ಬೆಂಗಳೂರು: ಹಾವು ಮುಂಗುಸಿಯಂತೆ ಸದಾ ಕಿತ್ತಾಡುತ್ತಿದ್ದವರು ಈಗ ಮೋದಿ ಭಯಕ್ಕಾಗಿ ಒಂದಾಗಿದ್ದಾರೆ. ಸ್ವಲ್ಪ ದಿನ ಅವರ ಗುಣದಂತೆ ಕಿತ್ತಾಡಿಕೊಂಡೇ ವಾಪಸ್ ಬರುತ್ತಾರೆ ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಮತ್ತೆ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಟಿ ರವಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಗ್ಗೆ ವ್ಯಂಗ್ಯ ವಾಡಿದರು.
Advertisement
Advertisement
ಹಿಂದೆ ದೇವೇಗೌಡರು ಇಂತ ನೀಚ ಮುಖ್ಯಮಂತ್ರಿಯನ್ನ ನೋಡಿಲ್ಲ ಎಂದಿದ್ದರು. ಅಲ್ಲದೇ ಇಂತವರನ್ನ ಬೆಳೆಸಿ ತಪ್ಪು ಮಾಡಿದೆ ಎಂದು ಆರೋಪಿಸಿದ್ದರು. ಆದರೆ ಈಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾವು ಮುಂಗುಸಿ ಗುಣ ಸದಾ ಕಿತ್ತಾಡೋದು. ಈಗ ಕಿತ್ತಾಡುವವರು ಮೋದಿ ಭಯಕ್ಕಾಗಿ ಒಂದಾಗಿದ್ದಾರೆ. ಸ್ವಲ್ಪ ದಿನ ಅವರ ಗುಣದಂತೆ ಕಿತ್ತಾಡಿಕೊಂಡೇ ವಾಪಸ್ ಬರ್ತಾರೆ ಎಂದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ವಿರುದ್ಧ ಗರಂ ಆದ ಗುರು ಶಿಷ್ಯರು!
Advertisement
ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಮೋದಿ ಅವರ ಬೆಳೆದು ಬಂದ ಹಾದಿ ಕಂಡು ಈ ನಿರ್ಧಾರ ಮಾಡಿದ್ದೇವೆ. ಏಕೆಂದರೆ ಯಾವುದೇ ಕುಟುಂಬ, ಹಣ, ಜಾತಿ ಬೆಂಬಲವಿಲ್ಲದ ವ್ಯಕ್ತಿ ಉನ್ನತ ಉದ್ದೇಶದಿಂದ ಪ್ರಧಾನಿಯಾಗಿದ್ದಾರೆ. ಅದ್ದರಿಂದಲೇ ಕೆಲ ಮಂದಿಗೆ ಅವರ ಮೇಲೆ ಭಾರಿ ಕೋಪವಿದೆ. ಆದರೆ ತಮ್ಮ ಆಡಳಿತವನ್ನೇ ಮಾದರಿಯಾಗಿ ಮಾಡಿ ದೇಶಕ್ಕೂ ಮಾದರಿ ಆಡಳಿತ ನೀಡಿದ್ದಾರೆ. ಅವರು ದೇಶದ ಘಟನೆಯನ್ನು ಎತ್ತಿ ಹಿಡಿದಿದ್ದಾರೆ. ದೇಶದ ಹೆಮ್ಮೆಯ ನಾಯಕತ್ವವನ್ನು ಮುಂದುವರಿಸಬೇಕಿದೆ. ಅದ್ದರಿಂದ ಮತ್ತೊಮ್ಮೆ ಮೋದಿ ಅವರಿಗೆ ಅಧಿಕಾರ ನೀಡೋಣ ಎಂದು ಮನವಿ ಮಾಡಿದರು.
Advertisement
ಬಳಿಕ ಮಾತನಾಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ, ನೆರೆ ಬಂದಾಗ ಹಾವು ಮುಂಗುಸಿ ಒಂದಾಗುತ್ತವೆ. ಆದರೆ ಪರಸ್ಪರ ಒಬ್ಬರಿಗೊಬ್ಬರು ನೋಡಿಕೊಳ್ಳಲ್ಲ. ಅವರ ಮನೆಯವರನ್ನೇ ನೋಡಿಕೊಳ್ಳೋಕೆ ಅವರಿಗೆ ಸಮಯ ಇಲ್ಲ. ಇನ್ನೂ ರಾಜ್ಯದ ಜನರನ್ನ ಹೇಗೆ ನೋಡಿಕೊಳುತ್ತಾರೆ ಎಂದು ಕುಟುಕಿದರು. ಇದನ್ನೂ ಓದಿ: 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv