ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕ ಸಿ.ಟಿ ರವಿ ಅವಹೇಳನಕಾರಿ ಪದ ಬಳಕೆ ಆರೋಪದ ಕೇಸ್ ಸಿಓಡಿಗೆ ನೀಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ರಾಜ್ಯಪಾಲರಿಗೆ ಸಿಟಿ ರವಿ ದೂರು ಕೊಟ್ಟಿರೋ ವಿಚಾರಚಾಗಿ ಪ್ರತಿಕ್ರಿಯಿಸಿದರು. ಸಿ.ಟಿ ರವಿ ರಾಜ್ಯಪಾಲರಿಗೆ ದೂರು ಕೊಡಲಿ. ಆ ಕೇಸನ್ನು CODಗೆ ಕೊಟ್ಟಿದ್ದೇವೆ. ಸಿ.ಟಿ ರವಿ ಅವಾಚ್ಯ ಪದ ಬಳಕೆ ಮಾಡಿದ್ದಾರಾ? ಇಲ್ಲವಾ? ಎಂಬುದು FSL ವರದಿ ಬರಲಿ, ಆಗ ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ.
Advertisement
Advertisement
ಮಹಿಳೆಗೆ ಅವಮಾನ ಆಗೋ ರೀತಿ ಮಾತಾಡಿದ್ದಾರೆ ಅನ್ನೋದು ಆರೋಪ. ಆರೋಪದ ಆಧಾರದಲ್ಲಿ ಸಿಟಿ ರವಿ ಮೇಲೆ FIR ದಾಖಲಾಗಿದೆ. COD ತನಿಖೆಗೆ ಆದೇಶ ಮಾಡಲಾಗಿದೆ ವರದಿ ಬರಲಿ ನೋಡೋಣ ಎಂದಿದ್ದಾರೆ.