ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಅಸಂವಿಧಾನಿಕ ಪದ ಬಳಸಿದ ಆರೋಪದ ಮೇಲೆ ಬಂಧನವಾಗಿದ್ದ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿಗೆ (CT Ravi) ನ್ಯಾಯಾಲಯ ಜಾಮೀನು ನೀಡಿದೆ. ಈ ಬೆನ್ನಲ್ಲೇ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.
ಕಾರ್ಯಕರ್ತರು ಪಟಾಕಿ ಸಿಡಿಸಿ, ಹಾರ ಹಾಕಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದಾರೆ. ಸಿ.ಟಿ ರವಿ ಅವರನ್ನ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ಇದೇ ವೇಳೆ ಕೈ ಮುಗಿದು ಧನ್ಯವಾದ ಹೇಳಿರುವ ಸಿ.ಟಿ ರವಿಗೆ, ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಅಭಯ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ರವಿ, ನೀವೆಲ್ಲ ನನಗೆ ಧೈರ್ಯ ತುಂಬಿದ್ದೀರಿ, ಎಲ್ಲವನ್ನೂ ಮಾತನಾಡೋಣ, ತುಂಬಾ ಧನ್ಯವಾದ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ ಬಿಡುಗಡೆಗೆ ಕೋರ್ಟ್ ಆದೇಶ – ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
Advertisement
Advertisement
ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ ರವಿ ರೋಷಾಗ್ನಿ:
24 ಗಂಟೆ ಪೊಲೀಸರ ವಶದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೈಕೋರ್ಟ್ ಆದೇಶದಡಿ ಬಿಡುಗಡೆ ಆಗಿದ್ದೇ ತಡ ಚಿಕ್ಕಮಗಳೂರು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಡ್ರಮ್ ಸೆಟ್ ಶಬ್ಧಕ್ಕೆ ರಸ್ತೆ-ರಸ್ತೆಯಲ್ಲಿ ಕುಣಿದು-ಕುಪ್ಪಳಿಸಿ ಸಂಭ್ರಮಿಸಿದರು. ಸುಳ್ಳು ಕೇಸ್ ಸೋಲ್ತು… ಸತ್ಯ ಗೆಲ್ತು ಎಂದು ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ರು.
Advertisement
Advertisement
ಇತ್ತ ಬೇಲ್ ಸಿಕ್ಕ ಮರು ಕ್ಷಣವೇ ಎಂಎಲ್‌ಸಿ ಸಿ.ಟಿ.ರವಿ, ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿ.ಟಿ.ರವಿಗೆ ಬಿಗ್ ರಿಲೀಫ್ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಹೈಡ್ರಾಮಾ ಬಳಿಕ ಪೊಲೀಸರು ಎಂಎಲ್‌ಸಿ ಸಿ.ಟಿ.ರವಿರನ್ನ ಬಂಧಿಸಿದ್ದರು. ರಾತ್ರಿ ಇಡೀ ಸಿ.ಟಿ.ರವಿಯನ್ನ ಬೆಳಗಾವಿ ಜಿಲ್ಲೆಯಾದ್ಯಂತ ಸುತ್ತಾಡಿಸಿ ರಾತ್ರಿಪೂರ ಜಾಗರಣೆ ಮಾಡಿಸಿದ್ರು. ಈ ವೇಳೆ, ಸಿಟಿ ರವಿ ಪೊಲೀಸರು ನನ್ನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆಂದು ಕಿಡಿಕಾರಿದರು. ಬಳಿಕ ಬೆಳಗ್ಗೆ ಕೋರ್ಟ್‌ಗೆ ಹಾಜರಾದ ಸಿಟಿ ರವಿಗೆ ಬೇಲ್ ಸಿಕ್ಕಿತ್ತು. ಬೇಲ್ ಸಿಕ್ಕ ಬೆನ್ನಲ್ಲೇ ದಾವಣಗೆರೆಯ ಸರ್ಕೀಟ್ ಹೌಸ್‌ನಲ್ಲಿ ಸಿ.ಟಿ ರವಿ ಸುದ್ದಿಗೋಷ್ಠಿ ನಡೆಸಿದ್ರು. ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಸಾಥ್ ನೀಡಿದ್ರು.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ ಸತ್ಯಾಮೇವ ಜಯತೇ ಎಂದು ಹೇಳಿದ್ರು. ಪೊಲೀಸರು ಯಾವುದೇ ನೋಟಿಸ್ ಕೊಡದೆ ಬಂಧನ ಮಾಡಿದ್ದು, 4 ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮ 14 ಗಂಟೆಗೂ ಅಧಿಕ ಕಾಲ ನನ್ನನ್ನು ಪೊಲೀಸರು ಸುತ್ತಾಡಿಸಿ ಮಾನಸಿಕ ಹಿಂಸೆ ನೀಡಿದ್ರು ಅಂತ ಆರೋಪಿಸಿದ್ರು.
ಇನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ನೋಟೀನ್ ನೀಡದೆ ಶಾಸಕರನ್ನು ಬಂಧನ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ರು. ಬೆಳಗಾವಿಯಿಂದ ಸಿಟಿ ರವಿ ಬಿಟ್ಟಿದ್ದೇ ಹೆಚ್ಚು ಎನ್ನುವ ದಾಟಿಯಲ್ಲಿ ಡಿಕೆಶಿ ಹೇಳುತ್ತಾರೆ. ನಿಮ್ಮ ಗೂಂಡಾ ವರ್ತನೆ ಇಲ್ಲಿ ನಡೆಯೋದಿಲ್ಲ ಎಂದು ಎಚ್ಚರಿಕೆ ನೀಡಿದ್ರು.
ಈ ಮಧ್ಯೆ, ವಿಪಕ್ಷ ನಾಯಕರ ಆರ್.ಅಶೋಕ್ ಮಾತನಾಡಿ, ಸರ್ಕಾರದ ವಿರದ್ಧ ಹೋರಾಟಕ್ಕೆ ಸಭೆ ನಡೆಸೋದಾಗಿ ಹೇಳಿದ್ರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರವೇಶ ನೀಡದ ವಿಚಾರ ಪ್ರಸ್ತಾಪಿಸಿದ್ರು. ಅವನ್ಯಾರೋ ಪೊಲೀಸ್ ಕಮಿಷನರ್ ವ್ಯಾಪ್ತಿಗೆ ಬರದಿದ್ರೂ ನನ್ನನ್ನು ತಡೆದ್ರು ಅಂತ ಕಿಡಿಕಾರಿದ್ರು.