ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ ಎಂದಿದ್ದ ಗೃಹ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಗೆ ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಸಿಟಿ ರವಿ ಅವರು, ‘ಅಯ್ಯೋ ಎಂ.ಬಿ.ಪಾಟೀಲ್ ರವರೆ, ನೀವು ಎಷ್ಟು ಅತ್ತು ಸುರಿದು ಮಂತ್ರಿ ಆದಿರಿ ಎಂದು ಜಗತ್ತಿಗೆ ತಿಳಿದಿದೆ. ಇನ್ನು ನೀವು ಶ್ರೀ ಬಿಎಸ್‍ವೈ ಬಿಜೆಪಿ ರವರನ್ನು ಮುಖ್ಯಮಂತ್ರಿ ಮಾಡುತ್ತೀರಾ? ನಿಮ್ಮ ನಾಯಕ ರಾಹುಲ್ ಗಾಂಧಿ ತರಹ ಫುಲ್ ಟೈಮ್ ಕಾಮಿಡಿ ಮಾಡಲು ಹೊರಟಿದ್ದೀರಾ? ಮೊದಲು ನಿಮ್ಮ ಪಕ್ಷದ ಲಿಂಗಾಯತ ನಾಯಕರಿಗೆ ಮಂತ್ರಿಗಿರಿ ಕೊಡಿಸಿ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ಸವಾಲು ಎಸೆದಿದ್ದಾರೆ.
Advertisement
ಅಯ್ಯೋ @MBPatil ರವರೆ, ನೀವು ಎಷ್ಟು ಅತ್ತು ಸುರಿದು ಮಂತ್ರಿ ಆದಿರಿ ಎಂದು ಜಗತ್ತಿಗೆ ತಿಳಿದಿದೆ. ಇನ್ನು ನೀವು ಶ್ರೀ @BSYBJP ರವರನ್ನು ಮುಖ್ಯಮಂತ್ರಿ ಮಾಡುತ್ತೀರಾ?
ನಿಮ್ಮ ನಾಯಕ ರಾಹುಲ್ ಗಾಂಧಿ ತರಹ full-time ಕಾಮಿಡಿ ಮಾಡಲು ಹೊರಟಿದ್ದೀರಾ? ಮೊದಲು ನಿಮ್ಮ ಪಕ್ಷದ ಲಿಂಗಾಯತ ನಾಯಕರಿಗೆ ಮಂತ್ರಿಗಿರಿ ಕೊಡಿಸಿ ನಿಮ್ಮ ಗೌರವ ಉಳಿಸಿಕೊಳ್ಳಿ. https://t.co/nk7idV2vqW
— C T Ravi ???????? ಸಿ ಟಿ ರವಿ (@CTRavi_BJP) June 5, 2019
Advertisement
ಅಂಗಡಿ ಬಗ್ಗೆ ಪಾಟೀಲ್ ಹೇಳಿದ್ದೇನು?
ಮಾಧ್ಯಮಗಳ ಜೊತೆ ವಿಜಯಪುರದಲ್ಲಿ ಮಾತನಾಡಿದ್ದ ಪಾಟೀಲ್ ಅವರು, ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿಗೆ ಮಾನದಂಡ ಬೇರೆ-ಬೇರೆಯಾಗಿದೆ. ಇಬ್ಬರು ನಾಲ್ಕು ಬಾರಿ ಗೆದ್ದು ಬಂದಿದ್ದು, ಅನುಭವ ಹೊಂದಿದ್ದಾರೆ. ಆದರೆ ಪ್ರಹ್ಲಾದ್ ಜೋಶಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದರೆ ಸುರೇಶ್ ಅಂಗಡಿಯವರು ರಾಜ್ಯ ಸಚಿವರು. ಇಬ್ಬರು ಒಂದೇ ಸಮಾನವಾಗಿದ್ದರೂ ವ್ಯತ್ಯಾಸ ಮಾಡಿದ್ದಾರೆ. ಈ ವಿಚಾರವನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
Advertisement
ಸುರೇಶ್ ಅಂಗಡಿಯವರಿಗೂ ಕ್ಯಾಬಿನೆಟ್ ದರ್ಜೆ ನೀಡಬೇಕಿತ್ತು. ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಇದು ಒಂದು ದೊಡ್ಡ ಅನ್ಯಾಯ. ಈ ಮೂಲಕ ಲಿಂಗಾಯತರಿಗೆ ಅಗೌರವ ತೋರಿಸಿದ್ದಾರೆ. ಪಾಪ ಸುರೇಶ್ ಅಂಗಡಿಯವರು ಕೇಂದ್ರದ ರಾಜ್ಯ ಸಚಿವರು. ಅದಕ್ಕಾಗಿ ಪ್ರಹ್ಲಾದ್ ಜೋಶಿ ಕಡೆಗೆ ಅಂಗಡಿ ನೋಡಬೇಕು. ಸ್ವಾಭಿಮಾನವಿದ್ದರೆ ಸುರೇಶ್ ಅಂಗಡಿ ಜಾಗದಲ್ಲಿ ನಾನು ಇದ್ದಿದ್ದರೆ ಸಚಿವ ಸ್ಥಾನ ತಿರಸ್ಕಾರ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು.
Advertisement
ಶ್ರೀಯುತ @CTRavi_BJP ಅವರೆ, ನಮ್ಮ ಯಡಿಯೂರಪ್ಪನವರ ಪರಿಸ್ಥಿತಿಯೂ ಅದೇ ರೀತಿ ಆಗಬಹುದೇನೊ ಅನ್ನಿಸುತ್ತಿದೆ…???? https://t.co/K8QWDB5Fwb
— M B Patil (@MBPatil) June 3, 2019
ಸಿಟಿ ರವಿ ಹೇಳಿದ್ದು ಏನು?
ಬಿಜೆಪಿ ಪಕ್ಷ ಲಿಂಗಾಯುತ ಸಮುದಾಯದ ನಾಯಕರರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ಧವಿದೆ. ಲಿಂಗಾಯುತ ಸಮುದಾಯದ ಮೇಲೆ ಕಾಳಜಿ ಇರುವ ನೀವು ಏಕೆ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಲಿಂಗಾಯುತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬಾರದು. ನಿಮ್ಮ ಕೈಯಲ್ಲಿ ಇಲ್ಲದ ಭವಿಷ್ಯ ಹೇಳುವುದನ್ನು ಬಿಟ್ಟು ವರ್ತಮಾನದ ಬಗ್ಗೆ ಮಾತನಾಡಿ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಲಿಂಗಾಯತ ಪರ ಕಾಳಜಿಯನ್ನು ಈಗ ತೋರಿಸಿ ಎಂದು ಬರೆದು ಕಾಲೆಳೆದಿದ್ದರು.
What a joke!!!!
ಒಂದು ದೀಪದ ಹುಳ ಸೂರ್ಯನಿಗೆ ಬೆಳಕು ಕೊಡೋಕೆ ಸಹಾಯ ಮಾಡ್ತೀನಿ ಅಂದ ಹಾಗಿದೆ. @BSYBJP @BJP4Karnataka@BJPKarITCell https://t.co/DD1fkDETmd
— K S Eshwarappa (@ikseshwarappa) June 5, 2019
ಈಶ್ವರಪ್ಪ ಹೇಳಿದ್ದು ಏನು?
ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ ಎಂಬ ಎಂಬಿಪಿ ಹೇಳಿಕೆಗೆ ಈಶ್ವರಪ್ಪ ವಾಟ್ ಎ ಜೋಕ್ ಒಂದು ದೀಪದ ಹುಳ ಸೂರ್ಯನಿಗೆ ಬೆಳಕು ಕೊಡೋಕೆ ಸಹಾಯ ಮಾಡ್ತೀನಿ ಎಂದು ಹೇಳಿದಂತಿದೆ ಎಂದು ಬರೆದು ಟಾಂಗ್ ಕೊಟ್ಟಿದ್ದಾರೆ.