್ಗೆ ಬಾಯಿ ಬಿಡಲಿ, ವರದಿ ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಕುಟುಕಿದರು.