– ದತ್ತಜಯಂತಿ ಬ್ಯಾನರ್ ಕಿತ್ತ ಕಿಡಿಗೇಡಿಗಳು
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) 3 ದಿನಗಳ ಕಾಲ ದತ್ತಜಯಂತಿ (Dattajayanthi) ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದತ್ತಮಾಲಾಧಾರಿ ಸಿ.ಟಿ ರವಿಯವರು (CT Ravi) ಭಿಕ್ಷಾಟನೆ ಆರಂಭಿಸಿದ್ದಾರೆ.
ಹೌದು. ಸಿ.ಟಿ ರವಿಯವರು ಮನೆ-ಮನೆಗೆ ತೆರಳಿ ಪಡಿ ಸಂಗ್ರಹಿಸುತ್ತಿದ್ದಾರೆ. ಚಿಕ್ಕಮಗಳೂರು ನಗರದ ನಾರಾಯಣಪುರದಲ್ಲಿ 9 ಮನೆಯಲ್ಲಿ ಭಿಕ್ಷೆ ಬೇಡಿ ಪಡಿ ಸಂಗ್ರಹಿಸಿದ್ದಾರೆ. ಈ ವೇಳೆ ಸಿ.ಟಿ ರವಿಯವರಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳ ಸಾಥ್ ನೀಡಿದ್ದಾರೆ. ಸಿಟಿ ರವಿಯವರ ಪಡಿ ಸಂಗ್ರಹಲ್ಲಿದ್ದ ವಸ್ತುಗಳನ್ನ ಇರುಮುಡಿ ರೂಪದಲ್ಲಿ ಮಂಗಳವಾರ ದತ್ತಪೀಠಕ್ಕೆ ಹೊತ್ತೊಯ್ಯುತ್ತಾರೆ.
ಪಡಿಯಲ್ಲಿ ಏನೇನಿರುತ್ತೆ..?: ಅಕ್ಕಿ, ಬೇಳೆ,ಕಾಯಿ, ಬೆಲ್ಲ ಎಲೆ, ಅಡಿಕೆ ಇವಿಷ್ಟು ದತ್ತಜಯಂತಿಗೆ ನೀಡುವ ಪಡಿಯಲ್ಲಿರುತ್ತವೆ. ಇದನ್ನೂ ಓದಿ: ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮ ಸೇನೆ ಸಿದ್ಧತೆ- ಜಿಲ್ಲಾಡಳಿತದಿಂದ ನಿಷೇಧಾಜ್ಞೆ
ಬ್ಯಾನರ್ ಕಿತ್ತ ದುಷ್ಕರ್ಮಿಗಳು: ದತ್ತಜಯಂತಿಯ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಜಿಲ್ಲೆಯಾದ್ಯಂತ ಬ್ಯಾನರ್‍ಗಳನ್ನು ಹಾಕಲಾಗಿತ್ತು. ಆದರೆ ಚಿಕ್ಕಮಗಳೂರು ತಾಲೂಕಿನ ಬಸ್ಕಲ್ ಗ್ರಾಮದಲ್ಲಿ ಇಂದು ಬೆಳಗ್ಗಿನ ಜಾವ ಓಮ್ನಿಯಲ್ಲಿ ಬಂದ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ದತ್ತಜಯಂತಿ ಬ್ಯಾನರ್ ಕಿತ್ತು ಓಮ್ನಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.