DistrictsKarnatakaKoppalLatestLeading NewsMain Post

ಸಿ.ಟಿ ರವಿ ಏನು ಬ್ರಹ್ಮನಾ – ಕೈ ಶಾಸಕ ಅಮರೇಗೌಡ ಬಯ್ಯಾಪುರ ಗುಡುಗು

ಕೊಪ್ಪಳ: ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ಹಿಂದೂನೇ ಸಿ.ಟಿ ರವಿ (CT Ravi) ಒಬ್ನೇ ಹಿಂದೂ (Hindu) ಅಲ್ಲಾ ಎಂದು ಕೊಪ್ಪಳದಲ್ಲಿ ಕೈ ಶಾಸಕ ಅಮರೇಗೌಡ ಬಯ್ಯಾಪುರ (Amaregouda Patil Bayyapur) ಗುಡುಗಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಹತ್ಯೆಯಾಗಯಾಗುತ್ತೆ ಅನ್ನೋ ಸಿ.ಟಿ ರವಿ (CT Ravi) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಆಟೋದಲ್ಲಿ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಇಬ್ಬರ ಬಂಧನ

ಸಿ.ಟಿ ರವಿ ಏನು ಬ್ರಹ್ಮನಾ - ಕೈ ಶಾಸಕ ಅಮರೇಗೌಡ ಬಯ್ಯಾಪುರ ಗುಡುಗು

ಸಿ.ಟಿ.ರವಿ ಅಂತಹವರು ಬಿಜೆಪಿಯಲ್ಲಿ (BJP) ಬಹಳ ಜನ ಇದ್ದಾರೆ. ಅವರಿಗೆ ಬೇರೆ ಕೆಲಸವೇ ಇಲ್ಲ ಧರ್ಮದ ವಿಷಯ ತಂದು ಜನರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವುದೇ ಇಲ್ಲ. ಹಿಂದೂಗಳ ಹತ್ಯೆಯಾಗುತ್ತೆ ಅನ್ನೊದಕ್ಕೆ ಸಿ.ಟಿ.ರವಿ ಏನ್ ಬ್ರಹ್ಮನಾ? ಇವರ ಕಾಲದಲ್ಲಿ ಹಿಂದೂಗಳ ಹತ್ಯೆಯೇ ಆಗಿಲ್ವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ಅಧಿಕಾರಿಗಳಂತೆ ನಟಿಸಿ ಮೊಬೈಲ್ ಟವರ್‌ನ್ನೇ ಕದ್ದ ಖದೀಮರು

ನಾವು ಹಿಂದೂ ಅಲ್ವಾ? ಸಿದ್ದರಾಮಯ್ಯ, ಡಿಕೆಶಿ ಹಿಂದೂ ಅಲ್ವಾ? ಬಾಯಿ ಇದೆ ಬಂದಂಗೆ ಮಾತಡೋದಲ್ಲ. ದೇಶದಲ್ಲಿರೋ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣೋರು ನಾವು. ಇನ್ನಾದ್ರು ಅವರು ಅರಿತು ಮಾತನಾಡಲಿ. ಇಲ್ಲಾಂದ್ರೆ ನಾವು ಹಿಂದೂಗಳು ಅನ್ನೋದನ್ನ ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button